RCB vs GT: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ; ಗುಜರಾತ್ ಎದುರಾಳಿ
ಸದ್ಯ ಆರ್‌ಸಿಬಿ ಆಡಿದ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಶುಭಮನ್ ಗಿಲ್ ಪಡೆ ಒಂದು ಗೆಲುವು ಮತ್ತು ಸೋಲಿನಿಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ತವರಿನ ಲಾಭದ ಜತೆಗೆ ಅಭಿಮಾನಿಗಳ ದೊಡ್ಡ ಮಟ್ಟದ ಬೆಂಬಲ ಆರ್‌ಸಿಬಿ ಪಾಲಿಗೊಂದು ವರದಾನವೆಂದೇ ಹೇಳಬೇಕು.


ಬೆಂಗಳೂರು: ಬಲಾಡ್ಯ ಕೆಕೆಆರ್ ಮತ್ತು ಚೆನ್ನೈ ತಂಡವನ್ನು ಅವರದೇ ಅಂಗಳದಲ್ಲಿ ಕೆಡವಿ ಹೊಸ ಉತ್ಸಾಹದಲ್ಲಿರುವ ರಾಯಲ್ ಚಾಲೆಂಜರ್ ಬೆಂಗಳೂರು ತಂಡ(Royal Challengers Bengaluru) ಬುಧವಾರ ತವರಿನಲ್ಲಿ ನಡೆಯುವ ಪಂದ್ಯದಲ್ಲಿ ಸ್ಟಾರ್ ಆಟಗಾರರನ್ನು ಹೊಂದಿರುವ ಗುಜರಾತ್ ಟೈಟಾನ್ಸ್(RCB vs GT) ತಂಡವನ್ನು ಎದುರಿಸಲಿದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ. ಚಿನ್ನಸ್ವಾಮಿಯಲ್ಲಿ(M Chinnaswamy Stadium) ಈ ಋತುವಿನ ಮೊದಲ ಪಂದ್ಯ ವನ್ನಾಡಲಿರುವ ಆರ್‌ಸಿಬಿಗೆ ಅಭಿಮಾನಿಗಳು ಭಾರೀ ಸ್ವಾಗತ ನೀಡುವ ಸಾಧ್ಯತೆಯಿದ್ದು ಕೊಹ್ಲಿ ಮಿಂಚು ಹರಿಸುವ ನಿರೀಕ್ಷೆಯಿದೆ.
ಸದ್ಯ ಆರ್‌ಸಿಬಿ ಆಡಿದ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಶುಭಮನ್ ಗಿಲ್ ಪಡೆ ಒಂದು ಗೆಲುವು ಮತ್ತು ಸೋಲಿನಿಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ತವರಿನ ಲಾಭದ ಜತೆಗೆ ಅಭಿಮಾನಿಗಳ ದೊಡ್ಡ ಮಟ್ಟದ ಬೆಂಬಲ ಆರ್‌ಸಿಬಿ ಪಾಲಿಗೊಂದು ವರದಾನವೆಂದೇ ಹೇಳಬೇಕು.
ಆರ್‌ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹೆಚ್ಚು ಬಲಿಷ್ಠಗೊಂಡಿರುವುದು ಕಳೆದ ಪಂದ್ಯದಲ್ಲಿ ಸಾಬೀತಾಗಿದೆ. ಮುಖ್ಯವಾಗಿ ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್ ಅವರ ಸಿಡಿಲಬ್ಬರದ ಫಿಫ್ಟಿ ಆರ್‌ಸಿಬಿ ಪಾಲಿಗೊಂದು ವರದಾನವೆಂದೇ ಹೇಳಬೇಕು. ಟಿಮ್ ಡೇವಿಡ್ ಕೂಡ ಲಯ ಕಂಡುಕೊಂಡಿದ್ದಾರೆ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಉತ್ತಮ ಆರಂಭವ ಒದಗಿಸುತ್ತಿದ್ದಾರೆ. ಕೊಹ್ಲಿ ರನ್ ಗಳಿಸಿದರೂ ಕೂಡ ಟಿ20ಗೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಚಿನ್ನಸ್ವಾಮಿಯಲ್ಲಿ ಟಾಸ್ ನಿರ್ಣಾಯಕವಾಗಲಿದೆ. ಟಾಸ್ ಗೆದ್ದರೆ ಆರ್‌ಸಿಬಿ ಬೌಲಿಂಗ್ ಆಯ್ದುಕೊಳ್ಳುವುದು ಉತ್ತಮ.
ಇದನ್ನೂ ಓದಿ RCB vs GT: ಮಳೆ ಬಂದರೂ ಪಂದ್ಯ ನಡೆಯುತ್ತೆ; ಏನಿದು ಸಬ್ಏರ್ ಸಿಸ್ಟಮ್?
ಗುಜರಾತ್ ಕೂಡ ಈ ಬಾರಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮವಾಗಿದೆ. ಆರ್‌ಸಿಬಿಯಿಂದ ಬೇರ್ಪಟ್ಟು ಗುಜರಾತ್ ಸೇರಿರುವ ಮೊಹಮ್ಮದ್ ಸಿರಾಜ್ ತನ್ನ ಮಾಜಿ ತಂಡದ ವಿರುದ್ಧ ಹೇಗೆ ಪ್ರದರ್ಶನ ತೋರಲಿದ್ದಾರೆ ಎಂಬುದು ಕೂಡ ಪಂದ್ಯದ ಕುತೂಹಲಗಳಲ್ಲಿ ಒಂದಾಗಿದೆ. ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿಯ ಉತ್ತಮ ಆರಂಭ ನೀಡುತ್ತಿದ್ದಾರೆ. ವನ್‌ಡೌನ್ ಬ್ಯಾಟರ್ ಜಾಸ್ ಬಟ್ಲರ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್ ಕೂಡ ಘಾತವಾಗಿದೆ. ಅನುಭವಿ ಸ್ಪಿನ್ನರ್ ರಶೀದ್ ಖಾನ್, ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ, ಕಗಿಸೊ ರಬಾಡ ವಿಕೆಟ್ ಬೇಟೆಯಾಡುವಲ್ಲಿ ಸಮರ್ಥರಿದ್ದಾರೆ.
Making memories, one catch-up at a time 💙❤️
— Gujarat Titans (@gujarat_titans) March 31, 2025
P.S. Very soon, @liaml4893! 🤝 pic.twitter.com/UaaOfAZnv9
ಮುಖಾಮುಖಿ: 5
ಆರ್‌ಸಿಬಿ: 3
ಗುಜರಾತ್: 2
ಪಂದ್ಯ ಆರಂಭ; ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್