#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gautam Adani: ಮಗನ ಮದುವೆ ಮಾಡಿ ಬರೋಬ್ಬರಿ ಹತ್ತು ಸಾವಿರ ಕೋಟಿ ದಾನ ಮಾಡಿದ ಗೌತಮ್‌ ಅʼದಾನಿʼ

ಭಾರತದ ನಂ.1 ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ ಅವರ ಕಿರಿಯ ಪುತ್ರ ಜೀತ್‌ ವಿವಾಹವು ಶುಕ್ರವಾರ ಸರಳವಾಗಿ ನೆರವೇರಿತು. ಸಂಬಂಧಿಕರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದ ಜೀತ್‌ ಅವರು ವಜ್ರೋದ್ಯಮಿಯ ಪುತ್ರಿ ದಿವಾ ಶಾ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮಗನ ಮದುವೆಯನ್ನು ಸರಳವಾಗಿ ನೆರವೇರಿಸಿರುವ ಗೌತಮ್‌ ಅದಾನಿ ವಿವಿಧ ಸಾಮಾಜಿಕ ಕಾರ್ಯಗಳಿಗೆ ಬರೋಬ್ಬರಿ 10000 ಕೋಟಿ ರು. ನೆರವನ್ನು ಘೋಷಿಸಿದ್ದಾರೆ.

ಮಗನ ಮದುವೆ ಮಾಡಿ 10 ಸಾವಿರ ಕೋಟಿ ದಾನ ಮಾಡಿದ ಗೌತಮ್‌ ಅದಾನಿ!

Gautam Adani

Profile Deekshith Nair Feb 8, 2025 8:54 AM

ಮುಂಬೈ: ಇತ್ತೀಚೆಗಷ್ಟೇ ಶ್ರೀಮಂತ ಉದ್ಯಮಿ ಮುಖೇಶ್‌ ಅಂಬಾನಿ(Mukesh Ambani) ತಮ್ಮ ಮಗನ ಮದುವೆಯನ್ನು ಅತ್ಯಂತ ಅದ್ಧೂರಿ ಮತ್ತು ಆಡಂಬರದಿಂದ ನೆರವೇರಿಸುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು. ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿ ಮದುವೆ ಮಾಡಿದ ಕಾರಣಕ್ಕಾಗಿ ಟೀಕೆಗೂ ಗುರಿಯಾಗಿದ್ದರು. ಆದರೆ ಭಾರತದ ನಂ.1 ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ(Gautam Adani) ಅವರ ಕಿರಿಯ ಪುತ್ರ ಜೀತ್‌(Jeet) ವಿವಾಹವು ಶುಕ್ರವಾರ(ಫೆ.7) ಸರಳವಾಗಿ ನೆರವೇರಿತು. ಸಂಬಂಧಿಕರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದ ಜೀತ್‌ ಅವರು ವಜ್ರೋದ್ಯಮಿಯ ಪುತ್ರಿ ದಿವಾ ಶಾ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮಗನ ಮದುವೆಯನ್ನು ಸರಳವಾಗಿ ನೆರವೇರಿಸಿರುವ ಗೌತಮ್‌ ಅದಾನಿ ವಿವಿಧ ಸಾಮಾಜಿಕ ಕಾರ್ಯಗಳಿಗೆ ಬರೋಬ್ಬರಿ 10000 ಕೋಟಿ ರು. ನೆರವನ್ನು ಘೋಷಿಸಿದ್ದಾರೆ.

ಶ್ರೀಮಂತ ಉದ್ಯಮಿಗಳ ಮಕ್ಕಳ ಮದುವೆ ಎಂದರೆ ದುಂದು ವೆಚ್ಚ ಮತ್ತು ಆಡಂಬರ ಎಂಬುದು ಸಾಮಾನ್ಯವಾದ ತಿಳಿವಳಿಕೆ. ಆದರೆ ಗೌತಮ್‌ ಅದಾನಿ ಮಗನ ವಿವಾಹವನ್ನು ಯಾವುದೇ ಅದ್ಧೂರಿ ಮತ್ತು ತೋರಿಕೆಯಿಂದ ಮಾಡದೆ ಆಪ್ತೇಷ್ಟರ ಸಮ್ಮುಖದಲ್ಲಿಯೇ ಸರಳವಾಗಿ ನೆರವೇರಿಸುವ ಮೂಲಕ ಸುದ್ದಿಯಾಗಿದ್ದಾರೆ. ಅದಾನಿ ಕುಟುಂಬದ ಕುಡಿಯ ಮದುವೆ ಸರಳವಾಗಿ ನಡೆದರೂ, ಹಲವು ಸಾಮಾಜಿಕ ಕಾರ್ಯಗಳಿಗಾಗಿ ಬರೋಬ್ಬರಿ 10 ಸಾವಿರ ಕೋಟಿ. ರು ದೇಣಿಗೆ ನೀಡುವ ಮೂಲಕ ಅದಾನಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಈ ಮೊತ್ತವು, ಉದ್ಯಮಿ ಮುಕೇಶ್‌ ಅಂಬಾನಿ ಪುತ್ರನ ಮದುವೆಯ ವೆಚ್ಚದ ಎರಡರಷ್ಟಿದೆ ಎನ್ನಲಾಗಿದೆ. ಈ ಹಣವನ್ನು ಜನ ಸಾಮಾನ್ಯರಿಗಾಗಿ ಕೈಗೆಟಕುವ ದರದಲ್ಲಿ ವಿಶ್ವ ದರ್ಜೆಯ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಶಾಲೆಗಳು, ಉದ್ಯೋಗಾವಕಾಶ ನೀಡುವ ಜಾಗತಿಕ ಕೌಶಲ್ಯ ಸಂಸ್ಥೆಗಳ ಸ್ಥಾಪನೆ ಯೋಜನೆಗೆ ಮೀಸಲಿಡಲಾಗಿದೆ.



ಇನ್ನು ಪ್ರತಿ ವರ್ಷ 500 ದಿವ್ಯಾಂಗ ವಧುಗಳ ವಿವಾಹಕ್ಕೆ ತಲಾ 10 ಲಕ್ಷ ರು. ನೀಡುವುದಾಗಿಯೂ ಈಗಾಗಲೇ ಜೀತ್‌ ಅದಾನಿ - ದಿವಾ ಶಾ ಜೋಡಿ ಘೋಷಿಸಿದೆ.

ಈ ಸುದ್ದಿಯನ್ನೂ ಓದಿ: Delhi Election Result: ದಿಲ್ಲಿ ಚುನಾವಣೆ ಫಲಿತಾಂಶ ಇಂದು ಪ್ರಕಟ; ಗೆಲುವಿನ ಮಾಲೆ ಯಾರ ಕೊರಳಿಗೆ?

ಮಗನ ಮದುವೆಯ ಸಂಭ್ರಮದಲ್ಲಿ ಅದಾನಿ!

ಎಕ್ಸ್‌ನಲ್ಲಿ ಮಗನ ಮದುವೆ ಪೋಟೊ ಹಂಚಿಕೊಂಡಿರುವ ಗೌತಮ್ ಅದಾನಿ, "ದೇವರ ಆಶೀರ್ವಾದದಿಂದ ಜೀತ್ ಮತ್ತು ದಿವಾ ಇಂದು ದಾಂಪತ್ಯ ಬದುಕಿಗೆ ಕಾಲಿರಿಸಿದ್ದಾರೆ. ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪ್ರೀತಿಪಾತ್ರರ ಸಮ್ಮುಖದಲ್ಲಿ ವಿವಾಹ ನಡೆಯಿತು. ಇದು ಚಿಕ್ಕದಾದ ಮತ್ತು ಅತ್ಯಂತ ಖಾಸಗಿ ಕಾರ್ಯಕ್ರಮವಾಗಿತ್ತು, ಆದ್ದರಿಂದ ನಾವು ಬಯಸಿದ್ದರೂ ಸಹ ಎಲ್ಲಾ ಹಿತೈಷಿಗಳನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ದಿವಾ ಮತ್ತು ಜೀತ್‌ಗೆ ನಿಮ್ಮೆಲ್ಲರಿಂದ ಆಶೀರ್ವಾದಗಳನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.