Salman Khan: ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್! ಶೂಟಿಂಗ್ ಸೆಟ್‌ನಿಂದ ವಿಡಿಯೊ ಲೀಕ್
ನಟ ಸಲ್ಮಾನ್ ಖಾನ್ ಅವರು ಹಾಲಿವುಡ್ ನ ಬಿಗ್ ಬಜೆಟ್ ಸಸ್ಪೆನ್ಸ್ ಥ್ರಿಲ್ಲರ್‌ನಲ್ಲಿ ಅಭಿನಯಿಸುತ್ತಿದ್ದು ಈ ವಿಚಾರ ಅನೇಕ ದಿನಗಳಿಂದಲೂ ಗೌಪ್ಯವಾಗಿಯೇ ಇಡಲಾಗಿತ್ತು. ಈ ಬಗ್ಗೆ ಹಾಲಿವುಡ್ ಸಿನೆಮಾ ತಂಡದ ಜೊತೆಗೆ ಗೌಪ್ಯ ಒಪ್ಪಂದ ಆಗಿದ್ದ ಕಾರಣಕ್ಕೆ ಸಲ್ಮಾನ್ ಖಾನ್ ಅವರು ಈ ವಿಚಾರ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಆದರೆ ಇದೀಗ ಅವರು ಶೂಟಿಂಗ್ ಸೆಟ್‌ನಿಂದ ವಿಡಿಯೊವೊಂದು ಬಹಳಷ್ಟು ವೈರಲ್ ಆಗುತ್ತಿದೆ.


ಮುಂಬೈ: ನಟ ಸಲ್ಮಾನ್ ಖಾನ್ (Salman Khan) ಸದ್ಯ ಸಿಕಂದರ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಈ ಶೂಟಿಂಗ್ ನಡೆಯುತ್ತಿರುವಾಗಲೇ, ಸಲ್ಮಾನ್ ಹಾಲಿವುಡ್ ಪ್ರಾಜೆಕ್ಟ್‌ವೊಂದಕ್ಕೆ ಸಹಿ ಹಾಕಿದ್ದು ಹಾಲಿವುಡ್ ಥ್ರಿಲ್ಲರ್ ಸಿನಿಮಾಲ್ಲಿ ಸಲ್ಮಾನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ನಟ ಸಲ್ಮಾನ್ ಹಾಲಿವುಡ್ ಸಿನಿಮಾದ ಶೂಟಿಂಗ್ ತಯಾರಿಯಲಿದ್ದು ಸೌದಿ ಅರೇಬಿಯಾದ ಅಲ್ ಉಲಾ ಸ್ಟುಡಿಯೋ ಸೆಟ್‌ನಿಂದ ವಿಡಿಯೊ ಒಂದು ಲೀಕ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಕುರಿತು ಕುತೂಹಲವನ್ನು ಮತ್ತಷ್ಟು ಹೆಚ್ಚಿದೆ.
ನಟ ಸಲ್ಮಾನ್ ಖಾನ್ ಅವರು ಹಾಲಿವುಡ್‌ನ ಬಿಗ್ ಬಜೆಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಚಾರ ಇದುವರೆಗೂ ಗೌಪ್ಯವಾಗಿಯೇ ಇಡಲಾಗಿತ್ತು. ಈ ಬಗ್ಗೆ ಹಾಲಿವುಡ್ ಸಿನೆಮಾ ತಂಡದ ಜೊತೆಗೆ ಗೌಪ್ಯ ಒಪ್ಪಂದ ಆಗಿದ್ದ ಕಾರಣಕ್ಕೆ ಸಲ್ಮಾನ್ ಖಾನ್ ಅವರು ಈ ವಿಚಾರ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಇದೀಗ ಶೂಟಿಂಗ್ ಸೆಟ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿರುವ ವಿಡಿಯೊ ಗುಟ್ಟನ್ನು ರಟ್ಟು ಮಾಡಿದೆ.
#SalmanKhan goes hollywood....Shooting for his cameo scene in Saudi Arabia for high Octane Action movie #TheSevenDogspic.twitter.com/IZGld2Rsh8
— Movie_Reviews (@Movie_reviewsss) February 18, 2025
ಸಲ್ಮಾನ್ ಜೊತೆ ಸಂಜಯ್ ದತ್ ಕೂಡ ಈ ಹಾಲಿವುಡ್ ಥ್ರಿಲ್ಲರ್‌ನಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಲಿವುಡ್‌ನ ಈ ಸಿನಿಮಾ ಯಾವುದು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆದರೆ ಈ ಚಿತ್ರಕ್ಕೆ ಸೌದಿ ಅರೇಬಿಯಾದಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ಸಲುವಾಗಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅವರು ಈಗಾಗಲೇ ಶೂಟಿಂಗ್ ತೆರಳಿದ್ದಾರೆ. ಸಂಜಯ್ ದತ್ ನಟಿಸುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಇದನ್ನು ಓದಿ: Viral Video: 270 ಕೆಜಿ ತೂಕದ ರಾಡ್ ಬಿದ್ದು ಪವರ್ ಲಿಫ್ಟರ್ ದುರ್ಮರಣ; ಶಾಕಿಂಗ್ ವಿಡಿಯೊ ವೈರಲ್
ಸಲ್ಮಾನ್ ಖಾನ್ ಅವರು ಚಿತ್ರೀಕರಣಕ್ಕಾಗಿ ಭೇಟಿ ನೀಡಿದ್ದ ಅಲ್ ಉಲಾ ಶೂಟಿಂಗ್ ಸೆಟ್ ಅನೇಕ ವರ್ಷದಿಂದಲೂ ಹಾಲಿವುಡ್ ನಲ್ಲಿ ಪ್ರಖ್ಯಾತಿ ಪಡೆದಿದೆ. ಇದು ಅಂತಾರಾಷ್ಟ್ರೀಯ ಚಲನಚಿತ್ರ ಮಂಡಳಿ ಯಿಂದ ಜನಪ್ರಿಯವಾಗಿದ್ದು ಗೆರಾರ್ಡ್ ಬಟ್ಲರ್, ಸ್ಪೈ ಥ್ರಿಲ್ಲರ್ ಕಂದ ಹಾರ್ ನಂತಹ ಹಾಲಿವುಡ್ ಸಿನಿಮಾಗಳು ಇಲ್ಲಿಯೇ ಚಿತ್ರೀಕರಿಸ ಲಾಗಿದ್ದು ಇದೀಗ ಭಾರತದ ಪ್ರಖ್ಯಾತ ನಟ ಸಲ್ಮಾನ್ ಖಾನ್ ಅವರಿಗೂ ಬಾಲಿವುಡ್‌ನಿಂದ ಹಾಲಿವುಡ್ ಪದಾರ್ಪಣೆ ಮಾಡಲು ಈ ಸೆಟ್ ಲಕ್ಕಿ ಚಾರ್ಮ್ ಆಗಬಹುದೇ ಎಂದು ಕಾದುನೋಡಬೇಕು.