ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Roopa Gururaj Column: ಶಿವನ ಸಾಮೀಪ್ಯ ಪಡೆದುಕೊಂಡ ನಂದಿ

ನಂದಿಯು ನೋಡಲು ಬಹಳ ಮುದ್ದಾಗಿದ್ದು ಬುದ್ಧಿವಂತನಾಗಿದ್ದ. ಆತ ಸ್ವಲ್ಪ ದೊಡ್ಡವ ನಾದಂತೆ, ‘ಮಿತ್ರ’ ಮತ್ತು ‘ವರುಣ’ ಎಂಬ ಇಬ್ಬರು ಮಹಾನ್ ತಪಸ್ವಿಗಳು ಅವರ ಕುಟೀರಕ್ಕೆ ಬಂದು ಅಲ್ಲಿ ಕೆಲಕಾಲ ತಂಗುವುದಾಗಿ ತಿಳಿಸಿದರು. ಅದಕ್ಕೆ ಸಂತೋಷದಿಂದ ಒಪ್ಪಿದ ಶಿಲಾ ಧರನು, ಆ ತಪಸ್ವಿಗಳಿಗೆ ಬೇಕಾದುದೆಲ್ಲವನ್ನೂ ಒದಗಿಸುವಂತೆ, ಅವರ ಅನುಷ್ಠಾನ ಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಮತ್ತು ಸಮರ್ಪಕವಾಗಿ ಅತಿಥಿ ಸತ್ಕಾರವನ್ನು ಮಾಡುವಂತೆ ನಂದಿಗೆ ತಿಳಿಸಿದ

ಶಿವನ ಸಾಮೀಪ್ಯ ಪಡೆದುಕೊಂಡ ನಂದಿ

ಒಂದೊಳ್ಳೆ ಮಾತು

ಶಿಲಾಧರ ಎಂಬ ಋಷಿಯು ಶಿವನ ಪರಮಭಕ್ತನಾಗಿದ್ದ. ಈತ ಶಿವನನ್ನು ಕುರಿತು ತಪಸ್ಸು ಮಾಡಿ, ತನಗೆ ಸಂತಾನಭಾಗ್ಯ ಕರುಣಿಸುವಂತೆ ಬೇಡಿದ. ಅವನ ತಪಸ್ಸಿಗೆ ಮೆಚ್ಚಿದ ಶಿವ ‘ತಥಾಸ್ತು’ ಎಂದ. ಶಿಲಾಧರನು ಸಂತೋಷದಿಂದ ಕುಟೀರಕ್ಕೆ ಮರಳಿದ. ಕೆಲವು ದಿನಗಳ ನಂತರ ಆತ ನಿತ್ಯದ ಕ್ರಮದಂತೆ ಹೊಲದ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೇಲಿಯ ಬದಿಯಲ್ಲಿ ಅವನಿಗೆ ನವಜಾತ ಶಿಶುವೊಂದು ಕಾಣಿಸಿತು. ಅದರ ಸುತ್ತಲೂ ಸೂರ್ಯನಂಥ ತೇಜಸ್ಸು ಹರಡಿತ್ತು. ಶಿಲಾಧರನು ಆ ಮಗುವನ್ನು ಕುಟೀರಕ್ಕೆ ತೆಗೆದು ಕೊಂಡು ಬಂದು ‘ನಂದಿ’ ಎಂದು ನಾಮಕರಣ ಮಾಡಿದ.

ನಂದಿಯು ನೋಡಲು ಬಹಳ ಮುದ್ದಾಗಿದ್ದು ಬುದ್ಧಿವಂತನಾಗಿದ್ದ. ಆತ ಸ್ವಲ್ಪ ದೊಡ್ಡವ ನಾದಂತೆ, ‘ಮಿತ್ರ’ ಮತ್ತು ‘ವರುಣ’ ಎಂಬ ಇಬ್ಬರು ಮಹಾನ್ ತಪಸ್ವಿಗಳು ಅವರ ಕುಟೀರಕ್ಕೆ ಬಂದು ಅಲ್ಲಿ ಕೆಲಕಾಲ ತಂಗುವುದಾಗಿ ತಿಳಿಸಿದರು. ಅದಕ್ಕೆ ಸಂತೋಷದಿಂದ ಒಪ್ಪಿದ ಶಿಲಾಧರನು, ಆ ತಪಸ್ವಿಗಳಿಗೆ ಬೇಕಾದುದೆಲ್ಲವನ್ನೂ ಒದಗಿಸುವಂತೆ, ಅವರ ಅನುಷ್ಠಾನ ಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಮತ್ತು ಸಮರ್ಪಕವಾಗಿ ಅತಿಥಿ ಸತ್ಕಾರವನ್ನು ಮಾಡುವಂತೆ ನಂದಿಗೆ ತಿಳಿಸಿದ.

ಇದನ್ನೂ ಓದಿ: Roopa Gururaj Column: ತಲ್ಲಣಿಸದಿರು ಕಂಡ್ಯ ತಾಳು ಮನವೇ...

ಅಂತೆಯೇ ನಂದಿಯು ಆ ತಪಸ್ವಿಗಳ ಸೇವೆಯನ್ನು ಶ್ರದ್ಧಾಭಕ್ತಿಯಿಂದ ಮಾಡಿದ. ಆ ತಪಸ್ವಿಗಳು ಅಲ್ಲಿಂದ ತೆರಳುವ ಮುನ್ನ ಶಿಲಾಧರನಿಗೆ, “ನೀನು ಸುಖವಾಗಿ ಸಂತೋಷವಾಗಿ ದೀರ್ಘಾಯುಷ್ಯ ವಂತನಾಗಿ ಬಾಳು" ಎಂದು ಹರಸಿದರು.

ಅದೇ ರೀತಿಯಲ್ಲಿ, ನಂದಿಗೆ ಆಶೀರ್ವದಿಸುವ ಮುನ್ನ ತಪಸ್ವಿಗಳು ಕೆಲಕಾಲ ಮೌನ ವಾಗಿದ್ದು, ನಂತರ ಗಂಭೀರವದ ನರಾಗಿ, “ನಂದಿ, ನೀನು ನಿನ್ನ ತಂದೆಯನ್ನು ಹಾಗೂ ಗುರುವನ್ನು ಪ್ರೀತಿಯಿಂದ ಚೆನ್ನಾಗಿ ನೋಡಿಕೋ, ಅವರ ಬಗ್ಗೆ ಹೆಚ್ಚಿನ ಶ್ರದ್ಧೆವಹಿಸು" ಎಂದರು. ತನ್ನ ಮಗನಿಗೆ ಈ ತರಹ ಆಶೀರ್ವದಿಸಿದ್ದನ್ನು ಕಂಡ ಶಿಲಾಧರನು ವ್ಯಾಕುಲ ಗೊಂಡು, “ತಪಸ್ವಿಗಳೇ ಏನಾಯಿತು? ನನ್ನ ಮಗನು ನಿಮ್ಮ ಸೇವೆ ಮಾಡುವಾಗ ಏನಾ ದರೂ ಅಚಾತುರ್ಯ ವಾಯಿತೇ, ಲೋಪವಾಯಿತೇ? ಹೇಳಿ" ಎಂದು ಹೆದರಿ ಕೇಳಿದನು.

ಆಗ ಆ ತಪಸ್ವಿಗಳು, “ನಂದಿ ಹಾಗೆಲ್ಲಾ ತಪ್ಪು ಮಾಡುವವನಲ್ಲ, ಆತ ಶಿವನ ವರಪ್ರಸಾದ ದಿಂದ ದೊರೆತ ವನು. ಆದರೆ ನಾವು ನಿನ್ನ ಮಗನಿಗೆ ದೀರ್ಘಾಯುಷ್ಯವಂತನಾಗು ಎಂದು ಆಶೀರ್ವಾದ ಮಾಡಲಾಗುವುದಿಲ್ಲ. ಏನು ಮಾಡುವುದು? ನಮಗೆ ಈ ವಿಷಯವನ್ನು ಹೇಳಲು ಮನಸ್ಸಿಗೆ ನೋವಾಗುತ್ತಿದೆ. ಈ ಬಾಲಕನ ಆಯಸ್ಸು ತುಂಬಾ ಕಡಿಮೆಯಿದೆ" ಎಂದು ಹೇಳಿ ಹೊರಟುಬಿಟ್ಟರು.

ತಂದೆಯಿಂದ ಈ ವಿಷಯ ತಿಳಿದ ಬಾಲಕ ನಂದಿ ನಗುತ್ತಾ, “ನೀನೇಕೆ ಹೆದರುತ್ತೀಯಾ? ನಾನು ಶಿವನನ್ನು ಭಕ್ತಿಯಿಂದ ಆರಾಧಿಸುತ್ತೇನೆ. ನನ್ನ ಪ್ರಾರ್ಥನೆಗೆ ಅವನು ಒಲಿಯುತ್ತಾನೆ. ಶಿವನು ಬಹಳ ಶಕ್ತಿಶಾಲಿ, ಅವನಿಗೆ ಅಸಾಧ್ಯವಾದುದು ಯಾವುದಿದೆ?" ಎಂದನು. ಜತೆಗೆ, “ಶಿವನು ನನ್ನ ವಿಧಿಯನ್ನು ಖಂಡಿತ ಬದಲಾಯಿಸುತ್ತಾನೆ, ಆಶೀರ್ವದಿಸು" ಎಂದು ಹೇಳಿ, ತಂದೆಯಿಂದ ಅನುಮತಿ ಪಡೆದು, ದೂರ ಪರ್ವತಕ್ಕೆ ತೆರಳಿ ಶಿವನಾಮ ಜಪಿಸುತ್ತಾ ಘೋರ ತಪಸ್ಸು ಮಾಡಿದನು.

ಅದಕ್ಕೆ ಮೆಚ್ಚಿ ಶಿವ ಪ್ರತ್ಯಕ್ಷನಾದನು. ಶಿವನ ಭವ್ಯರೂಪವನ್ನು ಕಂಡು ಮೈಮರೆತ ನಂದಿಗೆ ‘ವರ’ ಕೇಳುವುದು ಮರೆತು ಹೋಯಿತು, ಬಾಯಿಂದ ಯಾವ ಶಬ್ದವೂ ಹೊರಡಲಿಲ್ಲ. ನಂದಿಯು ತನ್ನ ಮನದಲ್ಲೇ, “ಆಹಾ, ನಾನು ಶಿವನ ವಾಹನವಾಗುವುದಾದರೆ ಎಷ್ಟು ಚೆನ್ನಾಗಿರುತ್ತದೆ. ಆಗ ನಾನು ಯಾವಾಗಲೂ ಶಿವನ ಜತೆಯಲ್ಲೇ ಇರಬಹುದು, ಸದಾ ಕಾಲವೂ ಅವನನ್ನು ನೋಡುತ್ತಿರಬಹುದು, ಅಲ್ಲವೇ?" ಅಂದುಕೊಂಡ.

ನಂದಿಯ ಮನದ ಮಾತುಗಳನ್ನು ತಿಳಿದ ಶಿವನು ನಗುತ್ತಾ, “ಆಯಿತು ನಂದಿ, ನಿನ್ನ ಮನ ದಿಚ್ಛೆಯಂತೆ ಆಗಲಿ" ಎಂದು ವರ ನೀಡಿದ. ಅಂದಿನಿಂದ ನಂದಿಯ ಮುಖ ವೃಷಭನಂತೆ ಆಗಿ, ಶಿವನ ಪ್ರಮುಖ ವಾಹನವಾದನು ಹಾಗೂ ಶಿವನ ಎಲ್ಲಾ ಗಣಗಳಿಗೂ ನಾಯಕ ನಾದನು. ಶಿವನ ದೇಗುಲಕ್ಕೆ ಹೋದಾಗ ಅವನ ದರ್ಶನದೊಂದಿಗೆ, ನಂದಿಯ ಬಲಗಿವಿ ಯಲ್ಲಿ ಪಿಸುಮಾತಿನಲ್ಲಿ ಮನದ ಇಷ್ಟಾರ್ಥವನ್ನು ನಿವೇದಿಸಿಕೊಂಡರೆ, ಅದು ನಂದಿಯ ಮೂಲಕ ಶಿವನಿಗೆ ತಲುಪಿ ನೆರವೇರುತ್ತದೆ ಎನ್ನುವ ನಂಬಿಕೆಯಿದೆ. ಭಗವಂತನಲ್ಲಿ ಅಪರಿ ಮಿತವಾದ ಭಕ್ತಿ-ಶ್ರದ್ಧೆ -ನಂಬಿಕೆ ಇದ್ದಾಗ, ಎಂಥವರ ಜೀವನಕ್ಕೂ ಒಂದು ಸಾರ್ಥಕತೆ ಸಿಕ್ಕೇ ಸಿಗುತ್ತದೆ.