Allu Arjun: ಅಟ್ಲಿ ಚಿತ್ರದಲ್ಲಿ ಅಲ್ಲು ಅರ್ಜುನ್; ದ್ವಿಪಾತ್ರದಲ್ಲಿ ಮಿಂಚುತ್ತಾರಾ ಪುಷ್ಪರಾಜ್?
Allu Arjun-Atlee: ಕಳೆದ ವರ್ಷ ತೆರೆಕಂಡ ಪುಷ್ಪ 2 ಸಿನಿಮಾದ ಅಭೂತಪೂರ್ವ ಯಶಸ್ಸಿನಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್ ಸದ್ಯ ವಿವಿಧ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರು ದಕ್ಷಿಣ ಭಾರತದ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಅಟ್ಲಿಆ್ಯಕ್ಷನ್ ಕಟ್ ಹೇಳಲಿರುವ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಅಲ್ಲ ಅರ್ಜುನ್ ಮತ್ತು ಅಟ್ಲಿ.

ಹೈದರಾಬಾದ್: ದಕ್ಷಿಣ ಭಾರತದ ಟಾಪ್ ನಿರ್ದೇಶಕ ಮತ್ತು ನಟ ಒಂದಾಗಲು ಎಲ್ಲ ರೀತಿಯಿಂದಲೂ ವೇದಿಕೆ ಸಜ್ಜಾಗಿದೆ. ಹೌದು, ಕಳೆದ ವರ್ಷ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿರುವ 'ಪುಷ್ಪ 2' (Pushpa 2) ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ತೇಲುತ್ತಿರುವ ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಬಾಲಿವುಡ್‌ನಲ್ಲಿಯೂ 'ಜವಾನ್'ನಂತಹ ಬ್ಲಾಕ್ ಬ್ಲಸ್ಟರ್ ಸಿನಿಮಾ ನೀಡಿರುವ ಅಟ್ಲಿ (Atlee) ಒಂದೇ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಪಕ್ಕಾ ಕಮರ್ಷಿಯಲ್ ಮಾದರಿಯಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಅಟ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗಿತ್ತು. ಆದರೆ ಸದ್ಯ ಕಾರಣಾಂತರಗಳಿಂದ ಈ ಚಿತ್ರವನ್ನು ಮುಂದೂಡಲಾಗಿದೆ. ಹೀಗಾಗಿ ಅಟ್ಲಿ ಇದೀಗ ಅಲ್ಲು ಅರ್ಜುನ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾಕ್ಕೆ ʼಎ6ʼ (A6) ಎಂದು ತಾತ್ಕಾಲಿಕ ಟೈಟಲ್ ಇಡಲಾಗಿದೆ.
ಈ ಸುದ್ದಿಯನ್ನೂ ಓದಿ: Salman Khan: ರಶ್ಮಿಕಾಗೆ ಮಗಳಾದರೆ ಆಕೆಯ ಜತೆಗೂ ನಟಿಸುವೆ; ಏಜ್ ಗ್ಯಾಪ್ ಪ್ರಶ್ನಿಸಿದವರಿಗೆ ತಿರುಗೇಟು ಕೊಟ್ಟ ಸಲ್ಮಾನ್ ಖಾನ್
ದ್ವಿಪಾತ್ರದಲ್ಲಿ ಅಲ್ಲಿ ಅರ್ಜುನ್?
ಆ್ಯಕ್ಷನ್ ಪ್ಯಾಕ್ಡ್, ಕಮರ್ಷಿಯಲ್ ಚಿತ್ರಗಳಿಗೆ ಅಟ್ಲಿ ಜನಪ್ರಿಯ. ಅವರ ಚಿತ್ರದಲ್ಲಿ ಸಾಮಾನ್ಯವಾಗಿ ನಾಯಕನಿಗೆ ವಿವಿಧ ಶೇಡ್‌ಗಳಿರುತ್ತವೆ. ಈ ಹಿಂದಿನ ಅವರ ʼಮರ್ಸೆಲ್ʼ, ʼಬಿಗಿಲ್ʼ ಚಿತ್ರಗಳಲ್ಲಿ ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಅಟ್ಲಿ ನಿರ್ದೇಶನದ ಹಿಂದಿಯ ʼಜವಾನ್ʼ ಸಿನಿಮಾದಲ್ಲಿ ಶಾರುಖ್ ಖಾನ್ 2 ವಿಭಿನ್ನ ರೀತಿಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಅದೇ ರೀತಿ ಈ ಚಿತ್ರದಲ್ಲೂ ಅಲ್ಲು ಅರ್ಜುನ್ ಬೇರೆ ಬೇರೆ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.
ಸದ್ಯ ಈ ಚಿತ್ರ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಈ ವರ್ಷದ ಆಗಸ್ಟ್‌ನಲ್ಲಿ ಸೆಟೇರುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಪಾತ್ರ ವಿಭಿನ್ನವಾಗಿರಲಿದೆಯಂತೆ. ಜತೆಗೆ ಎಂದಿನಂತೆ ಅಟ್ಲಿ ಅವರ ಮೇಕಿಂಗ್ ಸ್ಟೈಲ್ ಇರಲಿದೆ. ಇದೊಂದು ಪಾಲಿಟಿಕಲ್ ಡ್ರಾಮ ಶೈಲಿಯ ಚಿತ್ರವಾಗಿರಲಿದೆ. ನಾಯಕಿ ಸೇರಿದಂತೆ ಉಳಿದ ತಾರಾಗಣ, ತಂತ್ರಜ್ಞರ ಅಯ್ಕೆ ಇನ್ನಷ್ಟೇ ನಡೆಯಬೇಕಿದೆ.
ಅಲ್ಲು ಅರ್ಜುನ್ ಫುಲ್ ಬ್ಯುಸಿ
ಸದ್ಯ ಅಲ್ಲು ಅರ್ಜುನ್ ಕೈತುಂಬಾ ಚಿತ್ರಗಳಿವೆ. ಈಗ ಅವರು ಟಾಲಿವುಡ್ ಸ್ಟಾರ್ ಡೈರಕ್ಟರ್ ತ್ರಿವಿಕ್ರಂ ನಿರ್ದೇಶನದ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು 2026ರಲ್ಲಿ ಆರಂಭಗೊಳ್ಳಲಿದೆ. ಅದರ ಜತೆಗೆ ಸುಕುಮಾರ್ ಜತೆಗೆ ʼಪುಷ್ಪ 3ʼ ಚಿತ್ರದಲ್ಲಿಯೂ ಅಭಿನಯಿಸಲಿದ್ದಾರೆ. ಮಾತ್ರವಲ್ಲ ಬಾಲಿವುಡ್‌ಗೂ ಕಾಲಿಡುತ್ತಾರೆ ಎನ್ನುವ ಸುದ್ದಿ ಹಬ್ಬಿದೆ. ʼಪಠಾಣ್ 2ʼ ಸಿನಿಮಾದಲ್ಲಿ ಅವರು ಶಾರುಖ್ ಖಾನ್‌ಗೆ ಎದುರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬರಬೇಕಿದೆ.
ನಿರ್ಮಾಣಕ್ಕಿಳಿದ ಅಟ್ಲಿ
ನಿರ್ದೇಶನದ ಜತೆಗೆ ಇದೀಗ ಅಟ್ಲಿ ಚಿತ್ರ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಅವರು ನಿರ್ಮಿಸಿರುವ ಬಾಲಿವುಡ್ ಚಿತ್ರ ʼಬೇಬಿ ಜಾನ್ʼ ತೆರೆಕಂಡಿತ್ತು. ವರುಣ್ ಧವನ್-ಕೀರ್ತಿ ಸುರೇಶ್ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿತ್ತು.