ಡಾ.ಸಿ.ಕೆ.ಮೌಲ ಷರೀಫ್ ಫೌಂಡೇಷನ್ ವತಿಯಿಂದ ಮಹಿಳೆಯರಿಗೆ ಮತ್ತು ಪುರುಷರಿಗೆ ಬಟ್ಟೆ ವಿತರಣಾ ಕಾರ್ಯಕ್ರಮ
ದೇವರು ನಮಗೆ ಸಂಪತ್ತನ್ನು ಕೊಟ್ಟಾಗ ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ದೇವರು ಎಲ್ಲರಿಗೂ ಶ್ರೀಮಂತಿಕೆಯನ್ಬು ಕೊಟ್ಟಿರುವುದಿಲ್ಲ, ಶ್ರೀಮಂತರಾದವರು ಎಲ್ಲರೂ ಸಹಾಯ ಮಾಡುವ ಗುಣ ಹೊಂದಿರುವುದಿಲ್ಲ. ನಾವು ಎಷ್ಟೇ ಸಂಪಾದಿಸಿದರೂ ಸಹ ಬಡವ ರಿಗೆ, ಅಸಹಾಯ ಕರಿಗೆ ಸಹಾಯ ಮಾಡಬೇಕು. ಅದುವೇ ಮಾನವೀಯ ಧರ್ಮ ಎಂದರು.

ಹಬ್ಬಗಳು ದಾನ ಧರ್ಮದ ಸಂಕೇತವಾಗಿದ್ದು, ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೇ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಎಲ್ಲಾ ಬಡ ಕುಟುಂಬಗಳಿಗೆ ಬಟ್ಟೆ ವಿತರಣೆ ಮಾಡಲಾಗಿದೆ ಎಂದು ಡಾ. ಸಿ.ಕೆ. ಮೌಲ ಷರೀಫ್ ಫೌಂಡೇಷನ್ ನ ಸಂಸ್ಥಾಪಕ ಹಾಗೂ ವಕೀಲ ಡಾ. ಸಿ.ಕೆ. ಮೌಲ ಷರೀಫ್ ತಿಳಿಸಿದರು.

ಬಾಗೇಪಲ್ಲಿ: ಹಬ್ಬಗಳು ದಾನ ಧರ್ಮದ ಸಂಕೇತವಾಗಿದ್ದು, ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೇ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಎಲ್ಲಾ ಬಡ ಕುಟುಂಬಗಳಿಗೆ ಬಟ್ಟೆ ವಿತರಣೆ ಮಾಡಲಾಗಿದೆ ಎಂದು ಡಾ.ಸಿ.ಕೆ.ಮೌಲ ಷರೀಫ್ ಫೌಂಡೇಷನ್ ನ ಸಂಸ್ಥಾಪಕ ಹಾಗೂ ವಕೀಲ ಡಾ.ಸಿ.ಕೆ.ಮೌಲ ಷರೀಫ್ ತಿಳಿಸಿದರು. ತಾಲ್ಲೂಕಿನ ಜೂಲಪಾಳ್ಯ ಗ್ರಾಮದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಡಾ.ಸಿ.ಕೆ.ಮೌಲ ಷರೀಫ್ ಫೌಂಡೇಷನ್ ವತಿಯಿಂದ ಮಹಿಳೆ ಯರಿಗೆ ಮತ್ತು ಪುರುಷರಿಗೆ ಬಟ್ಟೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬಟ್ಟೆ ವಿತರಿಸಿ ಮಾತನಾಡಿದ ಅವರು ದೇವರು ನಮಗೆ ಸಂಪತ್ತನ್ನು ಕೊಟ್ಟಾಗ ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ದೇವರು ಎಲ್ಲರಿಗೂ ಶ್ರೀಮಂತಿಕೆಯನ್ಬು ಕೊಟ್ಟಿರುವುದಿಲ್ಲ, ಶ್ರೀಮಂತರಾದವರು ಎಲ್ಲರೂ ಸಹಾಯ ಮಾಡುವ ಗುಣ ಹೊಂದಿರುವುದಿಲ್ಲ. ನಾವು ಎಷ್ಟೇ ಸಂಪಾದಿಸಿದರೂ ಸಹ ಬಡವರಿಗೆ, ಅಸಹಾಯ ಕರಿಗೆ ಸಹಾಯ ಮಾಡಬೇಕು. ಅದುವೇ ಮಾನವೀಯ ಧರ್ಮ ಎಂದರು.
ಇದನ್ನೂ ಓದಿ: Chikkaballapur News: ಗ್ರಾಮದೇವತೆಗೆ ಅರ್ಧ ಕೆಜಿ ಬೆಳ್ಳಿ ಗಿಫ್ಟ್ ಕೊಟ್ಟ ಮಂಗಳಮುಖಿಯರು
ಈ ಬಾರಿ ಯುಗಾದಿ ಹಾಗೂ ರಂಜಾನ್ ಒಟ್ಟಿಗೆ ಆಚರಣೆ ಮಾಡಲಾಗಿದೆ. ಪ್ರತೀ ವರ್ಷದಂತೆ ಈ ವರ್ಷವೂ ಸಹ ಬಟ್ಟೆ ಮತ್ತು ದಿನಸಿ ಕಿಟ್ ನೀಡಲಾಗಿದೆ. ಸಹಾಯ ಮಾಡುವುದು ಇನ್ನೊಬ್ಬರಿಗೆ ಮಾದರಿಯಾಗಬೇಕು. ಇನ್ನೂ ಹಲವರು ಸಹಾಯ ಮಾಡಲಿ ಎಂಬ ಉದ್ದೇಶ.ಪ್ರತಿಯೊಬ್ಬ ಮುಸ್ಲಿಂ ಬಾಂಧವರಿಗೆ ರಂಜಾನ್ ಪವಿತ್ರ ಹಬ್ಬವಾದರೆ, ಹಿಂದೂ ಸಮುದಾಯದವರಿಗೆ ಯುಗಾದಿ ಪವಿತ್ರ ವಾದುದು. ಎಲ್ಲಾ ಧರ್ಮದವರೂ ಸಹ ಸಹೋದರರಂತೆ ಬಾಳಬೇಕು. ಯಾರೇ ಆಗಲಿ ಸಮು ದಾಯಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಯಾರು ಯಾವ ಸಮುದಾಯಲ್ಲಿ, ಎಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ. ಅದೆಲ್ಲಾ ದೇವರ ಇಚ್ಚೆ ಎಂದರು. ಉಳ್ಳವರು ಸ್ವ ಇಚ್ಛೆಯಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಡವರಿಗೆ ಸಹಾಯ ಮಾಡುವುದರೊಂದಿಗೆ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು.
ಈ ಸಂದರ್ಭದಲ್ಲಿ ಜೂಲಪಾಳ್ಯ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ಸಿ.ಕೆ. ಮಹಮ್ಮದ್ ಷರೀಫ್ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.