ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral Video: 270 ಕೆಜಿ ತೂಕದ ರಾಡ್ ಬಿದ್ದು ಪವರ್ ಲಿಫ್ಟರ್ ದುರ್ಮರಣ; ಶಾಕಿಂಗ್‌ ವಿಡಿಯೊ ವೈರಲ್

ರಾಜಸ್ಥಾನದ ಬಿಕಾನೆರ್‌ನ ಚಿನ್ನದ ಪದಕ ವಿಜೇತೆ ಪವರ್‌ಲಿಫ್ಟರ್ 17 ವರ್ಷದ ಯಾಷ್ಥಿಕಾ ಆಚಾರ್ಯ ತರಬೇತಿಯ ವೇಳೆ ಕುತ್ತಿಗೆ ಮೇಲೆ 270 ಕೆಜಿ ತೂಕದ ವೇಟ್ ಲಿಫ್ಟಿಂಗ್ ರಾಡ್ ಬಿದ್ದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಆಘಾತಕಾರಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ತರಬೇತಿ ವೇಳೆ ಭಾರೀ ದುರಂತ;  ಪವರ್ ಲಿಫ್ಟರ್ ದುರ್ಮರಣ

Profile pavithra Feb 20, 2025 10:37 AM

ಜೈಪುರ್: ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ತರಬೇತಿ ಪಡೆಯುತ್ತಿದ್ದ 17 ವರ್ಷದ ಯಾಷ್ಥಿಕಾ ಆಚಾರ್ಯ ತರಬೇತಿಯ ವೇಳೆ ಕುತ್ತಿಗೆ ಮೇಲೆ 270 ಕೆಜಿ ತೂಕದ ವೇಟ್ ಲಿಫ್ಟಿಂಗ್ ರಾಡ್ ಬಿದ್ದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಜಿಮ್‍ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಯಾಷ್ಥಿಕಾ ಆಚಾರ್ಯ ರಾಡ್ ಎತ್ತುವ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.‌ ವೈರಲ್ ವಿಡಿಯೊದಲ್ಲಿ ಯಾಷ್ಥಿಕಾಆಚಾರ್ಯ ವೇಟ್‌ಲಿಫ್ಟಿಂಗ್ ಮಾಡುವುದು ಸೆರೆಯಾಗಿದೆ. ಈ ವೇಳೆ ಅವಳ ತರಬೇತುದಾರರು ಹಿಂದೆ ನಿಂತಿದ್ದರು. ವೇಟ್ ಲಿಫ್ಟಿಂಗ್ ರಾಡ್ ಎತ್ತುವಾಗ, ಅವಳು ಇದ್ದಕ್ಕಿದ್ದಂತೆ ಕೆಳಗೆ ಜಾರಿ ಬಿದ್ದಿದ್ದಾಳೆ. ಇದರಿಂದ ಸ್ಕ್ವಾಟ್ ಬಾರ್‌ಗಳು ಆಕೆಯ ಕುತ್ತಿಗೆಯ ಮೇಲೆ ಬಿದ್ದವು. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ನಯಾ ಶಹರ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಜಿಮ್‌ನಲ್ಲಿ ಈ ಅಪಘಾತ ಸಂಭವಿಸಿದೆ.

ಅಧಿಕಾರಿಗಳ ಪ್ರಕಾರ, ಭಾರವಾದ ರಾಡ್ ಜಾರಿ ಅವಳ ಕುತ್ತಿಗೆ ಮೇಲೆ ಬಿದ್ದ ಪರಿಣಾಮ ಅವಳ ಕುತ್ತಿಗೆ ಮುರಿತಕ್ಕೊಳಗಾಗಿದೆ. ಹೀಗಾಗಿ ಆಕೆ ಸಾವನಪ್ಪಿದ್ದಾಳೆ. ಅಭ್ಯಾಸದ ಸಮಯದಲ್ಲಿ ಅವಳಿಗೆ ಸಹಾಯ ಮಾಡುತ್ತಿದ್ದ ಅವಳ ತರಬೇತುದಾರರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.



ಘಟನೆಯ ವೇಳೆ ತಕ್ಷಣ ಯಾಷ್ಟಿಕಾ ಆಚಾರ್ಯ ಅವಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಯಾಷ್ಥಿಕಾ ಆಚಾರ್ಯ ರಾಜಸ್ಥಾನ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಇತ್ತೀಚೆಗೆ ಅಲ್ವಾರ್‌ನಲ್ಲಿ ಆಯೋಜಿಸಿದ್ದ 29ನೇ ರಾಜಸ್ಥಾನ ರಾಜ್ಯ ಸಬ್ ಜೂನಿಯರ್ ಮತ್ತು ಸೀನಿಯರ್ ಪುರುಷ ಮತ್ತು ಮಹಿಳಾ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಳು. ಗೋವಾದಲ್ಲಿ ನಡೆದ 33 ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್‌ನಲ್ಲಿ ಸುಸಜ್ಜಿತ ವಿಭಾಗದಲ್ಲಿ ಚಿನ್ನ ಮತ್ತು ಕ್ಲಾಸಿಕ್ ವಿಭಾಗದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಅವಳು ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಯಶಸ್ಸನ್ನು ಗಳಿಸಿದ್ದಳು.

ಕ್ರೀಡಾಪಟು ಯಾಷ್ಥಿಕಾ ಆಚಾರ್ಯ ಗುತ್ತಿಗೆದಾರರ ಕುಟುಂಬದಿಂದ ಬಂದವಳು. ಅವಳ ತಂದೆ ಐಶ್ವರ್ಯಾ ಆಚಾರ್ಯ (50) ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬವು ಯಾವುದೇ ಔಪಚಾರಿಕ ದೂರು ದಾಖಲಿಸದಿದ್ದರೂ, ಈ ದುರಂತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಜಿಮ್‍ನಲ್ಲಿ 165 ಕೆಜಿ ತೂಕ ಎತ್ತಲು ಹೋದ ಪವರ್‌ಲಿಫ್ಟರ್‌ ಬದುಕುಳಿದಿದ್ದೇ ಒಂದು ಪವಾಡ! ಶಾಕಿಂಗ್‌ ವಿಡಿಯೊ ವೈರಲ್

ಜಿಮ್‍ನಲ್ಲಿ ವರ್ಕೌಟ್ ಮಾಡುವಾಗ ಅವಘಡ ಸಂಭವಿಸಿ ಜೀವಕ್ಕೆ ಹಾನಿಯಾದ ಘಟನೆಗಳು ಸಾಕಷ್ಟು ನಡೆದಿವೆ. ಈಗ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ. ಜಿಮ್‍ನಲ್ಲಿ ಪವರ್‌ಲಿಫ್ಟರ್‌ 165 ಕೆಜಿ ತೂಕವನ್ನು ಎತ್ತಲು ಹೋಗಿ ಭಾರವಾದ ಬಾರ್ಬೆಲ್‌ ಅಡಿಯಲ್ಲಿ ಸಿಕ್ಕಿಬಿದ್ದು ಜೀವ ಉಳಿಸಿಕೊಳ್ಳಲು ಹೋರಾಡಿದ ದೃಶ್ಯ ಸೆರೆಯಾಗಿದೆ. ಇದು ನೋಡುಗರನ್ನು ಬೆಚ್ಚಿಬೀಳಿಸಿದೆ. ವೈರಲ್ ಆದ ವಿಡಿಯೊ ಬಾಡಿ ಬಿಲ್ಡರ್‌ಗೆ ಬಾರ್ಬೆಲ್‌ ಅದನ್ನು ಎತ್ತಲು ಸಾಧ್ಯವಾಗದೇ ಅದು ಅವನ ಕುತ್ತಿಗೆ ಮೇಲೆ ಬಿದ್ದಿತು. ಇದರಿಂದ ಆತನಿಗೆ ಉಸಿರಾಡಲು ಸಾಧ್ಯವಾಗದೆ ಜೀವನ್ಮರಣದ ನಡುವೆ ಹೋರಾಡಿದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ತನ್ನ ಕುತ್ತಿಗೆಯ ಮೇಲಿದ್ದ ಬಾರ್ಬೆಲ್‌ ತೆಗೆಯಲು ಆಗದೇ ಅವನು ಒದ್ದಾಡುತ್ತಿದ್ದಾಗ ಅಲ್ಲಿದ್ದ ಮಹಿಳೆಯು ತಕ್ಷಣವೇ ಆತನಿಗೆ ಸಹಾಯ ಮಾಡಿದ್ದಾಳೆ. ಈ ಇಡೀ ದೃಶ್ಯ ಜಿಮ್‍ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಜ್ ಕುಮಾರ್ ದಕ್ಷಿಣಮೂರ್ತಿ ಎಂಬುವವರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ.