Bhagya Lakshmi Serial: ಭಾಗ್ಯಾಳ ಹೊಸ ಉದ್ಯಮ ಮೊದಲ ದಿನವೇ ಫ್ಲಾಫ್: ಬಂದಿಲ್ಲ ಒಂದೇ ಒಂದು ಕರೆ
Bhagya Lakshmi Kannada Serial: ರೆಸಾರ್ಟ್‌ಗೆ ಹೋಗಲು ಮನೆಯಲ್ಲಿ ಅನುಮತಿ ಸಿಕ್ಕಿಲ್ಲ ಎಂದು ತನ್ವಿ, ಅನುಮತಿ ಪತ್ರಕ್ಕೆ ಅಪ್ಪನ ಸಹಿ ಪಡೆಯಲು ಉಪಾಯದಿಂದ ಅಪ್ಪನನ್ನು ಕರೆಸಿಕೊಂಡಿದ್ದಾಳೆ. ತಾಂಡವ್ ಕೂಡ, ಮಗಳು ಕರೆದಿದ್ದಾಳೆ ಎಂದು ಖುಷಿಯಲ್ಲಿ ಹೊರಡುತ್ತಾನೆ.

Bhagya lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಕಥಾನಾಯಕಿ ಭಾಗ್ಯ ಹೊಸ ಉದ್ಯಮ ಆರಂಭಿಸಿದ್ದಾಳೆ. ಯಾರ ಹಂಗು ಬೇಡವೆಂದು ತಾನೇ ಸ್ವತಃ ಹೊಸ ಉದ್ಯಮ ಶುರುಮಾಡಿದ್ದಾಳೆ. ಆಫೀಸ್ನಲ್ಲಿ ಕೆಲಸ ಮಾಡುವವರಿಗೆ ಊಟದ ಡಬ್ಬ ತಲುಪಿಸಿ, ಮನೆಯಿಂದಲೇ ಅವಳು ಅಡುಗೆ ಮಾಡಿ ಹಾಸ್ಟೆಲ್ ಹುಡುಗರಿಗೆ, ಆಫೀಸ್‌ನಲ್ಲಿದ್ದವರಿಗೆ ಬಾಕ್ಸ್ ಕಳಿಸಿಕೊಡುವ ಪ್ಲಾನ್ ಇದಾಗಿದೆ. ಅದಕ್ಕೆ ಮನೆಯವರೆಲ್ಲರೂ ಸಹಕಾರ ನೀಡಿದ್ದಾರೆ. ಇದಕ್ಕೆ ಕೈ ರುಚಿ ಎಂಬ ಹೆಸರು ಕೂಡ ಇಡಲಾಗಿದೆ. ಆದರೆ, ಭಾಗ್ಯಾಗೆ ಮೊದಲ ದಿನವೇ ಹಿನ್ನಡೆಯಾದಂತಿದೆ.
ತನ್ನ ಉದ್ಯಮವನ್ನು ಭಾಗ್ಯ ಭರ್ಜರಿ ಆಗಿ ಪ್ರಚಾರ ಕೂಡ ಮಾಡಿದ್ದಾಳೆ. ಭಾಗ್ಯ ಜೊತೆಗೆ ಸುಂದರಿ ಮತ್ತು ಪೂಜಾ ಸೇರಿಕೊಂಡು ಊರಿನ ತುಂಬೆಲ್ಲಾ ಕೈತುತ್ತಿನ ಊಟದ ಮೆನು ಇರುವ ಪೋಸ್ಟರ್ ಹಂಚುತ್ತಿದ್ದಾರೆ. ಪರಿಚಯದವರು, ಅಟೋದವರು, ಹೊರಗಡೆ ಎಲ್ಲ ಕಡೆಯೂ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡುತ್ತಿದ್ದಾರೆ. ಊಟದ ಪೋಸ್ಟರ್ ಜತೆಗೆ, ಬೇರೆ ಕಾರ್ಯಕ್ರಮಗಳ ಆರ್ಡರ್ ಇದ್ದರೂ ಕೊಡುವಂತೆ ಭಾಗ್ಯ ಜನರನ್ನು ಕೇಳುತ್ತಿದ್ದಾಳೆ. ಎಲ್ಲರೂ ಸರಿ ಆಯ್ತು ಎನ್ನುತ್ತಿದ್ದಾರೆ.
ಬಳಿಕ ಮನೆಗೆ ಬಂದು ಒಂದಾದರು ಫೋನ್ ಕಾಲ್ ಬರುತ್ತ ಎಂದು ಕಾದು ಕುಳಿತಿದ್ದಾಳೆ. ಆದರೆ ಒಂದೇ ಒಂದು ಊಟದ ಕರೆ ಬಂದಿಲ್ಲ. ಬದಲಾಗಿ ಅವರಿಗೆ ಬ್ಯಾಂಕ್ ಲೋನ್ ಬೇಕಾ ಎಂದು ಕರೆ ಬಂದಿದೆ. ಮತ್ತೊಂದೆಡೆ ಒಬ್ಬ ಪೂಜಾಳ ನಂಬರ್ ಕೇಳಿಕೊಂಡು ಕರೆ ಮಾಡಿದ್ದಾನೆ. ಊಟಕ್ಕಾಗಿ ಯಾವುದೇ ಕರೆ ಬಂದಿಲ್ಲದಿರುವುದು ಭಾಗ್ಯಾಗೆ ಚಿಂತೆಯನ್ನುಂಟು ಮಾಡಿದೆ. ಬಳಿಕ ಭಾಗ್ಯ ಊಟದ ಡಬ್ಬ ಹಿಡಿದುಕೊಂಡು ಆಫಿಸ್ಗಳ ಮುಂದೆ ಹೋಗಿ ರುಚಿ-ರುಚಿಯಾದ ಮನೆ ಊಟ ತಯಾರಿದೆ ಎಂದು ಕೂಗಿ ಹೇಳಿದ್ದಾಳೆ.
ಮತ್ತೊಂದೆಡೆ ತನ್ವಿ ತನ್ನ ಫ್ರೆಂಡ್ಸ್ ಜೊತೆ ರೆಸಾರ್ಟ್‌ಗೆ ಟ್ರಿಪ್ ಹೋಗಲು ನಾನಾ ಕಸರತ್ತು ನಡೆಸುತ್ತಿದ್ದಾಳೆ. ಆದರೆ ಇದಕ್ಕೆ ಮನೆಯಿಂದ ಪರ್ಮೀಷನ್ ಸಿಕ್ಕಿಲ್ಲ, ಅನುಮತಿ ಪತ್ರದ ಮೇಲೆ ಭಾಗ್ಯ ಸೈನ್ ಮಾಡಿಲ್ಲ. ನೀವು ಹುಡುಗಿಯರೇ ಸೇರಿಕೊಂಡು ಎಲ್ಲಿಗೂ ಹೋಗುವುದು ಬೇಡ. ಸುಮ್ಮನೆ ಮನೆಯಲ್ಲಿ ಬಿದ್ದಿರು ಎಂಬ ಮಾತು ಕೇಳಿಬರುತ್ತದೆ. ತನ್ವಿ ಕೋಪದಲ್ಲಿ ಊಟ ಬಿಟ್ಟು ಕೂರುತ್ತಾಳೆ. ಇದಕ್ಕೆ ಭಾಗ್ಯ ಕಡೆಯಿಂದ ಮತ್ತೆ ಬೈಗುಳ ಸಿಗುತ್ತದೆ. ಆಗ ತನ್ವಿ ಮತ್ತೊಂದು ಪ್ಲ್ಯಾನ್ ಮಾಡುತ್ತಾಳೆ.
ರೆಸಾರ್ಟ್‌ಗೆ ಹೋಗಲು ಮನೆಯಲ್ಲಿ ಅನುಮತಿ ಸಿಕ್ಕಿಲ್ಲ ಎಂದು ತನ್ವಿ, ಅನುಮತಿ ಪತ್ರಕ್ಕೆ ಅಪ್ಪನ ಸಹಿ ಪಡೆಯಲು ಉಪಾಯದಿಂದ ಅಪ್ಪನನ್ನು ಕರೆಸಿಕೊಂಡಿದ್ದಾಳೆ. ತಾಂಡವ್ ಕೂಡ, ಮಗಳು ಕರೆದಿದ್ದಾಳೆ ಎಂದು ಖುಷಿಯಲ್ಲಿ ಹೊರಡುತ್ತಾನೆ. ಇದೇ ಸಮಯಕ್ಕೆ ಶ್ರೇಷ್ಠಾ ಕರೆ ಬರುತ್ತದೆ. ಆಗ ತಾಂಡವ್, ನಾನು ತನ್ವಿಯನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ತಿಂಡಿ ಬೇಡ, ನೀನು ಮತ್ತೆ ಹೊರಟು ಬಾ ಎಂದು ಹೇಳಿದ್ದಾನೆ. ಅದನ್ನು ಕೇಳಿ ಶ್ರೇಷ್ಠಾಗೆ ಕೋಪ ಬಂದಿದೆ.
ಇತ್ತ ತಾಂಡವ್ ತನ್ವಿಯನ್ನು ಭೇಟಿ ಮಾಡಿದ್ದಾನೆ. ತನ್ವಿ ಅಪ್ಪನನ್ನು ತಬ್ಬಿಕೊಂಡು ಹೊಗಳಿ, ರೆಸಾರ್ಟ್ ಪ್ರವಾಸದ ಅನುಮತಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾಳೆ. ಅದೇನು ಎಂದು ಕೂಡ ಕೇಳದೆ, ತಾಂಡವ್ ಸಹಿ ಮಾಡಿದ್ದಾನೆ. ನಾನು ಯಾವತ್ತಿದ್ರೂ ನಿನ್ನ ಜೊತೆನೇ ಇರ್ತೀನಿ ಎಂದು ತಾಂಡವ್ ಹೇಳಿದರೆ.. ಅಮ್ಮನಿಗಿಂತ ನೀವೇ ನನ್ನನ್ನು ಚೆನ್ನಾಗಿ ಅರ್ಥ ಮಾಡ್ಕೊಂಡು ಇರೋದು ತನ್ವಿ ಹೇಳಿದ್ದಾಳೆ. ಈ ಮೂಲಕ ತನ್ವಿ ನಿಧಾನವಾಗಿ ತಾಂಡವ್ ಬಲೆಗೆ ಬೀಳುತ್ತಿದ್ದಾಳೆ. ಅತ್ತ ಭಾಗ್ಯ ಒಂದೊತ್ತಿನ ಊಟಕ್ಕೆ ಊಟದ ಉದ್ಯಮ ಪ್ರಾರಂಭಿಸಿದ್ದಾಳೆ. ಆದರೆ, ಅದಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಭಾಗ್ಯಾ ಮುಂದೆ ಏನು ಮಾಡುತ್ತಾಳೆ..? ಅತ್ತ ಅಪ್ಪನಿಂದ ಸಹಿ ಪಡೆದ ತನ್ವಿ ಮನೆಯವರಿಗೆ ಹೇಳದೇ ರೆಸಾರ್ಟ್‌ಗೆ ಟ್ರಿಪ್ ಹೋಗುತ್ತಾಳ?, ಈ ವಿಚಾರ ತಿಳಿದು ಭಾಗ್ಯ ಏನು ಮಾಡುತ್ತಾಳೆ? ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ತಿಳಿದುಬರಬೇಕಿದೆ.
Chaithra Kundapura: ಚೈತ್ರಾ ಕುಂದಾಪುರ ಜೀವನವನ್ನೇ ಬದಲಾಯಿಸಿತು ಬಿಗ್ ಬಾಸ್: ಆಫರ್ ಮೇಲೆ ಆಫರ್