ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದ ದ್ವಿತೀಯ ವಿಶ್ವಕಪ್‌ ಗೆಲುವಿಗೆ ತುಂಬಿತು 14 ವರ್ಷ

India's 2011 World Cup anniversary: ಅಂದು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಧೋನಿ ಪಡೆ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸಿ ಕಪ್‌ ಎತ್ತಿತು. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ವಿಶ್ವಕಪ್‌ ಟ್ರೋಫಿಯ ಬರಗಾಲವನ್ನು ನೀಗಿಸಿತ್ತು.

ಭಾರತದ ದ್ವಿತೀಯ ವಿಶ್ವಕಪ್‌ ಗೆಲುವಿಗೆ ತುಂಬಿತು 14 ವರ್ಷ

Profile Abhilash BC Apr 2, 2025 9:32 AM

ಬೆಂಗಳೂರು: 2011ರ ಎಪ್ರಿಲ್‌ 2 ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ‌ ಕನಸೊಂದು ಸಾಕಾರಗೊಂಡ ದಿನ. ಮಹೇಂದ್ರ ಸಿಂಗ್ ಧೋನಿ(MS Dhoni) ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದು ಎರಡನೇ ಸಲ ಏಕದಿನ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಧೋನಿ ಪಡೆಯ ಈ ವಿಜಯೋತ್ಸವದ(India's 2011 World Cup anniversary) ಹರ್ಷಕ್ಕೆ ಇಂದಿಗೆ 14 ವರ್ಷ ತುಂಬಿದೆ.

ಅಂದು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಧೋನಿ ಪಡೆ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸಿ ಕಪ್‌ ಎತ್ತಿತು. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ವಿಶ್ವಕಪ್‌ ಟ್ರೋಫಿಯ ಬರಗಾಲವನ್ನು ನೀಗಿಸಿತ್ತು.



ಫೈನಲ್‌ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ 275 ರನ್‌ಗಳ ಸವಾಲಿನ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಎದುರಿಸಿತ್ತು. ಖಾತೆ ತೆರೆಯುವ ಮೊದಲೇ ಆರಂಭಿಕ ವೀರೇಂದ್ರ ಸೆಹ್ವಾಗ್‌ ಪೆವಿಲಿಯನ್‌ ಸೇರಿಕೊಂಡಿದ್ದರು. ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌(18) ಅವರೂ ಹೆಚ್ಚು ಹೊತ್ತು ನಿಂತಿರಲಿಲ್ಲ ತಂಡದ ಮೊತ್ತ 31 ಆಗುವಷ್ಟರಲ್ಲೇ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ಆಗ ಆಸರೆಯಾಗಿದ್ದುಗೌತಮ್‌ ಗಂಭೀರ್‌.

ತಾಳ್ಮೆಯಿಂದ ಇನಿಂಗ್ಸ್‌ ಕಟ್ಟಿದ್ದಅವರು ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾದರು. ವಿರಾಟ್‌ ಕೊಹ್ಲಿ(35) ಜೊತೆ ಸೇರಿ ಮೂರನೇ ವಿಕೆಟ್‌ಗೆ 83 ರನ್‌ ಹಾಗೂ ಧೋನಿ ಜೊತೆ 4ನೇ ವಿಕೆಟ್‌ಗೆ 109ರನ್‌ ಕೂಡಿಸಿದ್ದರು. 122 ಎಸೆತಗಳಲ್ಲಿ 9 ಬೌಂಡರಿ ಸಹಿತ 97 ರನ್‌ ಗಳಿಸಿ ತಿಸಾರ ಪೆರೆರಾ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರಾದರೂ, ಅಷ್ಟರಲ್ಲಿ ತಂಡ ಗೆಲುವಿನ ಸನಿಹಕ್ಕೆ ಬಂದು ನಿಂತಿತ್ತು. ಬಳಿಕ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದ ಧೋನಿ (92), ಯುವರಾಜ್‌ ಸಿಂಗ್‌(21) ಜೊತೆ ಸೇರಿ 48.2 ಎರಡನೇ ಓವರ್‌ನಲ್ಲಿ ಜಯದ ಲೆಕ್ಕ ಚುಕ್ತಾ ಮಾಡಿದ್ದರು.

ಶ್ರೀಲಂಕಾದ ವೇಗಿ ನುವಾನ್‌ ಕುಲಶೇಖರ ಎಸೆತವನ್ನು ಕಪ್ತಾನ ಧೋನಿ ಬಾರಿಸಿದ ಚೆಂಡು ಲಾಂಗ್‌ಆನ್‌ ಮಾರ್ಗದಲ್ಲಿ ಆಕಾಶಕ್ಕೆ ಚಿಮ್ಮಿತು. ಧೋನಿ ಫಿನಿಶಸ್‌ ಇಟ್‌ ಆಫ್ ಇನ್‌ ಸ್ಟೈಲ್‌, ಇಂಡಿಯಾ ಲಿಫ್ಟ್ ದ ವರ್ಲ್ಡ್ ಕಪ್‌ ಆಫ್ಟರ್‌ 28 ಇಯರ್ ರವಿಶಾಸ್ತ್ರಿ ತಮ್ಮದೇ ಸ್ಟೈಲ್‌ನಲ್ಲಿ ಭಾರತದ ಗೆಲುವನ್ನು ಘೋಷಿಸುತ್ತಿದ್ದರು.

ಇದನ್ನೂ ಓದಿ IPL 2025: 27 ಕೋಟಿ ರೂ ಕೊಟ್ಟಿದ್ದೇಕೆ? 2 ರನ್‌ಗೆ ವಿಕೆಟ್‌ ಒಪ್ಪಿಸಿದ ರಿಷಭ್‌ ಪಂತ್‌ ವಿರುದ್ದ ಫ್ಯಾನ್ಸ್‌ ಗರಂ!

ಭಾರತೀಯ ಕ್ರಿಕೆಟಿನ 28 ವರ್ಷಗಳ ಸುದೀರ್ಘ‌ ಕನಸೊಂದು ಸಾಕಾರಗೊಂಡಿತ್ತು. ಭಾರತ ಎರಡನೇ ಸಲ ಏಕದಿನ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಕೂಟದಲ್ಲಿ ಭಾರತವೇ ಫೇವರಿಟ್‌ ತಂಡವಾ ಗಿತ್ತು. ಅಷ್ಟೊಂದು ಬಲಿಷ್ಠ ಹಾಗೂ ವೈವಿಧ್ಯಮಯ ತಂಡ ನಮ್ಮದಾಗಿತ್ತು. ಪ್ರಶಸ್ತಿಯ ಹಾದಿಯಲ್ಲಿ ಭಾರತದ ಸೋತದ್ದು ದಕ್ಷಿಣ ಆಫ್ರಿಕಾಕ್ಕೆ ಮಾತ್ರ. ಬದ್ಧ ಎದುರಾಳಿ ಪಾಕಿಸ್ತಾನವನ್ನು ಸೆಮಿಫೈನಲ್‌ನಲ್ಲಿ ಬಗ್ಗುಬಡಿದಿತ್ತು.



ಈ ಪ್ರಶಸ್ತಿಯನ್ನು ಕ್ರಿಕೆಟಿಗರೆಲ್ಲ ಸೇರಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ಗೆ ಅರ್ಪಿಸಿದರು. ಅವರ ವರ್ಣರಂಜಿತ ಕ್ರಿಕೆಟ್‌ ಬದುಕು ವಿಶ್ವಕಪ್‌ ಇಲ್ಲದೇ ಪರಿಪೂರ್ಣವಾಗುತ್ತಿರಲಿಲ್ಲ. ಪಾಕ್‌ ಎದುರಿನ ಸೆಮಿಫೈನಲ್‌ನಲ್ಲಿ 85 ರನ್‌ ಬಾರಿಸಿ ಪಂದ್ಯಶ್ರೇಷ್ಠರಾಗಿದ್ದ ಸಚಿನ್‌ ಫೈನಲ್‌ನಲ್ಲಿ 18 ರನ್ನಿಗೇ ಆಟ ಮುಗಿಸಿದ್ದರು.