ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ENG vs AFG: ಇಂಗ್ಲೆಂಡ್‌ ವಿರುದ್ದ 177 ರನ್‌ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಇಬ್ರಾಹಿಂ ಝದ್ರಾನ್‌!

Ibrahim Zadran Scored 177 Runs against England: ಇಂಗ್ಲೆಂಡ್‌ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಅಫ್ಘಾನಿಸ್ತಾನ ತಂಡದ ಇಬ್ರಾಹಿಂ ಝದ್ರಾನ್‌ (177 ರನ್‌) ಅವರು ಹಲವು ದಾಖಲೆಗಳನ್ನು ಮುರಿದಿದ್ದಾರೆ.

177 ರನ್‌ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಇಬ್ರಾಹಿಂ ಝದ್ರಾನ್‌!

ಇಂಗ್ಲೆಂಡ್‌ ವಿರುದ್ಧ ದಾಖಲೆ ಶತಕವನ್ನು ಸಿಡಿಸಿ ಸಂಭ್ರಮಿಸಿದ ಇಬ್ರಾಹಿಂ ಝದ್ರಾನ್‌.

Profile Ramesh Kote Feb 26, 2025 6:41 PM

ಲಾಹೋರ್‌: ಇಂಗ್ಲೆಂಡ್‌ ವಿರುದ್ದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಅಫ್ಘಾನಿಸ್ತಾನ ತಂಡದ ಬ್ಯಾಟ್ಸ್‌ಮನ್‌ ಇಬ್ರಾಹಿಂ ಝದ್ರಾನ್‌ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಬುಧವಾರ ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್‌ನಲ್ಲಿ ಧೂಳೆಬ್ಬಿಸಿದ ಆಫ್ಘನ್‌ ಬ್ಯಾಟರ್‌ ಇಂಗ್ಲೆಂಡ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಇಂಗ್ಲೆಂಡ್‌ ತಂಡದ ಕೀ ಬೌಲರ್‌ ಜೋಫ್ರಾ ಆರ್ಚರ್‌, ಮಾರ್ಕ್‌ವುಡ್‌, ಜೇಮಿ ಓವರ್ಟನ್‌ ಹಾಗೂ ಆದಿಲ್‌ ರಶೀದ್‌ ಅವರಿಗೆ ಬಲಗೈ ಬ್ಯಾಟ್ಸ್‌ಮನ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಮಣ್ಣು ಮುಕ್ಕಿಸಿದರು.

ಅಫ್ಘಾನಿಸ್ತಾನ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಇಬ್ರಾಹಿಂ ಝದ್ರಾನ್‌ ಆಡಿದ 146 ಎಸೆತಗಳಲ್ಲಿ ಭರ್ಜರಿ 6 ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 177 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧಇದೇ ಟೂರ್ನಿಯ ಪಂದ್ಯದಲ್ಲಿ 165 ರನ್‌ಗಳನ್ನು ಬಾರಿಸಿದ್ದ ಇಂಗ್ಲೆಂಡ್‌ ತಂಡದ ಬೆನ್‌ ಡಕೆಟ್‌ ಅವರ ದಾಖಲೆಯನ್ನು ಆಫ್ಘನ್‌ ಬ್ಯಾಟ್ಸ್‌ಮನ್‌ ಮುರಿದಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್‌ ಹಾಗೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿಯೂ ಶತಕ ಸಿಡಿಸಿದ ಅಫ್ಘಾನಿಸ್ತಾನ ತಂಡದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಕೂಡ ಇಬ್ರಾಹಿಂ ಝದ್ರಾನ್‌ ಬರೆದಿದ್ದಾರೆ. ಅಂತಿಮವಾಗಿ ತನ್ನ ಪಾಲಿನ 50 ಓವರ್‌ಗಳಲ್ಲಿ ಅಫ್ಘಾನಿಸ್ತಾನ ತಂಡ, 7 ವಿಕೆಟ್‌ಗಳ ನಷ್ಟಕ್ಕೆ 325 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 326 ರನ್‌ಗಳನ್ನು ಕಲೆ ಹಾಕಿತು.

AUS vs ENG: ಆಸ್ಟ್ರೇಲಿಯಾ ವಿರುದ್ಧ 165 ರನ್‌ ಸಿಡಿಸಿ ಇತಿಹಾಸ ಸೃಷ್ಟಿಸಿದ ಬೆನ್‌ ಡಕೆಟ್‌!

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌

166 ಇಬ್ರಾಹಿಂ ಝದ್ರಾನ್ vs ಇಂಗ್ಲೆಂಡ್ (ಲಾಹೋರ್ 2025)

165 ಬೆನ್ ಡಕೆಟ್ vs ಆಸ್ಟ್ರೇಲಿಯಾ (ಲಾಹೋರ್ 2025)

145* ನಾಥನ್ ಆಶ್ಲೆ vs ಯುಎಸ್ಎ (ದಿ ಓವಲ್ 2004)

145 ಆಂಡಿ ಫ್ಲವರ್ vs ಭಾರತ (ಕೊಲಂಬೊ 2002)

141* ಸೌರವ್ ಗಂಗೂಲಿ vs ದಕ್ಷಿಣ ಆಫ್ರಿಕಾ (ನೈರೋಬಿ 2000)

141 ಸಚಿನ್ ತೆಂಡೂಲ್ಕರ್ vs ಆಸ್ಟ್ರೇಲಿಯಾ (ಢಾಕಾ 1998)

141 ಗ್ರೇಮ್ ಸ್ಮಿತ್ vs ಇಂಗ್ಲೆಂಡ್ (ಸೆಂಚುರಿಯನ್ 2009)



ಪಾಕಿಸ್ತಾನದಲ್ಲಿ ಅತಿ ಹೆಚ್ಚು ಒಡಿಐ ರನ್‌ ಗಳಿಸಿದ ಬ್ಯಾಟರ್ಸ್

188* ಗ್ಯಾರಿ ಕ್ರಿಸ್ಟನ್‌ vs ಯುಎಇ (ರಾವಲ್ಪಿಂಡಿ 1996)

181 ವಿವ್ ರಿಚರ್ಡ್ಸ್ vs ಶ್ರೀಲಂಕಾ (ಕರಾಚಿ 1987)

180* ಫಖಾರ್ ಝಮಾನ್ vs ನ್ಯೂಜಿಲೆಂಡ್ (ರಾವಲ್ಪಿಂಡಿ 2023)

177 ಇಬ್ರಾಹಿಂ ಝದ್ರಾನ್ vs ಇಂಗ್ಲೆಂಡ್ (ಲಾಹೋರ್ 2025)

165 ಬೆನ್ ಡಕೆಟ್ vs ಆಸ್ಪ್ರೇಲಿಯಾ (ಲಾಹೋರ್ 2025)

161 ಆಂಡ್ರ್ಯೂ ಹಡ್ಸನ್ vs ನೆದರ್ಲೆಂಡ್ಸ್‌ (ರಾವಲ್ಪಿಂಡಿ 1996)



ಅಫ್ಘಾನಿಸ್ತಾನ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳು

167* ಇಬ್ರಾಹಿಂ ಝದ್ರಾನ್ vs ಇಂಗ್ಲೆಂಡ್ (ಲಾಹೋರ್ 2025)

162 ಇಬ್ರಾಹಿಂ ಝದ್ರಾನ್ vs ಶ್ರೀಲಂಕಾ (ಪಲ್ಲೆಕೆಲೆ 2022)

151 ರಹಮಾನುಲ್ಲಾ ಗುರ್ಬಾಜ್ vs ಪಾಕಿಸ್ತಾನ (ಹಂಬಂಟೋಟ 2023)

149* ಅಜ್ಮತ್‌ವುಲ್ಲಾ ಒಮರ್ಜಾಯ್‌ vs ಶ್ರೀಲಂಕಾ (ಪಲ್ಲೆಕೆಲೆ 2024)

145 ರಹಮಾನಲ್ಲಾ ಗುರ್ಬಜ್ vs ಬಾಂಗ್ಲಾದೇಶ (ಛತ್ತೋಗ್ರಾಮ್ 2023)