#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Delhi Election Results 2025: ದಿಲ್ಲಿಯಲ್ಲಿ ಅಧಿಕಾರದತ್ತ ಬಿಜೆಪಿ; ಆಪ್‌ ಹ್ಯಾಟ್ರಿಕ್‌ ಕನಸು ಭಗ್ನ: ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಹಬ್ಬ

ದೇಶದ ಕುತೂಹಲ ಕೆರಳಿಸಿದ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ 27 ವರ್ಷಗಳ ಬಳಿಕ ಅದಿಕಾರಕ್ಕೆ ಬರುತ್ತಿದೆ. ಇತ್ತ ಆಪ್‌ ಮತ್ತು ಕಾಂಗ್ರೆಸ್‌ ನೆಲಕಚ್ಚಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಆಪ್‌ನ ಸೋಲಿನ ಮೀಮ್ಸ್‌ ಹರಿದಾಡುತ್ತಿದ್ದು, ತಹೇವಾರಿ ಪೋಸ್ಟ್‌ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ದಿಲ್ಲಿ ಚುನಾವಣಾ ಫಲಿತಾಂಶ ಟ್ರೆಂಡ್‌

ಅರವಿಂದ್‌ ಕೇಜ್ರಿವಾಲ್‌.

Profile Ramesh B Feb 8, 2025 12:53 PM

ಹೊಸದಿಲ್ಲಿ: ದೇಶದ ಕುತೂಹಲ ಕೆರಳಿಸಿದ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು (Delhi Election Results 2025), ಸುಮಾರು 27 ವರ್ಷಗಳ ಬಳಿಕ ಆಡಳಿತ ಚುಕ್ಕಾಣಿ ಹಿಡಿಯುವತ್ತ ಬಿಜೆಪಿ (BJP) ದಾಪುಗಾಲು ಇಡುತ್ತಿದೆ. ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಆಮ್‌ ಆದ್ಮಿ ಪಾರ್ಟಿ (ಆಪ್‌)ಯ ಹ್ಯಾಟ್ರಿಕ್‌ ಕನಸು ಭಗ್ನಗೊಂಡಿದ್ದು, ಇತ್ತ ಕಾಂಗ್ರೆಸ್‌ ಮತ್ತೆ ನೆಲಕಚ್ಚಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಆಪ್‌ನ ಸೋಲಿನ ಮೀಮ್ಸ್‌ ಹರಿದಾಡುತ್ತಿದ್ದು, ತಹೇವಾರಿ ಪೋಸ್ಟ್‌ ನೆಟ್ಟಿಗರ ಗಮನ ಸೆಳೆಯುತ್ತಿದೆ. ಎಕ್ಸ್‌ (ಟ್ವಿಟರ್‌), ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಮೊದಲಾದ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಟ್ರೋಲ್‌ ಪೋಸ್ಟ್‌ಗಳ ಝಲಕ್‌ ಇಲ್ಲಿದೆ.

ದಿಲ್ಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಆರ್‌ಸಿಬಿಯ ಆಟಗಾರ ವಿರಾಟ್‌ ಕೊಹ್ಲಿಗೆ ಹೋಲಿಸಿ ಕಣ್ಣೀರು ಸುರಿಸುವಂತೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳಲಾಗಿದೆ. ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕೇಜ್ರಿವಾಲ್‌ ಸೋಲು ಕಂಡಿದ್ದು, ಅವರ ವಿರುದ್ಧ ಬಿಜೆಪಿಯ ಪರ್ವೇಶ್‌ ವರ್ಮಾ ಗೆದ್ದಿದ್ದಾರೆ. ಮತ್ತೊಂದು ವಿಡಿಯೊದಲ್ಲಿ ಕೇಜ್ರಿವಾಲ್‌ ಬಿಕ್ಕಿ ಬಿಕ್ಕಿ ಅಳುತ್ತಿರುವಂತೆ ಚಿತ್ರಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಇಂಡಿಯಾ ಒಕ್ಕೂಟದ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿಗೆ ಲೀಡ್‌ ಸಿಗುತ್ತಿದ್ದಂತೆ ಟಾಂಗ್‌ ಕೊಟ್ಟ ಅವರು, ಕಾಂಗ್ರೆಸ್‌ ಮತ್ತು ಆಪ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದು ಮೀಮ್ಸ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೊನ್ನೆ ಎಂದು ಬರೆದಿರುವ ಸಂಖ್ಯೆಯನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು. ದೇಶದಲ್ಲಿ ಎಲ್ಲೂ ಮೋದಿ ಹವಾ ಇಲ್ಲ ಎಂದಿದ್ದ ಕೇಜ್ರಿವಾಲ್‌ ಅವರ ಹೇಳಿಕೆ ಕೂಡ ಇದೀಗ ಟ್ರೋಲ್‌ಗೆ ಆಹಾರವಾಗಿದೆ. ಇನ್ನು ಆಮ್ ಆದ್ಮಿ ಪಕ್ಷದ ಬಂಡಾಯ ಸಂಸದೆ ಸ್ವಾತಿ ಮಲಿವಾಲ್ ಅವರು ಆಪ್‌ ಸೋಲನ್ನು ಖುಷಿಯಿಂದ ಆಚರಿಸುವಂತೆ ಚಿತ್ರಿಸಲಾಗಿದೆ. ಕೆಲವು ದಿನಗಳಿಂದ ಸ್ವಾತಿ ಮಲಿವಾಲ್ ಪಕ್ಷದ ಮುಖ್ಯಸ್ಥರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಡ್ಯಾನ್ಸ್‌ ಮಾಡುತ್ತಿರುವ ಇಬ್ಬರು ಚಿಕ್ಕ ಬಾಲಕಿಯರನ್ನು ಸ್ವಾತಿ ಮಲಿವಾಲ್‌ ಮತ್ತು ಬಿಜೆಪಿ ನಾಯಕಿ ಬಾನ್ಸುರಿ ಸ್ವರಾಜ್‌ ಎಂದು ಹೆಸರಿಸಲಾಗಿದ್ದು ಸದ್ಯ ಈ ವಿಡಿಯೊ ಕೂಡ ವೈರಲ್‌ ಆಗಿದೆ. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಬಿಜೆಪಿ ಮೇಲೇಳುವಂತೆಯೂ ಆಪ್‌ ಮುಳುಗುವಂತೆಯೀ ಚಿತ್ರಿಸಿರುವ ಪೋಸ್ಟ್‌ ಗಮನ ಸೆಳೆಯುತ್ತಿದೆ. ಒಟ್ಟಿನಲ್ಲಿ ಸೋಶಿಯಲ್‌ ಮೀಡಿಯಾ ಬಳಕೆದಾರರು ಮೀಮ್ಸ್‌ ನೋಡಿ ಎಂಜಾಯ್‌‌ ಮಾಡುತ್ತಿರುವುದಂತೂ ಸತ್ಯ.

ಈ ಸುದ್ದಿಯನ್ನೂ ಓದಿ: Delhi Election 2025: ಬಹುಮತದತ್ತ ಬಿಜೆಪಿ ದಾಪುಗಾಲು; ಆಪ್‌ಗೆ ಬಿಗ್‌ ಶಾಕ್‌!

ದಿಲ್ಲಿ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ಫೆ. 5ರಂದು ನಡೆದಿತ್ತು. ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದೇ ಭವಿಷ್ಯ ನುಡಿದಿದ್ದವು. ಇತ್ತೀಚಿನ ವರದಿ ಪ್ರಕಾರ ಬಿಜೆಪಿ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ ಆಪ್‌ 22 ಕಡೆ ಪ್ರಾಬಲ್ಯ ಸಾಧಿಸಿದೆ. ಕಾಂಗ್ರೆಸ್‌ ಇನ್ನೂ ಖಾತೆ ತೆರೆದಿಲ್ಲ.