Viral Video: ಬ್ಲ್ಯಾಕ್ ಮ್ಯಾಜಿಕ್ ಮಾಡಿ ಮಹಿಳೆಯರನ್ನು ಹೆದರಿಸಿದ ನಕಲಿ ಬಾಬಾ; ವಿಡಿಯೊ ವೈರಲ್
ಬಾಬಾನ ವೇಷದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರನ್ನು ಹೆದರಿಸುವ ಮೂಲಕ ಅವರಿಂದ ಹಣವನ್ನು ಪೀಕಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಕಂಡ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ʼʼಇದು ತಮಾಷೆಯಲ್ಲ ಲೂಟಿ" ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.


ಹೊಸದಿಲ್ಲಿ: ಮೂಢನಂಬಿಕೆಯಿಂದ ಸಾಕಷ್ಟು ಸಮಸ್ಯೆ ಎದುರುರಾಗಿರುವ ಘಟನೆಗಳನ್ನು ನೀವೆಲ್ಲಾ ಕೇಳಿರುತ್ತೀರಿ. ಈಗ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ. ನಕಲಿ ವೇಷ ಧರಿಸಿ ಬಂದ ನಕಲಿ ಬಾಬಾನೊಬ್ಬ ಮಹಿಳೆಯರನ್ನು ಹೆದರಿಸಿದ್ದಾನೆ. ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಬಾಬಾನ ವೇಷ ಹಾಕಿಕೊಂಡು ಜನರನ್ನು ಹೆದರಿಸಿ ದುಡ್ಡು ಪೀಕಿದ್ದಾನೆ (Viral Video). ಬಾಬಾ ಎಸೆದ ಮಂಕು ಬೂದಿಗೆ ಮಹಿಳೆಯರು ಹೆದರಿ ತಮ್ಮಲ್ಲಿದ್ದ ಹಣವನ್ನು ನೀಡಿದ್ದಾರೆ. ಸದ್ಯ ವಿಡಿಯೊ ನೋಡಿ ನೆಟ್ಟಿಗರು ಕಿಡಿ ಕಾರಿದ್ದಾರೆ.
ಸಾಮಾನ್ಯವಾಗಿ ಜನರು ಕಷ್ಟ ಬಂದಾಗ ಬಾಬಾಗಳನ್ನು ಭೇಟಿ ಮಾಡುತ್ತಾರೆ. ಸಮಸ್ಯೆಗೆ ಪರಿಹಾರ ಸಿಕ್ಕರೆ ತಮ್ಮಿಂದ ಸಾಧ್ಯವಾದದ್ದನ್ನು ಅವರಿಗೆ ನೀಡುತ್ತಾರೆ. ಆದರೆ ಜನರ ಈ ನಂಬಿಕೆಯನ್ನು ಇಲ್ಲೊಬ್ಬ ನಕಲಿ ಬಾಬಾ ತನ್ನ ಲಾಭಕ್ಕೆ ಬಳಸಿಕೊಂಡಿದ್ದಾನೆ. ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಬಾಬಾನ ವೇಷ ಧರಿಸಿ ರಸ್ತೆಯಲ್ಲಿ ಹೋಗುವ ಮಹಿಳೆಯರನ್ನು ಹೆದರಿಸಿ ಅವರಿಂದ ಹಣ ಸುಲಿಗೆ ಮಾಡುವುದು ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಕಪ್ಪು ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗನೊಬ್ಬನ ಬಳಿ ಹಣ ಕೇಳಿದ್ದಾನೆ. ಆತ ಹಣ ಕೊಡಲು ನಿರಾಕರಿಸಿದಾಗ, ಹುಡುಗನ ಮೇಲೆ ಬೂದಿಯನ್ನು ಎಸೆದಿದ್ದಾನೆ. ಆಗ ಹುಡುಗ ಪ್ರಜ್ಞೆ ತಪ್ಪಿ ಅಲ್ಲೇ ಕುಸಿದು ಬಿದ್ದಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಮಹಿಳೆಯರು ಹೆದರಿ ಆ ವ್ಯಕ್ತಿಗೆ ಹಣವನ್ನು ಕೊಟ್ಟಿದ್ದಾರೆ. ಹಣ ತೆಗೆದುಕೊಂಡ ವ್ಯಕ್ತಿ ನಗುವುದು ವಿಡಿಯೊದಲ್ಲಿ ಸೆರೆಯಾಗಿದೆ. ಇದನ್ನು ತಮಾಷೆಗಾಗಿ ಮಾಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಡಿಯೊಗೆ 1.1 ಕೋಟಿಗೂ ಹೆಚ್ಚು ವ್ಯೂವ್ಸ್ ಬಂದಿದೆ. 2.7 ಮಿಲಿಯನ್ (27 ಲಕ್ಷ)ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ವಿಡಿಯೊಗೆ ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು, "ಇದು ತಮಾಷೆಯಲ್ಲ, ಇದು ಲೂಟಿ" ಎಂದು ಬರೆದಿದ್ದಾರೆ. ಇನ್ನೊಬ್ಬರು "ಇವನು ಅದ್ಭುತ ಜಾದೂಗಾರ" ಎಂದು ಹೇಳಿದ್ದಾರೆ. ಇನ್ನೂ ಹಲವರು ನಗುವ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಮಹಿಳೆಯ ಮೇಲೆ ನಕಲಿ ಬಾಬಾನಿಂದ ಅತ್ಯಾಚಾರ
ಕಾಯಿಲೆ ಗುಣಪಡಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ
ಹೈದರಾಬಾದ್: ಎಂಥ ಕಾಯಿಲೆಯನ್ನಾದರೂ ಗುಣಪಡಿಸುತ್ತೇನೆ ಎಂದು ಹೇಳಿಕೊಂಡ ನಕಲಿ ಬಾಬಾ ಇಡೀ ರಾತ್ರಿ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಕೆಲವು ತಿಂಗಳ ಹಿಂದೆ ನಡೆದಿತ್ತು. ಪ್ರಕರನ ಬೆಳಕಿಗೆ ಬಂದ ಬಳಿಕ ಸೈಬರಾಬಾದ್ ಪೊಲೀಸರು ಆತನನ್ನು ಬಂಧಿಸಿದ್ದರು. ಬಂಧಿತನನ್ನಮು ಅರ್ಷದ್ ಜಲಾವುದ್ದೀನ್ (45) ಎಂದು ಗುರುತಿಸಲಾಗಿದೆ. ಕರ್ನಾಟಕ ಮೂಲದ ಅರ್ಷದ್ ಪ್ರಾರ್ಥನೆ ಮತ್ತು ಮಾಟದಿಂದ ಯಾವುದೇ ಅನಾರೋಗ್ಯವನ್ನು ಗುಣಪಡಿಸುತ್ತೇನೆ ಎಂದು ನಂಬಿಸುವ ಕೆಲಸ ಮಾಡುತ್ತಿದ್ದ. ಮಹಿಳೆಯೊಬ್ಬಳು ತನ್ನ ಮೇಲೆ ನಕಲಿ ಬಾಬಾ ಅತ್ಯಾಚಾರವೆಸಗಿದ್ದಾನೆ ಎಂದು ದೂರು ಸಲ್ಲಿಸಿದ್ದಳು. ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆ ಅನಾರೋಗ್ಯಕ್ಕೆ ಒಳಗಾಗಿದ್ದಳು. ಎಷ್ಟೇ ಚಿಕಿತ್ಸೆ ಪಡೆದರೂ ಗುಣಮುಖವಾಗಲಿಲ್ಲವಾದ್ದರಿಂದ, ಅರ್ಷದ್‌ನನ್ನು ಸಂಪರ್ಕಿಸಿ ಗುಣಮುಖ ಮಾಡಬೇಕು ಎಂದು ಕೇಳಿಕೊಂಡಿದ್ದಳು. ಅವಕಾಶ ಬಳಸಿಕೊಂಡ ನಕಲಿ ಬಾಬಾ ಪೂಜೆಯ ಹೆಸರಿನಲ್ಲಿ ಮಹಿಳೆಯ ಮನೆಗೆ ಮಧ್ಯರಾತ್ರಿ ತೆರಳಿ ಕೋಣೆಗೆ ಕರೆದೊಯ್ದು ಮಹಿಳೆಯ ಪ್ರಜ್ಞೆ ತಪ್ಪಿಸಿ ದೌರ್ಜನ್ಯ ಎಸಗಿದ್ದಾನೆ. ಬಳಿಕ ಆಕೆ ದೂರು ದಾಖಲಿಸಿದ್ದಳು.