Bhagya Lakshmi Serial: ಮನೆಯಲ್ಲಿ ಊಟ ಮಾಡಿ ಬಂದಿದ್ದಕ್ಕೆ ಶ್ರೇಷ್ಠಾಳ ಕೋಪಕ್ಕೆ ತುತ್ತಾದ ತಾಂಡವ್
ಮನೆಯಲ್ಲಿ ಭಾಗ್ಯಾ ಮಾಡಿದ ಅಡುಗೆಯನ್ನು ಹೊಟ್ಟೆ ಪೂರ್ತಿ ತಿಂದುಬಂದಿರುವ ತಾಂಡವ್ ಪುನಃ ಹೇಗೆ ಊಟ ಮಾಡೋದು ಎಂದು ಟೆನ್ಶನ್ ಆಗುತ್ತಾನೆ. ಬೇರೆ ದಾರಿಯಿಲ್ಲದೆ ತಾಂಡವ್ ಊಟಕ್ಕೆ ಕೂರುತ್ತಾನೆ. ಶ್ರೇಷ್ಠಾ, ತಾನು ಮಾಡಿದ ನ್ಯೂಡಲ್ಸ್‌ನ್ನು ಬಡಿಸುತ್ತಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಯಶಸ್ವಿಯಾಗುತ್ತಿದೆ. ಮನೆಬಿಟ್ಟು ಹೋಗಿದ್ದ ತಾಂಡವ್ ಮತ್ತೆ ಮನೆಗೆ ಬಂದು ಭಾಗ್ಯಾಳನ್ನು ಹೊರಹಾಕಲು ಅಪ್ಪ-ಅಮ್ಮನ ಜೊತೆ ಹೊಸ ನಾಟಕ ಶುರುಮಾಡಿದ್ದಾನೆ. ನನಗೆ ಈ ಮನೆಯಲ್ಲಿ ಕೆಲವೊಂದು ಜವಾಬ್ದಾರಿಯಿದೆ, ಅದನ್ನು ಪೂರೈಸುವುದು ನನ್ನ ಕರ್ತವ್ಯ ಎಂದು ಹೇಳಿ ಮನೆಯವರ ನಂಬಿಕೆಗಳಿಸಲು ಪ್ರಯತ್ನಿಸುತ್ತಿದ್ದಾನೆ.
ಭಾಗ್ಯಾಳಿಗೆ ಇದು ಯಾವುದೊ ಹೊಸ ಪ್ಲ್ಯಾನ್ ಎಂಬಂತೆ ಕಾಣುತ್ತಿದೆ. ಭಾಗ್ಯಾ ಆದರೆ, ಭಾಗ್ಯಾಳ ಅಮ್ಮ ಸುನಂದ ಹಾಗೂ ಅತ್ತೆ ಕುಸುಮಾಗೆ ಈ ತಾಂಡವ್ ಪ್ಲ್ಯಾನ್ ಅರ್ಥ ಆಗುತ್ತಿಲ್ಲ. ಇವನು ನಿಜವಾಗಿಯೂ ಬದಲಾಗಿ ವಾಪಾಸ್ ಮನೆಗೆ ಬಂದಿದ್ದಾನೆ ಎಂದು ಅಂದುಕೊಂಡಿದ್ದಾರೆ.
ಸುನಂದ ಅವರು ಭಾಗ್ಯಾ ಬಳಿ ಬಂದು, ಹೋಗು ಊಟಕ್ಕೆ ರೆಡಿ ಮಾಡು ಎಂದು ಹೇಳುತ್ತಾರೆ. ಅದಕ್ಕೆ ಭಾಗ್ಯಾ ಇಷ್ಟು ಬೇಗ ಬೇಡ ಅತ್ತೆ-ಮಾಗ ಮಾತ್ರೆ ತೆಗೊಂಡಿದ್ದಾರಷ್ಟೆ.. ಅವ್ರು ಮಾತ್ರೆ ತಂದು 15-20 ನಿಮಿಷ ಕಳಿಬೇಕು ಎಂದು ಹೇಳುತ್ತಾಳೆ. ಆಗ ಸುನಂದ, ನಾನು ನಿನ್ನ ಅತ್ತೆ-ಮಾವನ ಬಗ್ಗೆ ಮಾತಾಡ್ತಿಲ್ಲ.. ನಾನು ನಿನ್ನ ಗಂಡನ ಬಗ್ಗೆ ಮಾತಾಡ್ತಾ ಇದ್ದೇನೆ.. ಪಾಪಾ ಆಫೀಸಿಂದ ನೇರವಾಗಿ ಮನೆಗೆ ಬಂದಿದ್ದಾರೆ, ಆ ಶ್ರೇಷ್ಠಾ ಏನೂ ಅಡಿಗೆ ಮಾಡಿರಲ್ಲ.. ಎಷ್ಟು ಹಸಿವಾಗಿರುತ್ತೊ ಏನೋ ಅದಿಕೆ ಊಟಕ್ಕೆ ತಯಾರು ಮಾಡು ಅಂದಿದ್ದು. ನಿನ್ನ ಅತ್ತೆ-ಮಾವ ಅವ್ರ ಟೈಮ್ಗೆ ಬರ್ತಾರೆ ಎಂದು ಹೇಳಿದ್ದಾರೆ.
ಬಳಿಕ ಕುಸುಮಾ ಬಂದು, ಮಗನಿಗೋಸ್ಕರ ಒಂದುಹೊತ್ತು ಬೇಗ ಊಟ ಮಾಡಿದ್ರೆ ಏನೂ ಆಗಲ್ಲ ಎನ್ನುತ್ತಾಳೆ. ಹೀಗೆ ಒಟ್ಟಿಗೆ ಮಾಡುತ್ತಾರೆ. ಭಾಗ್ಯಾ ಇಷ್ಟವಿಲ್ಲದಿದ್ದರೂ ಅವಳು ಮಾಡಿದ ಅಡುಗೆಯನ್ನು ಹೊಗಳಿ ಹೊಟ್ಟೆ ತುಂಬಾ ಊಟ ಮಾಡುತ್ತಾನೆ. ಮನೆಯಿಂದ ಹೊರಡುವಾಗ ಭಾಗ್ಯಾ ಬಿಟ್ಟು ಉಳಿದ ಎಲ್ಲರಿಗೂ ಏನು ಸಹಾಯ ಬೇಕೋ ಕೇಳಿ ಎಂದು ಹೇಳುತ್ತಾನೆ. ಹೇಗೋ ನಾನು ಅಂದುಕೊಂಡ ಕೆಲಸ ಆಯ್ತು, ಅತ್ತೆ ಹಾಗೂ ಅಮ್ಮ ನನ್ನ ಕಡೆ ಬರುತ್ತಿದ್ದಾರೆ. ನಿಮ್ಮನ್ನೆಲ್ಲಾ ಹೇಗೆ ಆಡಿಸುತ್ತೇನೆ ನೋಡುತ್ತಿರಿ ಎಂದು ತಾಂಡವ್ ಮನಸ್ಸಿನಲ್ಲೇ ಭಾಗ್ಯಾ ವಿರುದ್ಧ ಪ್ಲ್ಯಾನ್ ಮಾಡುತ್ತಾನೆ.
ಅತ್ತ ಶ್ರೇಷ್ಠಾ ತಾಂಡವ್‌ಗಾಗಿ ಕಾದು ಕಾದು ಟೇಬಲ್ ಮೇಲೆ ಮಲಗಿಬಿಡುತ್ತಾಳೆ. ಕಾಲ್ ಮಾಡಿದರೂ ರಿಸೀವ್ ಮಾಡಿರುವುದಿಲ್ಲ. ತಡವಾಗಿ ಮನೆಗೆ ಬಂದಾಗ ಕೋಪಗೊಂಡ ಶ್ರೇಷ್ಠಾ, ನಿನಗಾಗಿ ನಾನು ಇದನ್ನೆಲ್ಲಾ ಅರೇಂಜ್ ಮಾಡಿಕೊಂಡು ಕಾಯುತ್ತಿದ್ದರೆ ನೀನು ಇಷ್ಟು ತಡವಾಗಿ ಬಂದಿದ್ದೀಯ ಎನ್ನುತ್ತಾಳೆ. ನಾನು ಮೀಟಿಂಗ್ ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದರೆ ನೀನು ಇಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದೀಯ, ನನಗಂತೂ ಸಾಕಾಗಿಹೋಗಿದೆ ಎಂದು ಸುಳ್ಳು ಹೇಳುತ್ತಾನೆ. ಸರಿ ನೀನು ಹೋಗಿ ಫ್ರೆಶ್ ಆಗಿ ಬಾ, ಒಟ್ಟಿಗೆ ಊಟ ಮಾಡೋಣ ಅಂತ ಶ್ರೇಷ್ಠಾ ಹೇಳುತ್ತಾಳೆ. ಊಟ ಎಂದೊಡನೆ ತಾಂಡವ್ ಗಾಬರಿ ಆಗುತ್ತಾನೆ. ಮನೆಯಲ್ಲಿ ಭಾಗ್ಯಾ ಮಾಡಿದ ಅಡುಗೆಯನ್ನು ಹೊಟ್ಟೆ ಪೂರ್ತಿ ತಿಂದುಬಂದಿರುವ ತಾಂಡವ್ ಪುನಃ ಹೇಗೆ ಊಟ ಮಾಡೋದು ಎಂದು ಟೆನ್ಶನ್ ಆಗುತ್ತಾನೆ.
ಬೇರೆ ದಾರಿಯಿಲ್ಲದೆ ತಾಂಡವ್ ಊಟಕ್ಕೆ ಕೂರುತ್ತಾನೆ. ಶ್ರೇಷ್ಠಾ, ತಾನು ಮಾಡಿದ ನ್ಯೂಡಲ್ಸ್‌ನ್ನು ಬಡಿಸುತ್ತಾಳೆ. ತಿನ್ನಲು ಆಗದೆ-ಬಿಡಲೂ ಆಗದೆ ತಾಂಡವ್ ಚಡಪಡಿಸುತ್ತಾನೆ. ಇದೇ ಹೊತ್ತಿಗೆ ಜೋರು ತೇಗು ಬರುತ್ತದೆ. ನೀನು ತೇಗುತ್ತಿದ್ದೀಯ ಏನೋ ತಿಂದು ಬಂದಿದ್ದೀಯ ಎಂದು ಶ್ರೇಷ್ಠಾ ಕೋಪದಿಂದ ಕೇಳುತ್ತಾಳೆ. ತಾಂಡವ್ ನಡೆದ ವಿಚಾರವನ್ನೆಲ್ಲಾ ಶ್ರೇಷ್ಠಾಗೆ ಹೇಳುತ್ತಾನೆ. ಅದನ್ನು ಕೇಳಿ ಶ್ರೇಷ್ಠಾ ಮೊದಲು ಕೋಪಗೊಂಡರೂ, ನಂತರ ಭಾಗ್ಯಾ ವಿಚಾರ ಬರುತ್ತಿದ್ದಂತೆ ಸುಮ್ಮನಾಗುತ್ತಾಳೆ.
ಆ ಎಮ್ಮೆ ಭಾಗ್ಯಾ ಕೆಲಸ ಇರುವುದರಿಂದಲೇ ಇಷ್ಟೆಲ್ಲಾ ಮೆರೆಯುತ್ತಿದ್ದಾಳೆ. ಹೇಗಾದರೂ ಮಾಡಿ ಅವಳು ಕೆಲಸ ಮಾಡುವ ಕಡೆ ಅವಳಿಗೆ ಕೆಟ್ಟ ಹೆಸರು ಬರುವಂತೆ ಮಾಡಬೇಕು, ಅವಳು ಕೆಲಸ ಕಳೆದುಕೊಳ್ಳುವಂತೆ ಮಾಡಬೇಕು ಎಂದು ಶ್ರೇಷ್ಠಾ ತಾಂಡವ್ಗೆ ಹೇಳುತ್ತಾಳೆ. ಈ ಮೂಲಕ ಭಾಗ್ಯಾಳಗೆ ಸಂಕಷ್ಟ ತರಲು ತಾಂಡವ್-ಶ್ರೇಷ್ಠಾ ಜೋಡಿ ಮತ್ತೊಂದು ಪ್ಲ್ಯಾನ್ ಮಾಡಿದಂತಿದೆ. ಇದು ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
BBK 11 Final: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಕಿಚ್ಚ ಸುದೀಪ್