ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salman Khan: ಬಿಷ್ಣೋಯ್‌ ಗ್ಯಾಂಗ್‌ ಹಾಕಿದ್ದ ಜೀವ ಬೆದರಿಕೆ ಕುರಿತು ಸಲ್ಮಾನ್‌ ಖಾನ್‌ ಮಾತು; ಎಲ್ಲಾ ದೇವರ ಇಚ್ಛೆ ಎಂದು ಹೇಳಿದ್ದೇಕೆ?

ಸಲ್ಮಾನ್‌ ಖಾನ್‌ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್‌ ಚಿತ್ರದ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಬಹುನಿರೀಕ್ಷಿತ ಚಿತ್ರ ಇದೇ ಭಾನುವಾರ ತೆರೆಗಪ್ಪಳಿಸಲಿದೆ. ಮಾರ್ಚ್​​ 30ರಂದು ಬಿಡುಗಡೆ ಆಗಲಿರುವ ಚಿತ್ರದ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಬಿಷ್ಣೋಯ್‌ ಗ್ಯಾಂಗ್‌ ಕುರಿತು ಸಲ್ಮಾನ್‌ ಖಾನ್‌ ಹೇಳಿದ್ದೇನು?

Profile Vishakha Bhat Mar 27, 2025 11:26 AM

ಮುಂಬೈ: ಸಲ್ಮಾನ್‌ ಖಾನ್‌ (Salman Khan) ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್‌ ಚಿತ್ರದ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಬಹುನಿರೀಕ್ಷಿತ ಚಿತ್ರ ಇದೇ ಭಾನುವಾರ ತೆರೆಗಪ್ಪಳಿಸಲಿದೆ. ಮಾರ್ಚ್​​ 30ರಂದು ಬಿಡುಗಡೆ ಆಗಲಿರುವ ಚಿತ್ರದ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಸಿಕಂದರ್ ಚಿತ್ರತಂಡ 5 ದಿನಗಳ ಮುಂಚಿತವಾಗಿ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ತೆರೆದಿದೆ​. ಮುಂಬೈನಲ್ಲಿ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿಯೇ ನಡೆದಿದೆ. ಈ ವೇಳೆ ಸಲ್ಮಾನ್‌ ಖಾನ್‌ ಲಾರೆನ್ಸ್‌ ಬಿಷ್ಣೋಯಿಂದ ಬಂದ ಬೆದರಿಕೆಗಳ ಕುರಿತು ಮಾತನಾಡಿದ್ದಾರೆ.

ಸಿಕಂದರ್ ಸಿನಿಮಾ ಪ್ರಚಾರ ಮಾಡುತ್ತಿದ್ದಾಗ, ಮಾಧ್ಯಮಗಳೊಂದಿಗೆ ಅವರು ಸಂವಾದ ನಡೆಸಿದರು. ಈ ವೇಳೆ ವರದಿಗಾರರೊಬ್ಬರು ಕಳೆದ ವರ್ಷ ತಮಗೆ ಬಂದಿರುವ ಹಲವು ಜೀವ ಬೆದರಿಕೆಗಳಿಂದ ತಾವು ಭಯಭೀತರಾಗಿದ್ದೀರಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಅವರು ತಮ್ಮ ಭದ್ರತೆಯನ್ನು ಹೇಗೆ ಬಿಗಿಗೊಳಿಸಲಾಗಿದೆ ಎಂಬುದನ್ನು ಪ್ರಸ್ತಾಪಿಸಿದರು. ಎಲ್ಲಾ ಸಮಯದಲ್ಲೂ ಹಲವಾರು ಭದ್ರತಾ ಸಿಬ್ಬಂದಿಯಿಂದ ಸುತ್ತುವರಿಯುವುದು ಸುಲಭವಲ್ಲ ಎಂದು ಒಪ್ಪಿಕೊಂಡಿದ್ದಾರೆ. ಎಲ್ಲಾ ಅಲ್ಲಾನ ದಯೆ, ಆಯುಷ್ಯ ಎಷ್ಟು ದಿನ ಇರುತ್ತದೆಯೋ ಅಷ್ಟು ದಿನ ದಿನ ಜೀವನ ನಡೆಸುವುದು, ಆದರೆ ಇಷ್ಟೊಂದು ಜನರ ರಕ್ಷಣೆಯೊಂದಿಗೆ ಓಡಾಡುವುದು ಕೆಲವೊಂದು ಸಲ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂದು ಅವರು ಹೇಳಿದ್ದಾರೆ.

1998 ರಲ್ಲಿ ಹಮ್‌ ಸಾಥ್‌ ಸಾಥ್‌ ಹೇ ಚಿತ್ರದ ಸಂದರ್ಭದಲ್ಲಿ ಕೃಷ್ಣಮೃಗವನ್ನು ಕೊಂದ ಆರೋಪವನ್ನು ಸಲ್ಮಾನ್‌ ಖಾನ್‌ ಎದುರಿಸುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಗ್ಯಾಂಗ್‌ ಸಲ್ಮಾನ್‌ ಮೇಲೆ ಹಲವು ಬಾರಿ ಕೊಲೆ ಪ್ರಯತ್ನವನ್ನು ಮಾಡಿದೆ. ಏಪ್ರಿಲ್ 2024 ರಲ್ಲಿ, ಮುಂಬೈನ ಬಾಂದ್ರಾ ಪ್ರದೇಶದ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಗುಂಡು ಹಾರಿಸಲಾಯಿತು. ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹಿಂದೆ ಕೈವಾಡವಿದೆ ಎಂದು ತಿಳಿದು ಬಂದಿತ್ತು. ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಫೇಸ್‌ಬುಕ್ ಪೋಸ್ಟ್ ಮೂಲಕ ಗುಂಡಿನ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ.

ಈ ಸುದ್ದಿಯನ್ನೂ ಓದಿ: AR Murugadoss: ಸಲ್ಮಾನ್‌-ರಶ್ಮಿಕಾ ನಟನೆಯ ʼಸಿಕಂದರ್‌ʼ ರಿಮೇಕ್‌ ಚಿತ್ರವ? ನಿರ್ದೇಶಕ ಎ.ಆರ್‌.ಮುರುಗದಾಸ್‌ ಹೇಳಿದ್ದೇನು?

ಬೆಳಿಗ್ಗೆ 4.55 ರ ಸುಮಾರಿಗೆ, ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯ ಬಾಲ್ಕನಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ಅಂಗರಕ್ಷರು ತಿಳಿಸಿದ್ದರು. ಇದಾದ ಬಳಿಕ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಬಳಿ ಭದ್ರತೆಯನ್ನು ಹೆಚ್ಚು ಮಾಡಲಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಸಲ್ಮಾನ್‌ ಖಾನ್‌ ಅವರ ಆತ್ಮೀಯ ಹಾಗೂ ಎನ್‌ಸಿಪಿ ಮಾಜಿ ಸಚಿವ ಬಾಬಾ ಸಿದ್ಧಕಿ ಅವರನ್ನು ಗುಂಡುಕ್ಕಿ ಕೊಲ್ಲಲಾಗಿತ್ತು. ಈ ಕೃತ್ಯವನ್ನು ತಾವೇ ಮಾಡಿರುವುದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿದೆ.