ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Solar Eclipse 2025: ಸೂರ್ಯಗ್ರಹಣ ಬರಿಗಣ್ಣಲ್ಲಿ ನೋಡಬಹುದೆ? ನೋಡಿದ್ರೆ ಏನಾಗುತ್ತದೆ? ಇಲ್ಲಿದೆ ಉತ್ತರ

Solar Eclipse 2025: ಗ್ರಹಣವನ್ನು ನೋಡಬಾರದು ಎಂಬ ನಂಬಿಕೆ ಇದೆ. ಮಾ. 29ರಂದು ಈ ವರ್ಷದ ಅಂದರೆ 2025ರ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತದೆ. ಇದನ್ನು ಬರಿಗಣ್ಣಿನಿಂದ ನೋಡಬಾರದು. ಈ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೂ ಗ್ರಹಣ ನೋಡುವಾಗ ನೀವು ಮಾಡಬೇಕಾಗಿರುವುದೇನು? ಸೂರ್ಯ ಗ್ರಹಣವೆಂದರೇನು? ಗ್ರಹಣ ಆಗೋದು ಹೇಗೆ? ಇಲ್ಲಿದೆ ವಿವರ.

ಸೂರ್ಯ ಗ್ರಹಣವನ್ನು ಬರಿಗಣ್ಣಿಂದ ನೋಡುವ ಸಾಹಸ ಮಾಡಬೇಡಿ

ಸೂರ್ಯಗ್ರಹಣ

Profile Sushmitha Jain Mar 29, 2025 12:10 PM

ಹೊಸದಿಲ್ಲಿ: ಗ್ರಹಣ (Eclipse) ಎನ್ನುವುದು ಖಗೋಳ(Astronomy)ದಲ್ಲಿ ನಡೆಯುವ ಒಂದು ವಿಶೇಷ ಬದಲಾವಣೆ. ಈ ಬದಲಾವಣೆಯು ಭೂಮಿಯ ಮೇಲೆ ಸಾಕಷ್ಟು ಪ್ರಭಾವ ಹಾಗೂ ಬದಲಾವಣೆಯನ್ನು ಉಂಟು ಮಾಡುತ್ತದೆ. ಧಾರ್ಮಿಕ ಚಿಂತನೆಯ ಪ್ರಕಾರ ಗ್ರಹಣ ಎನ್ನುವುದು ಸೂತಕ ಹಾಗೂ ಸೃಷ್ಟಿಯಲ್ಲಿ ಉಂಟಾಗುವ ಕರಾಳ ಸಮಯ ಎಂದು ಹೇಳಲಾಗುತ್ತದೆ. ಅದೇ ವೈಜ್ಞಾನಿಕ ಚಿಂತನೆಯ ಪ್ರಕಾರ ಖಗೋಳದಲ್ಲಿ ಇರುವ ಗ್ರಹಳ ನಡುವೆ ಉಂಟಾಗುವ ಅಡೆತಡೆಗಳನ್ನು ಗ್ರಹಣ ಎಂದು ಪರಿಗಣಿಸಲಾಗುತ್ತದೆ. ಇದೀಗ ಈ ವರ್ಷದ ಅಂದರೆ 2025ರ ಮೊದಲ ಸೂರ್ಯ ಗ್ರಹಣ(Solar Eclipse 2025)ವು ಇದೇ ಮಾ. 29ರಂದು ಅಂದರೆ ಇಂದು ಸಂಭವಿಸಲಿದೆ.

ಈ ಗ್ರಹಣವು ಮಧ್ಯಾಹ್ನ 2:20ಕ್ಕೆ ಶುರುವಾಗಿ ಸಂಜೆ 6:16ರವರೆಗೆ ಇರಲಿದೆ. ಆದರೆ ಈ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಬನ್ನಿ ಸೂರ್ಯ ಗ್ರಹಣವೆಂದರೇನು? ಗ್ರಹಣ ಆಗೋದು ಹೇಗೆ? ಆರೋಗ್ಯದ ದೃಷ್ಟಿಯಿಂದ ಹೇಗೆ ಗ್ರಹಣ ನೋಡಬೇಕು ಎಂಬ ಮಾಹಿತಿ ಇಲ್ಲಿದೆ.

ಸೂರ್ಯ ಗ್ರಹಣವೆಂದರೇನು?

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ ಅದನ್ನು ಸಂಪೂರ್ಣ ಸೂರ್ಯಗ್ರಹಣ ಎನ್ನುವರು. ಆದರೆ ಅದು ಸಂಪೂರ್ಣವಾಗಿ ಆವರಿಸಲು ಸಾಧ್ಯವಾಗದಿದ್ದಾಗ ಭಾಗಶಃ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ.

ಯಾವಾಗ ಮತ್ತು ಎಲ್ಲಿ ಗೋಚರ?

ಇಂದು ಭೂಮಿಯ ಮೇಲೆ ಭಾಗಶಃ ಸೂರ್ಯ ಗ್ರಹಣ ಸುಮಾರು ನಾಲ್ಕು ಗಂಟೆಗಳ ಕಾಲ ಇರುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:20ರಿಂದ ಸಂಜೆ 6:30ರವರೆಗೆ ಸಂಭವಿಸಲಿದೆ. ಕೆನಡಾದ ಉತ್ತರ ಕ್ವಿಬೆಕ್‌ನಲ್ಲಿ ಅತ್ಯುತ್ತಮ ನೋಟವನ್ನು ಕಾಣಬಹುದು. ಇಲ್ಲಿ ಚಂದ್ರನು ಸೂರ್ಯನ ಶೇ.93.1ರಷ್ಟನ್ನು ಆವರಿಸುತ್ತಾನೆ. ಈ ಪ್ರದೇಶದಲ್ಲಿ ಸೂರ್ಯೋದಯದ ಸಮಯದಲ್ಲಿ ಗ್ರಹಣ ಗೋಚರಿಸುತ್ತದೆ.

ಬರಿಗಣ್ಣಿನಿಂದ ನೋಡಬಾರದು?

ಯಾರೂ ಸಹ ಯಾವುದೇ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಟೆಲಿಸ್ಕೋಪ್, ದುರ್ಬೀನ್, ಕ್ಯಾಮೆರಾಗಳಿಂದ ಕೂಡ ಸೂರ್ಯಗ್ರಹಣವನ್ನು ನೋಡುವುದು ಹಾನಿಕಾರಕ. ಸೂರ್ಯ ಗ್ರಹಣವನ್ನು ಯಾವಾಗಲೂ ವಿಶೇಷವಾದ ಗ್ರಹಣ ವೀಕ್ಷಣಾ ಕನ್ನಡಕಗಳಿಂದ ಮಾತ್ರ ನೋಡಬೇಕು. ಪಿನ್-ಹೋಲ್‌ಗಳ ಮೂಲಕ ಸೂರ್ಯನ ಪ್ರಕ್ಷೇಪಣವನ್ನು ಯಾವುದೇ ಹಾನಿಯಿಲ್ಲದೆ ನೋಡಬಹುದು. ಎಕ್ಸ್-ರೇ ಹಾಳೆಗಳಿಂದ ಕೂಡ ಗ್ರಹಣವನ್ನು ನೋಡಬಾರದು.

ಸೂರ್ಯ ಗ್ರಹಣ ನೈಸರ್ಗಿಕ ಕ್ರಿಯೆಯಾದರೂ ಬರಿಗಣ್ಣಿನಲ್ಲಿ ನೋಡವುದರಿಂದ ಅಪಾಯ ಉಂಟಾಗುತ್ತದೆ. ಸೂರ್ಯ ಗ್ರಹಣದ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಬರಿಗಣ್ಣಿನ ಮೇಲೆ ಬಿದ್ದಾಗ ಕಣ್ಣಿನ ನ್ಯೂನತೆ ಅಲ್ಲದೇ ದೇಹದ ಒಳಭಾಗದಲ್ಲಿ ನ್ಯೂನತೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ.

ಸೋಲಾರ್‌ ಕನ್ನಡಕಗಳಲ್ಲಿ ವೀಕ್ಷಿಸಿ

ಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಕಣ್ಣಿಗೆ ಅಪಾಯಕಾರಿ. ಬದಲಿಗೆ ಸೋಲಾರ್‌ ಕನ್ನಡಕ ಮತ್ತು ವೆಲ್ಡರ್‌ ಗ್ಲಾಸ್‌-14 ಗಳನ್ನು ಬಳಸಿ ನೋಡುವುದು ಕಣ್ಣಿಗೆ ಸುರಕ್ಷಿತ. ಸೋಲಾರ್‌ ಕನ್ನಡಕ ಬಳಸಿ ನೋಡುವುದರಿಂದ ಸೂರ್ಯನ ಪ್ರಖರತೆ ಕಡಿಮೆಯಿರುತ್ತದೆ. ಹೀಗಾಗಿ ಕಣ್ಣಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಖಗೋಳ ವಿಜ್ಞಾನಿಗಳು ಸಲಹೆ ನೀಡುತ್ತಾರೆ.

ಈ ಸುದ್ದಿಯನ್ನು ಓದಿ: Astro Tips: ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ ಮಂಗಳವಾರ ತಪ್ಪದೇ ಆಂಜನೇಯನಿಗೆ ಈ ವಸ್ತುಗಳನ್ನು ಅರ್ಪಿಸಿ

ಸೂರ್ಯಗ್ರಹಣ ವೀಕ್ಷಣೆ ಹೇಗೆ?

  • ಸೂರ್ಯನನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು.
  • ಸೋಲಾರ್‌ ಫಿಲ್ಟರ್‌ ಅಥವಾ ಸೌರ ಕನ್ನಡಕಗಳನ್ನು ಬಳಸಿಯೇ ಸೂರ್ಯನನ್ನು ವೀಕ್ಷಿಸಬೇಕು.
  • ಗ್ರಹಣ ವೀಕ್ಷಣೆಗೆ ತಜ್ಞರ ಅಥವಾ ಮಾರ್ಗದರ್ಶಕರ ಸಲಹೆಗಳನ್ನು ಪಡೆಯಬೇಕು.
  • ಗ್ರಹಣ ವೀಕ್ಷಣೆಗೆ ಗುಣಮಟ್ಟದ ಸೋಲಾರ್‌ ಫಿಲ್ಟರ್‌ಗಳನ್ನು ಉಪಯೋಗಿಸಬೇಕು.
  • ಮಾರ್ಗದರ್ಶಕರ ಉಪಸ್ಥಿತಿಯಲ್ಲಿ ಮಕ್ಕಳು ಸೋಲಾರ್‌ ಪಿಲ್ಟರ್‌ಗಳನ್ನು ಬಳಸಿ ವೀಕ್ಷಿಸುವುದು ಸೂಕ್ತ.
  • ಸೂರ್ಯನನ್ನು ಕೇವಲ ಕೆಲವೇ ಸೆಕೆಂಡ್‌ಗಳಲ್ಲಿ ವೀಕ್ಷಿಸಬೇಕು. ಪದೇ ಪದೇ ವೀಕ್ಷಿಸಬಾರದು.
  • ಕಣ್ಣುಗಳ ಕಾಯಿಲೆ ಇರುವವರು ಸೂರ್ಯನನ್ನು ವೀಕ್ಷಿಸಬಾರದು.
  • ಸೋಲಾರ್‌ ಫಿಲ್ಟರ್‌ಗಳ ಫಿಲ್ಮ್‌ ಭಾಗವನ್ನು ಮುಟ್ಟಬಾರದು ಹಾಗೂ ಮಡಚಬಾರದು.
  • ಸೋಲಾರ್‌ ಫಿಲ್ಟರ್‌ಗಳು ಹಾಳಾಗಿದ್ದಲ್ಲಿ ಅವುಗಳನ್ನು ಬಳಸಿ ಸೂರ್ಯನನ್ನು ನೋಡಬಾರದು.