ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ENG vs AFG: ಏಕದಿನ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ ಜೋಫ್ರಾ ಆರ್ಚರ್‌!

Jofra archer took 50 ODI wickets: ಇಂಗ್ಲೆಂಡ್‌ ತಂಡದ ವೇಗಿ ಜೋಫ್ರಾ ಆರ್ಚರ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ದದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜೋಫ್ರಾ ಆ ಆರ್ಚರ್‌ ಈ ಸಾಧನೆ ಮಾಡಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ಪರ ವೇಗವಾಗಿ 50 ಒಡಿಐ ವಿಕೆಟ್‌ ಕಿತ್ತ ಬೌಲರ್‌ ಎನಿಸಿಕೊಂಡಿದ್ದಾರೆ.

ಒಡಿಐ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಜೋಫ್ರಾ ಆರ್ಚರ್‌!

50 ಒಡಿಐ ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಜೋಫ್ರಾ ಆರ್ಚರ್‌.

Profile Ramesh Kote Feb 26, 2025 4:54 PM

ಲಾಹೋರ್‌: ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ ಏಕದಿನ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅವರು ತಮ್ಮ ಏಕದಿನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಅತ್ಯಂತ ವೇಗವಾಗಿ 50 ಒಡಿಐ ವಿಕೆಟ್‌ಗಳನ್ನು ಕಬಳಿಸಿದ ಇಂಗ್ಲೆಂಡ್‌ನ ಮೊದಲ ಬೌಲರ್‌ ಎನಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ತಂಡದ ರೆಹಮಾನುಲ್ಲಾ ಗುರ್ಬಝ್‌ ಅವರನ್ನು ಔಟ್‌ ಮಾಡುವ ಮೂಲಕ ಜೋಫ್ರಾ ಆರ್ಚರ್‌ ತಮ್ಮ 50ನೇ ವಿಕೆಟ್‌ ಅನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಜೋಫ್ರಾ ಆರ್ಚರ್‌ ಹೊಸ ಚೆಂಡಿನಲ್ಲಿ ಕಾಟ ಕೊಟ್ಟರು. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್‌ ಕಬಳಿಸಿದ ಬೌಲರ್‌ ಎಂಬ ದಾಖಲೆ ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್‌ ಅಂಜತಾ ಮೆಂಡಿಸ್‌ ಹೆಸರಿನಲ್ಲಿದೆ. ಇವರು 19 ಪಂದ್ಯಗಳಿಂದ ಈ ದಾಖಲೆಯನ್ನು ಬರೆದಿದ್ದರು. ನೇಪಾಳ ತಂಡದ ಸಂದೀಪ್‌ ಲಾಮಿಚನ್ನೆ 22 ಪಂದ್ಯಗಳಿಂದ ಈ ದಾಖಲೆ ಬರೆದಿದ್ದರು. ಆ ಮೂಲಕ ಇವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ವೇಗಿ ಅಜಿತ್‌ ಅಗರ್ಕರ್‌, ನ್ಯೂಜಿಲೆಂಡ್‌ ಮಾಜಿ ವೇಗಿ ಮಿಚೆಲ್ ಮೆಕ್‌ಕ್ಲೆನಾಘನ್ ಅವರು 50 ವಿಕೆಟ್‌ಗಳನ್ನು ಪಡೆಯಲು23 ಪಂದ್ಯಗಳನ್ನು ತೆಗೆದುಕೊಂಡಿದ್ದರು.

ಹೆಬ್ಬೆರಳಿನ ಗಾಯ; ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬಿದ್ದ ಇಂಗ್ಲೆಂಡ್‌ ವೇಗಿ

ವೇಗವಾಗಿ 50 ವಿಕೆಟ್‌ ಕಬಳಿಸಿದ ಇಂಗ್ಲೆಂಡ್‌ನ ಬೌಲರ್‌ಗಳು

ಜೋಫ್ರಾ ಆರ್ಚರ್ - 30 ಪಂದ್ಯಗಳು

ಜೇಮ್ಸ್ ಆಂಡರ್ಸನ್ - 31 ಪಂದ್ಯಗಳು

ಸ್ಟೀವ್ ಹಾರ್ಮಿಸನ್ - 32 ಪಂದ್ಯಗಳು

ಸ್ಟೀವನ್ ಫಿನ್ - 33 ಪಂದ್ಯಗಳು

ಡ್ಯಾರೆನ್ ಗಾಫ್‌ - 34 ಪಂದ್ಯಗಳು

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್‌ ಕಬಳಿಸಿದ ಬೌಲರ್‌ಗಳು

ಅಜಂತಾ ಮೆಂಡಿಸ್ - 19 ಪಂದ್ಯಗಳು

ಸಂದೀಪ್ ಲಾಮಿಚನ್ನೆ - 22 ಪಂದ್ಯಗಳು

ಅಜಿತ್ ಅಗರ್ಕರ್ - 23 ಪಂದ್ಯಗಳು

ಮಿಚೆಲ್ ಮೆಕ್‌ಕ್ಲೆನಾಘನ್ - 23 ಪಂದ್ಯಗಳು

ಡೆನಿಸ್ ಲಿಲ್ಲಿ - 24 ಪಂದ್ಯಗಳು



ಇಂಗ್ಲೆಂಡ್‌ vs ಅಫಘಾನಿಸ್ತಾನ

ಬುಧವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುತ್ತಿರುವ ಆಫ್ಘನ್‌, 30 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 143 ರನ್‌ಗಳನ್ನು ಕಲೆ ಹಾಕಿದೆ. ಸದ್ಯ ಇಬ್ರಾಹಿಂ ಝರ್ಡಾನ್‌ (82*) ಹಾಗೂ ಅಝಮತ್‌ವುಲ್ಲಾ ಒಮರ್ಜಾರ್‌ (3*) ಕ್ರೀಸ್‌ನಲ್ಲಿದ್ದಾರೆ.

ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XI

ಫಿಲ್‌ ಸಾಲ್ಟ್‌, ಬೆನ್‌ ಡಕೆಟ್‌, ಜೇಮಿ ಸ್ಮಿತ್‌ (ವಿ.ಕೀ), ಜೋ ರೂಟ್‌, ಹ್ಯಾರಿ ಬ್ರೂಕ್‌, ಜೋಸ್‌ ಬಟ್ಲರ್‌ (ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌, ಜೋಫ್ರಾ ಆರ್ಚರ್‌, ಜೇಮಿ ಒವರ್ಟನ್‌, ಆದಿಲ್‌ ರಶೀದ್‌, ಮಾರ್ಕ್‌ವುಡ್‌

AUS vs SA ಪಂದ್ಯ ಮಳೆಗೆ ಬಲಿ, ಇಂಗ್ಲೆಂಡ್‌-ಆಫ್ಘನ್‌ ಸೆಮಿಫೈನಲ್‌ ಹಾದಿ ಹೇಗೆ? ಇಲ್ಲಿದೆ ಲೆಕ್ಕಾಚಾರ!

ಅಫ್ಘಾನಿಸ್ತಾನ ತಂಡದ ಪ್ಲೇಯಿಂಗ್‌ XI

ರಹಮಾನುಲ್ಲಾ ಗುರ್ಬಾಝ್‌ (ವಿ.ಕೀ), ಇಬ್ರಾಹಿಂ ಝರ್ಡಾನ್‌, ಸೆಡಿಖುಲ್ಲಾ ಅಟಲ್‌, ರೆಹಮನ್‌ ಶಾ, ಹಸ್ಮತ್‌ವುಲ್ಲಾ ಶಾಹಿಡಿ (ನಾಯಕ), ಅಝಮತ್‌ವುಲ್‌ ಒಮರ್ಜಾಯ್‌, ಮೊಹಮ್ಮದ್‌ ನಬಿ, ಗುಲ್ಬದಿನ್‌ ನೈಬ್‌, ರಶೀದ್‌ ಖಾನ್‌, ನೂರ್‌ ಅಹ್ಮದ್‌, ಫಝಲಕ್‌ ಫಾರೂಕಿ