Terrorist Attack: ಜಮ್ಮು & ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ಸೇನೆ ವಾಹನದ ಮೇಲೆ ಗುಂಡಿನ ದಾಳಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರಿದಿದೆ. ರಾಜೌರಿಯ ಸುಂದರ್‌ಬಾನಿ ಪ್ರದೇಶದಲ್ಲಿ ಬುಧವಾರ (ಫೆ. 26) ಮಧ್ಯಾಹ್ನ ಭಾರತೀಯ ಸೇನೆಯ ) ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಇದೀಗ ಇಡೀ ಪ್ರದೇಶವನ್ನು ಭಾರತೀಯ ಭದ್ರತಾ ಪಡೆ ಸುತ್ತುವರಿದಿದೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu Kashmir)ದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರಿದಿದೆ. ರಾಜೌರಿಯ ಸುಂದರ್‌ಬಾನಿ ಪ್ರದೇಶದಲ್ಲಿ ಬುಧವಾರ (ಫೆ. 26) ಮಧ್ಯಾಹ್ನ ಭಾರತೀಯ ಸೇನೆಯ (Indian Army Vehicle) ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ (Terror Attack). ಶಂಕಿತ ಭಯೋತ್ಪಾದಕರು ಭಾರತೀಯ ಸೈನಿಕರ ವಾಹನವನ್ನು ಗುರಿಯಾಗಿಸಿ ದಟ್ಟ ಅರಣ್ಯ ಪ್ರದೇಶದಿಂದ ಹಲವು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಇದೀಗ ಇಡೀ ಪ್ರದೇಶವನ್ನು ಭಾರತೀಯ ಭದ್ರತಾ ಪಡೆ ಸುತ್ತುವರಿದಿದೆ.
ಸುಂದರ್‌ಬಾನಿ ಮಲ್ಲಾ ರಸ್ತೆಯ ಫಾಲ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ 9 ಜೆಎಕೆ (9 JAK) ವಾಹನದ ಮೇಲೆ 1 ಅಥವಾ 2 ಸುತ್ತು ಗುಂಡು ಹಾರಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
#WATCH | Rajouri, J&K | Indian Army on high alert after firing on an Army vehicle in the Sunderbani sector today
— ANI (@ANI) February 26, 2025
(Visuals deferred by unspecified time) pic.twitter.com/tIQQD6jHsH
"ಮಧ್ಯಾಹ್ನ 1 ಗಂಟೆ ಎಲ್ಒಸಿಗೆ ಸಮೀಪವಿರುವ ಸುಂದರ್‌ಬಾನಿ-ಮಲ್ಲಾ ರಸ್ತೆಯ ಅರಣ್ಯ ಪ್ರದೇಶದ ವಾಟರ್ ಟ್ಯಾಂಕ್ ಬಳಿಯ ಫಾಲ್ ಗ್ರಾಮದಲ್ಲಿ ಸೇನಾ ವಾಹನದ ಮೇಲೆ ಗುಂಡು ಹಾರಿಸಲಾಯಿತು" ಎಂದು ಅಧಿಕಾರಿಗಳು ತಿಳಿಸಿದ್ದಾರೆ. 9 ಜೆಎಕೆ ರೈಫಲ್‌ಗೆ ಸೇರಿದ ಗಸ್ತು ವಾಹನದ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ.
ಸದ್ಯ ಇಡೀ ಪ್ರದೇಶವನ್ನು ಸೇನೆ ಸುತ್ತುವರಿದಿದೆ. ಸುಂದರ್‌ಬಾನಿಯಲ್ಲಿ ನಡೆದ ಗುಂಡಿನ ದಾಳಿಯನ್ನು ರಕ್ಷಣಾ ವಕ್ತಾರರು ದೃಢಪಡಿಸಿದ್ದು, ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದೆ.