ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಕಂಪನಿಗಳಲ್ಲಿ ಬೆಳಗ್ಗಿನ ಪ್ರಾರ್ಥನೆ

ಜಪಾನಿನ ಹಲವು ಕಂಪನಿಗಳಲ್ಲಿ ಬೆಳಗಿನ ಹೊತ್ತು, ಎಲ್ಲ ಸಿಬ್ಬಂದಿ ಪ್ರಾರ್ಥನೆ ಮಾಡುತ್ತಾರಂತೆ. ಈ ವಿಷಯವನ್ನು ಬೆಂಗಳೂರಿನ ಟೊಯೋಟಾ ಸಂಸ್ಥೆಯಲ್ಲಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡು ತ್ತಿರುವ ಸ್ನೇಹಿತರಾದ ಹೊಸನಗರ ವಸಂತ ತಿಳಿಸಿದರು. ಅವರು ಜಪಾನಿಗೆ ಹೋದಾಗ ಬೆಳಗ್ಗೆ ಪಾಳಿ ಆರಂಭಕ್ಕೆ ಮುನ್ನ ಪ್ರಾರ್ಥನೆಗೆ ನಿಲ್ಲುತ್ತಿದ್ದರಂತೆ. ಈ ರೀತಿಯ ಸಂಪ್ರದಾಯವನ್ನು ಬೇರೆ ಯಾವ ದೇಶ ಗಳಲ್ಲೂ ನೋಡಲು ಸಾಧ್ಯವಿಲ್ಲ.

ಕಂಪನಿಗಳಲ್ಲಿ ಬೆಳಗ್ಗಿನ ಪ್ರಾರ್ಥನೆ

ನಾವು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುವಾಗ ಬೆಳಗ್ಗೆ ತರಗತಿಗಳು ಆರಂಭವಾಗುವು ದಕ್ಕಿಂತ ಮುನ್ನ ಪ್ರಾರ್ಥನೆ ಮಾಡುತ್ತಿದ್ದೇವಲ್ಲ, ಅದೇ ರೀತಿ ಜಪಾನಿನ ಹಲವು ಕಂಪನಿಗಳಲ್ಲಿ ಬೆಳಗಿನ ಹೊತ್ತು, ಎಲ್ಲ ಸಿಬ್ಬಂದಿ ಪ್ರಾರ್ಥನೆ ಮಾಡುತ್ತಾರಂತೆ. ಈ ವಿಷಯವನ್ನು ಬೆಂಗಳೂರಿನ ಟೊಯೋಟಾ ಸಂಸ್ಥೆಯಲ್ಲಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸ್ನೇಹಿತರಾದ ಹೊಸನಗರ ವಸಂತ ತಿಳಿಸಿದರು. ಅವರು ಜಪಾನಿಗೆ ಹೋದಾಗ ಬೆಳಗ್ಗೆ ಪಾಳಿ ಆರಂಭಕ್ಕೆ ಮುನ್ನ ಪ್ರಾರ್ಥನೆಗೆ ನಿಲ್ಲುತ್ತಿದ್ದರಂತೆ. ಈ ರೀತಿಯ ಸಂಪ್ರದಾಯವನ್ನು ಬೇರೆ ಯಾವ ದೇಶಗಳಲ್ಲೂ ನೋಡಲು ಸಾಧ್ಯವಿಲ್ಲ. ಈಗಲೂ ಅನೇಕ ಕಂಪನಿಗಳು ಈ ಸಂಪ್ರದಾಯವನ್ನು ಮುಂದುವರಿಸಿ ಕೊಂಡು ಹೋಗುತ್ತಿವೆ. ಇದನ್ನು ಜಪಾನಿಗರು ‘ಚೋರೆ’ ಅಂತ ಕರೆಯುತ್ತಾರೆ. ಹಾಗಂದರೆ ‘ಬೆಳಗಿನ ಸಭೆ’ (ಮಾರ್ನಿಂಗ್ ಮೀಟಿಂಗ್) ಎಂದರ್ಥ. ಬೆಳಗ್ಗೆ ಕೆಲಸವನ್ನು ಆರಂಭಿಸುವುದಕ್ಕೆ ಮುನ್ನ ಸಿಬ್ಬಂದಿಯ ‘ಮೂಡ್’ ಅನ್ನು ಉತ್ತಮಗೊಳಿಸುವುದು, ಉದ್ಯೋಗಿಗಳು ದಿನವನ್ನು ಉತ್ಸಾಹದಿಂದ ಆರಂಭಿಸುವುದು, ಸಂಘಟ ನಾತ್ಮಕ ಭಾವನೆಯನ್ನು ಉತ್ತೇಜಿಸುವುದು, ಎಲ್ಲರೂ ಒಂದೇ ಎಂಬ ಗುರಿಯನ್ನು ಹೊಂದಿ ಕಾರ್ಯನಿರ್ವಹಿಸಲು ಪ್ರೇರೇಪಿಸುವುದು ಇದರ ಮುಖ್ಯ ಆಶಯ.

ಇದನ್ನೂ ಓದಿ:Vishweshwar Bhat Column: ಇಂದಿಗೂ ಜಪಾನಿನಲ್ಲಿ ಚಾಲ್ತಿಯಲ್ಲಿರುವ ಮಾನವ ರಿಕ್ಷಾ !

ಇದು ಉದ್ಯೋಗಿಗಳಿಗೆ ಕಂಪನಿಯ ಮೌಲ್ಯ, ಧೋರಣೆ, ನಿಯಮ ಮತ್ತು ಗುರಿಗಳನ್ನು ಸ್ಮರಿಸುವ ಅವಕಾಶವೂ ಹೌದು. ತಕ್ಷಣದ ಮಾಹಿತಿಯನ್ನು ಹಂಚಿಕೊಳ್ಳುವುದು ಮತ್ತು ನಿರ್ದಿಷ್ಟ ದಿನದ ಕೆಲಸಗಳ ಹಾಗೂ ಉದ್ದೇಶಗಳ ಬಗ್ಗೆ ಮಾಹಿತಿ ನೀಡಲು, ವಿನಿಮಯ ಮಾಡಿಕೊಳ್ಳಲು ಸಹ ಈ ಪ್ರಾರ್ಥನಾ ಸಭೆ ಸಹಾಯಕ. ಈ ಸಭೆಯಲ್ಲಿ ಕೆಲವೊಂದು ಕಂಪನಿಗಳು ತಮ್ಮದೇ ಆದ ಸಂಸ್ಥೆಯ ಹಾಡನ್ನು ಹಾಡುತ್ತಾರೆ.

ಕೆಲವೆಡೆ ಕಂಪನಿಯ ಧ್ಯೇಯೋದ್ದೇಶಗಳನ್ನು, ಘೋಷವಾಕ್ಯಗಳನ್ನು ಎಲ್ಲ ಸಿಬ್ಬಂದಿ ಗಟ್ಟಿಯಾಗಿ ಹೇಳುವುದುಂಟು. ಕೆಲವೊಮ್ಮೆ ಸಂಸ್ಥೆಯ ಹಿರಿಯ ಅಧಿಕಾರಿಗಳು 5-10 ನಿಮಿಷಗಳ ಪ್ರೇರಣಾ ದಾಯಕ ಭಾಷಣವನ್ನೂ ಮಾಡಬಹುದು. ಕೆಲವು ಕಂಪನಿಗಳಲ್ಲಿ ಸಿಬ್ಬಂದಿ ಆರೋಗ್ಯ ಮತ್ತು ಶಿಸ್ತು ಕಾಯ್ದುಕೊಳ್ಳಲು ಲಘು ಶಾರೀರಿಕ ವ್ಯಾಯಾಮವನ್ನು ಮಾಡಿಸುತ್ತಾರೆ.

ಎಲ್ಲ ಸೇರಿ ಒಂದು ಕ್ರಿಯೆ ಮಾಡುವುದರಿಂದ ಎಲ್ಲರಲ್ಲೂ ತಾವೆಲ್ಲ ಒಂದು ಎಂಬ ಭಾವನೆ ಮೂಡುವುದರಿಂದ ಇಂಥ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ಜಪಾನಿ ಮೂಲದ ಟೊಯೋ ಟಾ, ಹೋಂಡಾ, ಹಿಟಾಚಿ, ಪ್ಯಾನಸೋನಿಕ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಈಗಲೂ ಈ ಪದ್ಧತಿ ಜಾರಿಯಲ್ಲಿದೆ.

ಇವು ತಮ್ಮ ಆಂತರಿಕ ಸಂಸ್ಕೃತಿಯನ್ನು ಕಾಪಾಡಲು ಈ ಪದ್ಧತಿಯನ್ನು ಅನುಸರಿಸುತ್ತವೆ. ಕೆಲವೊಂದು ಹೋಟೆಲ, ರೆಸ್ಟೋರೆಂಟ್ ಮತ್ತು ಸೇವಾ ಸಂಸ್ಥೆಗಳು ಸಹ ಈ ಪದ್ಧತಿಯನ್ನು ನಿತ್ಯವೂ ಆಚರಿಸುವುದುಂಟು. ಸೇವಾ ಉದ್ಯಮಗಳಲ್ಲಿ ಗ್ರಾಹಕರ ಸೇವೆ ಉತ್ತಮಗೊಳಿಸಲು ಸಿಬ್ಬಂದಿಗೆ ಟಿಪ್ಸ್ ನೀಡಲಾಗುತ್ತದೆ.

ಜಪಾನಿನಲ್ಲಿ ಶಿಸ್ತು, ಒಗ್ಗಟ್ಟಿನ ಕೆಲಸ ಮತ್ತು ಮಾನಸಿಕ ಸಿದ್ಧತೆಯನ್ನು ಮೇಲ್ದರ್ಜೆಗೆ ಏರಿಸಲು ಈ ಪದ್ಧತಿ ಸಹಕಾರಿಯಾಗಿದೆ. ಈ ಪದ್ಧತಿಯು ಸಮುರೈಗಳ ಅನುಶಾಸನದಿಂದ ಪ್ರೇರಿತವಾಗಿದೆ. ಯಾಕೆಂದರೆ ಅವರು ಪ್ರತಿದಿನವೂ ತಾವು ಮಾಡುವ ತತ್ತ್ವಗಳನ್ನು ಪುನರುಚ್ಚರಿಸುತ್ತಾರೆ. ಟೊಯೋ ಟಾ, ಸೋನಿ, ಮಿಟ್ಸುಬಿಷಿ ಮುಂತಾದ ಕಂಪನಿಗಳು ಈ ಪದ್ಧತಿಯನ್ನು ಜಪಾನಿ ಕೆಲಸದ ಪರಂಪರೆ ಯಂತೆ ಉಳಿಸಿಕೊಂಡಿವೆ.

ಕೆಲವೊಂದು ಜಪಾನಿ ಕಂಪನಿಗಳು ಇದನ್ನು ಸುಧಾರಿಸಿ ಆಧುನಿಕ ಶೈಲಿಯ ಸ್ಟ್ಯಾಂಡ್ -ಅಪ್ ಮೀಟಿಂಗ್ ಆಗಿ ಅಳವಡಿಸಿಕೊಳ್ಳುತ್ತಿವೆ. ಪಶ್ಚಿಮದ ಐಟಿ ಮತ್ತು ಟೆಕ್ ಕಂಪನಿಗಳು Stand-up meetings ಅನ್ನು ಹೆಚ್ಚು ಬಳಸುತ್ತಿವೆ. ಆದರೆ, ಪರಂಪರೆಯನ್ನು ಉಳಿಸಿಕೊಳ್ಳಲು ಹಳೆಯ ಮ್ಯಾನು ಫ್ಯಾಕ್ಚರಿಂಗ್ ಮತ್ತು Traditional Business ಗಳು ಇದನ್ನು ಮುಂದುವರಿಸುತ್ತಿವೆ.

ಜಪಾನಿನ ಉದ್ಯೋಗ ಸ್ಥಳಗಳಲ್ಲಿ, ಶಾಲೆಗಳು, ರೆಸ್ಟೋರೆಂಟ್‌ಗಳು ಮತ್ತು ಕಚೇರಿಗಳಲ್ಲಿ ಈ ಪದ್ಧತಿ ಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಈ ಪದ್ಧತಿಯ ಉದ್ದೇಶವು ಉದ್ಯೋಗಿಗಳ ನಡುವೆ ಸಂವಹನವನ್ನು ಸುಧಾರಿಸಲು ಮತ್ತು ದಿನದ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಹ ಸಹಾಯಕವಾಗಿದೆ. ಆಧುನಿಕ ಮ್ಯಾನೇಜ್ಮೆಂಟ್ ಪದ್ಧತಿಗಳು ಬಂದರೂ, ಈ ಸಾಂಪ್ರದಾಯಕ ಪದ್ಧತಿ ಇನ್ನೂ ಚಾಲ್ತಿಯಲ್ಲಿರುವುದು ಸೋಜಿಗವೇ.