ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

VID vs KER: ಕೇರಳ ವಿರುದ್ದ ರಣಜಿ ಫೈನಲ್‌ನಲ್ಲಿ ಶತಕ ಸಿಡಿಸಿದ ಡ್ಯಾನಿಶ್‌ ಮಾಳೆವರ್‌!

Who id Danish Malewar? ಪ್ರಸ್ತುತ ನಾಗ್ಪುರದ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ 2024-25ರ ರಣಜಿ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ವಿದರ್ಭ ಮತ್ತು ಕೇರಳ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುತ್ತಿರುವ ವಿದರ್ಣ ತಂಡದ ಪರ 21ರ ವಯಸ್ಸಿನ ಬ್ಯಾಟ್ಸ್‌ಮನ್‌ ಡ್ಯಾನಿಶ್‌ ಮಾಳೆವರ್‌ ಅವರು ಶತಕ ಬಾರಿಸಿದ್ದಾರೆ.

ರಣಜಿ ಟ್ರೋಫಿ ಫೈನಲ್‌ನಲ್ಲಿ ಶತಕ ಸಿಡಿಸಿದ ಡ್ಯಾನಿಶ್‌ ಮಾಳೆವರ್‌ ಯಾರು?

ಕೇರಳ ವಿರುದ್ದ ರಣಜಿ ಟ್ರೋಫಿ ಫೈನಲ್‌ನಲ್ಲಿ ಶತಕ ಸಿಡಿಸಿದ ಡ್ಯಾನಿಸ್‌ ಮಾಳೆವರ್‌.

Profile Ramesh Kote Feb 26, 2025 5:49 PM

ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇರಳ ಮತ್ತು ವಿದರ್ಭ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಆ ಮೂಲಕ ಮೊದಲು ಬ್ಯಾಟ್‌ ಮಾಡುವಂತಾದ ವಿದರ್ಭ ತಂಡ ಕಳಪೆ ಆರಂಭ ಪಡೆದಿದ್ದು, ಖಾತೆ ತೆರೆಯದೆ ಮೊದಲ ವಿಕೆಟ್ ಅನ್ನು ಕಳೆದುಕೊಂಡಿತು. 11 ರನ್‌ಗಳ ಒಳಗೆ ತಂಡವು ಆರಂಭಿಕರಾದ ಪಾರ್ಥ್ ರೆಖಾಡೆ ಮತ್ತು ಧ್ರುವ್ ಶೋರೆ ಇಬ್ಬರ ವಿಕೆಟ್‌ಗಳನ್ನು ಕಳೆದುಕೊಂಡಿತು. 24 ರನ್‌ಗಳಿಗೆ ತಂಡವು ದರ್ಶನ್ ನಲ್ಕಂಡೆ ರೂಪದಲ್ಲಿ ಮೂರನೇ ವಿಕೆಟ್ ಅನ್ನು ಕಳೆದುಕೊಂಡಿತು. ಆ ಮೂಲಕ ವಿದರ್ಭ ಆರಂಭಿಕ ಆಘಾತ ಅನುಭವಿಸಿತ್ತು.

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ 21ನೇ ವಯಸ್ಸಿನ ಡ್ಯಾನಿಶ್ ಮಾಳೆವರ್‌ ತಮ್ಮ ಸೊಗಸಾದ ಬ್ಯಾಟಿಂಗ್‌ ಮೂಲಕ ಕೇರಳ ಬೌಲರ್‌ಗಳನ್ನು ಕಾಡಿದರು.

ಕರುಣ್ ನಾಯರ್ ಜೊತೆಗೂಡಿ ಡ್ಯಾನಿಶ್ ಮಾಳೆವರ್‌ ಅದ್ಭುತ ಶತಕವನ್ನೂ ಗಳಿಸಿದರು. ರಣಜಿ ಟ್ರೋಫಿ ಫೈನಲ್‌ನಲ್ಲಿ ಶತಕ ಗಳಿಸುವ ಮೂಲಕ ಸಂಚಲನ ಸೃಷ್ಟಿಸಿದರು. ಡ್ಯಾನಿಸ್‌ 168 ಎಸೆತಗಳಲ್ಲಿ ಮೂರಂಕಿ ವೈಯಕ್ತಿಕ ಮೊತ್ತವನ್ನು ಪೂರ್ಣಗೊಳಿಸಿದರು. ಮೂರು ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಒತ್ತಡವನ್ನು ಮೆಟ್ಟಿ ನಿಂತು ಅವರು ಶತಕ ಸಿಡಿಸಿದ್ದು ವಿಶೇಷವಾಯಿತು. ಆ ಮೂಲಕ ವಿದರ್ಭ ತಂಡ ಅಪಾಯದಿಂದ ಪಾರಾಗಿತ್ತು.

Ranji Trophy: ಮುಂಬೈ ವಿರುದ್ಧ ಗೆದ್ದು ಸತತ ಎರಡನೇ ಬಾರಿ ಫೈನಲ್‌ಗೇರಿದ ವಿದರ್ಭ!

ಪಂದ್ಯದ ಮೊದಲನೇ ದಿನ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಅವರು, ಕೇರಳ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಪಂದ್ಯದ ಮೊದಲನೇ ದಿನದಾಟದ ಅಂತ್ಯಕ್ಕೆ ಯುವ ಬ್ಯಾಟ್ಸ್‌ಮನ್‌, 259 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ ಅಜೇಯ 138 ರನ್‌ಗಳನ್ನು ಕಲೆ ಹಾಕಿದ್ದಾರೆ ಹಾಗೂ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಅಲ್ಲದೆ ಕರುಣ್‌ ನಾಯರ್‌ ಜೊತೆಗೆ ಮುರಿಯದ ನಾಲ್ಕನೇ ವಿಕೆಟ್‌ಗೆ 215 ರನ್‌ಗಳನ್ನು ಕಲೆ ಹಾಕಿದರು. ಅಂತಿಮವಾಗಿ ಮೊದಲನೇ ದಿನದ ಬಳಿಕ ವಿದರ್ಭ ತಂಡ 86 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 254 ರನ್‌ಗಳನ್ನು ಕಲೆ ಹಾಕಿದೆ.

ಶತಕ ಸಿಡಿಸಿದ ಡ್ಯಾನಿಶ್‌ ಮಾಳೆವರ್‌ ಯಾರು?

ಡ್ಯಾನಿಶ್‌ ಮಾಳೆವರ್‌ ಅವರು 2003ರ ಅಕ್ಟೋಬರ್‌ 8 ರಂದು ನಾಗ್ಪುರದಲ್ಲಿ ಜನಿಸಿದ್ದರು. ಹೋದವರ್ಷ ರಣಜಿ ಟ್ರೋಫಿ ಟೂರ್ನಿಯ ಎರಡನೇ ಅವಧಿಯಲ್ಲಿ ಅಂಧ್ರ ಪ್ರದೇಶ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿ 61 ರನ್‌ ಗಳಿಸಿ ಎಲ್ಲರ ಗಮನವನ್ನು ಸೆಳೆದಿದ್ದರು.



ಈ ಬಾರಿ ರಣಜಿ ಟ್ರೋಫಿ ಟೂರ್ನಿಯಲ್ಲಿ ವಿದರ್ಭ ತಂಡದ ಪರ ಡ್ಯಾನಿಶ್ ಮಾಳೆವರ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ನಾಕೌಟ್ ಹಂತದಲ್ಲಿ ಡ್ಯಾನಿಶ್ ಸಂಚಲನ ಮೂಡಿಸಿದ್ದಾರೆ. ಪ್ರಸಕ್ತ ರಣಜಿ ಋತುವಿನಲ್ಲಿ, ಡ್ಯಾನಿಶ್, ಕ್ವಾರ್ಟರ್-ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ವಿದರ್ಭ ಪರ ಅರ್ಧಶತಕಗಳನ್ನು ಬಾರಿಸಿದ್ದರು. ಫೈನಲ್‌ನಲ್ಲಿ ಅವರು ಕಠಿಣ ಪರಿಸ್ಥಿತಿಯಲ್ಲಿ ಶತಕ ಗಳಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಕಳೆದ ವರ್ಷ ಅಂದರೆ 2024ರ ಅಕ್ಟೋಬರ್‌ನಲ್ಲಿ ವಿದರ್ಭ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಡ್ಯಾನಿಶ್‌ಗೆ ಸಿಕ್ಕಿತು. ತಮ್ಮ ಚೊಚ್ಚಲ ಪಂದ್ಯದ ನಂತರ ಅವರು ರಣಜಿ ಟ್ರೋಫಿ ಫೈನಲ್ ಹೊರತುಪಡಿಸಿ ಒಟ್ಟು 8 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ, ಇದರಲ್ಲಿ ಅವರು 51.66ರ ಸ್ಟ್ರೈಕ್ ರೇಟ್‌ನಲ್ಲಿ 557 ರನ್‌ಗಳನ್ನು ಗಳಿಸಿದ್ದಾರೆ. ಡ್ಯಾನಿಶ್ ಈಗ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡನೇ ಶತಕವನ್ನು ಸಿಡಿಸಿದ್ದಾರೆ.