ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muddu Sose: ಇಂದಿನಿಂದ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಶುರು: ಕಥೆ ಏನು?

ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಈ ಸಮಯದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಳೆದ ಶುಕ್ರವಾರ ಕೊನೆಗೊಂಡಿತ್ತು.

ಇಂದಿನಿಂದ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಶುರು

Muddu Sose serial

Profile Vinay Bhat Apr 14, 2025 7:21 AM

ಕಲರ್ಸ್​ ಕನ್ನಡದಲ್ಲಿ ಇಂದಿನಿಂದ ಮುದ್ದು ಸೊಸೆ (Muddu Sose Serial) ಎಂಬ ಹೊಸ ಧಾರಾವಾಹಿ ಶುರುವಾಗಲಿದೆ. ಈ ಸೀರಿಯಲ್​ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್​ ಮುಖ್ಯಭೂಮಿಕೆಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಕೂಡ ರಿಲೀಸ್​ ಆಗಿದ್ದು, ಕುತೂಹಲ ಕೆಚ್ಚಿಸಿದೆ.

ಈ ಸೀರಿಯಲ್​ಗೆ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಪ್ರೋಮೋದಲ್ಲಿ ತ್ರಿವಿಕ್ರಮ್ ಹೆಣ್ಣು ನೋಡುವ ಗೆಟಪ್​ನಲ್ಲಿ ಕಾಣಿಸಿಕೊಂದ್ದರು. ಬಳಿಕ ಮದುವೆ ಮನೆಯಲ್ಲಿ ತ್ರಿವಿಕ್ರಮ್ ತಾಳಿ ಕಟ್ಟುವ ವೇಳೆ ಪೊಲೀಸರು ಬಂದು ತಡೆದಿದ್ದನ್ನು ತೋರಿಸಲಾಗಿತ್ತು. ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಈ ಸಮಯದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಳೆದ ಶುಕ್ರವಾರ ಕೊನೆಗೊಂಡಿತ್ತು.

ಡಾಕ್ಟರ್ ಆಗಬೇಕು ಎಂಬ ಕನಸನ್ನು ಕಾಣುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ವಿದ್ಯಾ, ಸ್ಕೂಲ್ ಬೆಂಚ್‌ನಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆಯನ್ನು ಹೇಳುತ್ತದೆ ಮುದ್ದು ಸೊಸೆ ಸೀರಿಯಲ್‌. ಮನಸ್ತುಂಬಾ ಓದು ತುಂಬಿರುವ, ಮನಸೊಪ್ಪದ ಮದುವೆಯಾಗಿರುವ ಮುದ್ದು ಸೊಸೆ ಮನೆಮಂದಿಯೆಲ್ಲ ಸೇರಿ ನೋಡಲೇಬೇಕಾದ ಧಾರಾವಾಹಿ. ಪ್ರೀತಿ ಸಂಬಂಧಗಳ ಆತ್ಮವಿಶ್ವಾಸ ಪ್ರಬಲ ಸಂಕಲ್ಪ ಹೊಂದಿರುವ ನಾಯಕಿಯ ಸುತ್ತ ಹೆಣೆದಿರುವ ಕಥಾ ಹಂದರದಿಂದ ಈ ಧಾರಾವಾಹಿ ಕೂಡಿದೆ.



ಸಕ್ಕರೆ ನಗರ ಮಂಡ್ಯದಲ್ಲಿ ಚಿತ್ರೀಕರಿಸಲಾಗಿರುವ ಈ ಧಾರಾವಾಹಿ, ಭಾರತದ ಗ್ರಾಮೀಣ ಕುಟುಂಬಗಳ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಈ ಎಲ್ಲ ಚೌಕಟ್ಟಿನಲ್ಲಿ ಒಬ್ಬ ಮಹಿಳೆಯ ರೂಪಾಂತರವನ್ನು ಜನರಿಗೆ ಮನಮುಟ್ಟುವಂತೆ ಹೇಳುತ್ತದೆ. ಧಾರಾವಾಹಿಯು ಪ್ರೀತಿ, ಗೌರವ ಮತ್ತು ಕುಟುಂಬ ಮೌಲ್ಯಗಳ ನಡುವಿನ ಸಮತೋಲನವನ್ನು ಪ್ರತಿಬಿಂಬಿಸುತ್ತ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತ ಹೋಗುತ್ತದೆ.

ಅಂದಹಾಗೆ ಮುದ್ದು ಸೊಸೆ ತಮಿಳು ಧಾರಾವಾಹಿಯ ರಿಮೇಕ್​ ಆಗಿದೆ. ತ್ರಿವಿಕ್ರಮ್ ನಾಯಕರಾಗಿ ಪ್ರತಿಮಾ ಠಾಕುರ್ ನಾಯಕಿಯಾಗಿರುವ, ಮುನಿ ಮತ್ತು ಹರಿಣಿ ಶ್ರೀಕಾಂತ್ ತಾರಾಗಣದ ಈ ಬಹುನಿರೀಕ್ಷಿತ ಧಾರಾವಾಹಿ ಏಪ್ರಿಲ್ 14 ರಿಂದ (ಇಂದಿನಿಂದ) ಸೋಮವಾರದಿಂದ ಶುಕ್ರವಾರ ರಾತ್ರಿ 7.30 ಕ್ಕೆ ಪ್ರಸಾರವಾಗಲಿದೆ.

Karna Serial: ಕರ್ಣ ಧಾರಾವಾಹಿಯ ಮತ್ತೊಂದು ವಿಡಿಯೋ ಲೀಕ್: ಭವ್ಯಾ-ನಮೃತಾ ಏನು ಮಾಡ್ತಿದ್ದಾರೆ ನೋಡಿ