ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಬಿಸಿ ಬಿಸಿ ನೂಡಲ್ಸ್‌ ಬಾಲ್ಕನಿಯಲ್ಲಿಟ್ಟ ಕ್ಷಣಾರ್ಧದಲ್ಲಿ ಏನಾಯ್ತು ಗೊತ್ತಾ? ವಿಡಿಯೊ ಇದೆ

ಕೆನಡಾದಲ್ಲಿ ವಾಸಿಸುವ ಭಾರತೀಯ ಮೂಲದ ಮಹಿಳೆಯೊಬ್ಬರು ಇತ್ತೀಚೆಗೆ ಅಲ್ಲಿನ ವಾತಾವರಣ ಎಷ್ಟು ತಂಪಾಗಿದೆ ಎಂಬುದನ್ನು ಮ್ಯಾಗಿ ನೂಡೆಲ್ಸ್‌ ಮೂಲಕ ಸಾಬೀತುಪಡಿಸಿದ್ದಾಳೆ. ಅದರ ವಿಡಿಯೊವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral Video) ಆಗಿದೆ. ಈ ನೂಡಲ್ಸ್‌ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಬಿಸಿ ಬಿಸಿ ನೂಡಲ್ಸ್‌ ಬಾಲ್ಕನಿಯಲ್ಲಿಟ್ಟ ಕ್ಷಣಾರ್ಧದಲ್ಲಿ ಏನಾಯ್ತು ನೋಡಿ!

Profile pavithra Feb 26, 2025 3:42 PM

ಒಟ್ಟಾವಾ: ಇತ್ತೀಚೆಗೆ ತೀರಾ ಚಳಿ ಇರುವ ಕಾರಣ ಫ್ರಿಜ್‌ನಲ್ಲಿದ್ದ ಹಾಲನ್ನು ಬಾಲ್ಕನಿಯಲ್ಲಿಟ್ಟ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆದರೆ ಇದೀಗ ಕೆನಡಾದಲ್ಲಿ ವಾಸಿಸುವ ಭಾರತೀಯ ಮೂಲದ ಮಹಿಳೆಯೊಬ್ಬರು ನೂಡಲ್ಸ್‌ನ ವಿಡಿಯೊವೊಂದನ್ನು ಹಂಚಿಕೊಂಡಿದ್ದಾಳೆ. ಇನ್ನೇನು ತಿನ್ನಬೇಕು ಎಂದು ಬಿಸಿಬಿಸಿ ನೂಡಲ್ಸ್‌ ಮಾಡಿ ಬಾಲ್ಕನಿಯಲ್ಲಿಟ್ಟ ಮಹಿಳೆ ಕೊನೆಗೆ ನೂಡಲ್ಸ್‌ ನೋಡಿ ಸಿಕ್ಕಾಪಟ್ಟೆ ಶಾಕ್‌ ಆಗಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ಅರೆ... ಅಂಥದ್ದೇನಿದೆ ಈ ವಿಡಿಯೊದಲ್ಲಿ ಎಂಬ ಕುತೂಹಲ ನಿಮಗೂ ಇದೆಯಾ....? ಈ ವಿಶೇಷ ನೂಡಲ್ಸ್‌ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ವೈರಲ್ ವಿಡಿಯೊದಲ್ಲಿ ಮಹಿಳೆ ಆಗಷ್ಟೇ ಮಾಡಿದ ಮ್ಯಾಗಿ ಬಿಸಿ ಬಿಸಿ ನೂಡಲ್ಸ್ ಅನ್ನು ಬಟ್ಟಲಿಗೆ ಹಾಕಿಕೊಂಡು ಬಾಲ್ಕನಿಯಲ್ಲಿದ್ದ ಟೇಬಲಿನ ಮೇಲಿಟ್ಟಿದ್ದಾಳೆ. ನಂತರ ಒಂದು ಚಮಚ ನೂಡಲ್ಸ್‌ ತೆಗೆದುಕೊಂಡು ಅದನ್ನು ಬಾಟಲಿಯ ಮೇಲೆ ಇಟ್ಟು ಆಕೆ ಅಲ್ಲಿಂದ ಒಳಗೆ ಹೋಗಿದ್ದಾಳೆ. ಸ್ವಲ್ಪ ಸಮಯದ ನಂತರ ಆಕೆ ಬಂದು ನೋಡಿದಾಗ ಆಶ್ಚರ್ಯಕರವಾದ ಘಟನೆಯೊಂದು ನಡೆದಿತ್ತು. ಏನಾಗಿರಬಹುದು ಎಂಬ ಕುತೂಹಲ ನಿಮ್ಮನ್ನು ಕಾಡಿದೆಯಾ...? ಬಿಸಿ ಬಿಸಿ ನೂಡಲ್ಸ್‌ ಐಸ್‌ನಂತೆ ಹೆಪ್ಪುಗಟ್ಟಿತ್ತು.

ಐಟಿ ಉದ್ಯೋಗಿ ಶಿಖಾ ಅಗರ್‌ವಾಲ್‌ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ವಿಡಿಯೊದಲ್ಲಿ, ತಂಪಾದ ವಾತಾವರಣವು ನೂಡಲ್ಸ್ ಅನ್ನು ಹೇಗೆ ಫ್ರೀಜ್‌ ಮಾಡಿದೆ ಎಂಬುದನ್ನು ಆಕೆ ನೆಟ್ಟಿಗರಿಗೆ ತೋರಿಸಿದ್ದಾಳೆ. ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ವೈರಲ್ ಆಗಿದೆ. ಇಲ್ಲಿಯವರೆಗೆ, ಇದು ಇನ್‌ಸ್ಟಾಗ್ರಾಂನಲ್ಲಿ ಒಂಬತ್ತು ಮಿಲಿಯನ್ ವ್ಯೂವ್ಸ್ ಗಳಿಸಿದೆ ಮತ್ತು 80 ಸಾವಿರಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದೆ.

ಈ ಸುದ್ದಿಯನ್ನೂ ಓದಿ:Viral Video: ಸಿಕ್ಕಾಪಟ್ಟೆ ಚಳಿಯ ಕಾರಣದಿಂದ ಬಾಲ್ಕನಿಯಲ್ಲಿ ಈ ಯುವಕ ಮಾಡಿದ್ದೇನು?ವಿಡಿಯೊ ವೈರಲ್

ಕೆನಡಾದಲ್ಲಿ ವಾತಾವರಣ ಎಷ್ಟು ತಂಪಾಗಿದೆ ಎಂಬುದನ್ನು ತೋರಿಸುವ ವಿಡಿಯೊವೊಂದು ಈ ಹಿಂದೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿಂದೆ ಕೆನಡಾದಲ್ಲಿ ವಾಸವಾಗಿದ್ದ ತನ್ನ ಗುಜರಾತಿ ಸ್ನೇಹಿತ ವಿದ್ಯುತ್ ಬಿಲ್ ಅನ್ನು ಹೇಗೆ ಉಳಿಸಿದ್ದಾನೆ ಎಂಬುದನ್ನು ನೆಟ್ಟಿಗರೊಬ್ಬ ಬಹಿರಂಗಪಡಿಸಿದ್ದ. ತನ್ನ ಸ್ನೇಹಿತ ಫ್ರಿಜ್ ಒಳಗೆ ವಸ್ತುಗಳನ್ನು ಸಂಗ್ರಹಿಸುವ ಬದಲು ಅದನ್ನು ಖಾಲಿ ಮಾಡಿ ಅದರಲ್ಲಿದ್ದ ಹಾಲಿನ ಬಾಟಲಿ ಸೇರಿ ಎಲ್ಲಾ ವಸ್ತುಗಳನ್ನು ತನ್ನ ಬಾಲ್ಕನಿಯ ಹೊರಗೆ ಇರಿಸಿದ್ದನು. ಆ ಮೂಲಕ ಕೆನಡಾದ ವಾತಾವರಣ ಎಷ್ಟು ತಂಪಾಗಿತ್ತು ಎಂಬುದನ್ನು ಆತ ಸಾಬೀತುಪಡಿಸಿದ್ದನು. ಇದನ್ನು ನೆಟ್ಟಿಗರು ನೋಡಿ ಆಶ್ಚರ್ಯಗೊಂಡಿದ್ದರು.

ಫ್ರಿಜ್‍ನಿಂದ ಬರುವ ಕರೆಂಟ್ ಬಿಲ್‍ ಅನ್ನು ಕಡಿಮೆ ಮಾಡಲು ತನ್ನ ಸ್ನೇಹಿತ ಈ 'ಜುಗಾಡ್' ಕೆಲಸ ಮಾಡಿದ್ದಾನೆ ಎಂದು ಆತ ಹೇಳಿದ್ದಾನೆ. ಮತ್ತು ಕೆನಡಾದಲ್ಲಿ ಹೊರಗಿನ ತಾಪಮಾನವು ಮೈನಸ್ ಡಿಗ್ರಿ ಸೆಲ್ಸಿಯಸ್ ಆಗಿದ್ದು, ಅಲ್ಲಿ ಆಹಾರ ಪದಾರ್ಥಗಳನ್ನು ಸುಲಭವಾಗಿ ಸಂಗ್ರಹಿಸಬಹುದು ಎಂದು ಆತ ತಿಳಿಸಿದ್ದಾನೆ.