Viral Video: ಅಜ್ಜಿಯ ಕೊನೆಯ ಆಸೆ ಈಡೇರಿಸಲು ಆಸ್ಪತ್ರೆಯಲ್ಲಿ ಮೊಮ್ಮಗ ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
ಬಿಹಾರದ ಮುಜಾಫರಪುರದ ಆಸ್ಪತ್ರೆಯಲ್ಲಿ ಹುಷಾರಿಲ್ಲದೆ ಮಲಗಿದ್ದ ಅಜ್ಜಿಗೆ ಸಾಯುವ ಮೊದಲು ಮೊಮ್ಮಗನ ಮದುವೆ ನೋಡುವ ಆಸೆ ಇತ್ತು. ಹೀಗಾಗಿ ಅಜ್ಜಿಯ ಆಸೆ ಈಡೇರಿಸಲು ಮೊಮ್ಮಗ ಆಸ್ಪತ್ರೆಯಲ್ಲಿ ಮದುವೆಯಾಗಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಪಾಟ್ನಾ: ಸಾಮಾನ್ಯವಾಗಿ ಅಜ್ಜಿಯಂದಿಯರಿಗೆ ಮೊಮ್ಮಕ್ಕಳ ಮದುವೆ ನೋಡುವುದು, ಮರಿಮೊಮ್ಮಕ್ಕಳನ್ನು ಆಡಿಸುವ ಆಸೆ ಇರುತ್ತದೆ. ಅದೇ ರೀತಿ ಇಲ್ಲೊಬ್ಬಳು ಅಜ್ಜಿ ಕೂಡ ಅದೇ ರೀತಿಯ ಕನಸು ಕಟ್ಟಿಕೊಂಡಿದ್ದಳು. ಆಸ್ಪತ್ರೆಯಲ್ಲಿ ಹುಷಾರಿಲ್ಲದೇ ಮಲಗಿದ್ದ ಅಜ್ಜಿಗೆ ಮೊಮ್ಮಗನ ಮದುವೆಯನ್ನು ನೋಡಿ ಕಣ್ಮುಚ್ಚಬೇಕು ಎಂಬ ಆಸೆ ಇತ್ತು. ಇದೀಗ ಅಜ್ಜಿಯ ಕೊನೆ ಆಸೆಯನ್ನು ಈಡೇರಿಸಲು ಮೊಮ್ಮಗನೊಬ್ಬ ಆಸ್ಪತ್ರೆಯಲ್ಲಿ ಮದುವೆಯಾಗಿದ್ದಾನೆ. ಬಿಹಾರದ ಮುಜಾಫರಪುರದ ಆಸ್ಪತ್ರೆಗೆ (ಎಸ್‍ಕೆಎಂಸಿಎಚ್) ವಧು ಮತ್ತು ವರರು ಮದುವೆಯ ಉಡುಪಿನಲ್ಲಿ ಆಗಮಿಸಿದ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.
ವರನ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಬಿಹಾರದ ಮುಜಾಫರಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಅಜ್ಜಿ ತಾನು ಸಾಯುವುದರೊಳಗೆ ಮೊಮ್ಮಗನ ಮದುವೆ ನೋಡುವ ಆಸೆ ವ್ಯಕ್ತಪಡಿಸಿದ ಕಾರಣ ಮೊಮ್ಮಗ ಆಸ್ಪತ್ರೆಯಲ್ಲಿಯೇ ಮದುವೆಯಾಗಿ ಆಶೀರ್ವಾದ ಪಡೆದಿದ್ದಾನೆ. ಈ ಮೂಲಕ ಅಜ್ಜಿಯ ಆಸೆ ಈಡೇರಿಸಿದ್ದಾನೆ.
मुजफ्फरपुर #SKMCH में पोते ने दादी की अंतिम इच्छा पूरी की, अस्पताल में हुई शादी, देखिए वीडियो#MuzaffarpurNews #Muzaffarpur #NBTBihar pic.twitter.com/UB3VRaqqsp
— NBT Bihar (@NBTBihar) February 25, 2025
ಬಿಹಾರದ ಮುಜಾಫರಪುರದ ಮಿಥಾನ್ಪುರದ ರೀಟಾ ದೇವಿ ಮೊಮ್ಮಗ ಅಭಿಷೇಕ್ ಮದುವೆ ಫಿಕ್ಸ್ ಆಗಿತ್ತು. ಆದರೆ ಅಜ್ಜಿಯ ಆರೋಗ್ಯವು ಹದಗೆಟ್ಟು ಆಸ್ಪತ್ರೆಗೆ ದಾಖಲಾದ ಕಾರಣ ಅಭಿಷೇಕ್ ಮತ್ತು ಅವನ ಕುಟುಂಬವು ಮದುವೆಯನ್ನು ಅಜ್ಜಿ ಇರುವ ಆಸ್ಪತ್ರೆಯಲ್ಲೇ ಮಾಡಲು ನಿರ್ಧರಿಸಿದೆ. ವಧುವಿನ ಕುಟುಂಬದಿಂದ ಒಪ್ಪಿಗೆ ಪಡೆದ ನಂತರ, ಮದುವೆ ಸಮಾರಂಭವನ್ನು ತರಾತುರಿಯಲ್ಲಿ ಮಾಡಲಾಯಿತು ಮತ್ತು ಎಸ್‍ಕೆಎಂಸಿಎಚ್ ಆಸ್ಪತ್ರೆಯ ಆವರಣದಲ್ಲಿರುವ ಶಿವ ದೇವಾಲಯದಲ್ಲಿ ಮದುವೆ ನಡೆಸಲಾಯಿತು. ಮದುವೆಯಾದ ದಂಪತಿ ಅಭಿಷೇಕ್ ಅಜ್ಜಿಯ ಆಶೀರ್ವಾದ ಪಡೆಯಲು ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಮೊಮ್ಮಗನಿಗೆ ಅಜ್ಜಿಯ ಮೇಲಿನ ಪ್ರೀತಿಯನ್ನು ಕಂಡು ನೋಡುಗರ ಹೃದಯ ತುಂಬಿ ಬಂದಿದೆ. ಮೊಮ್ಮಗನ ಮದುವೆಯನ್ನು ನೋಡಿದ ಕೇವಲ ಎರಡು ಗಂಟೆಗಳ ನಂತರ ಅಜ್ಜಿ ಮೃತಪಟ್ಟಿದ್ದಾಳೆ.
ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ತಾಯಿಯ ಕೊನೆ ಆಸೆ ಈಡೇರಿಸಲು ಮಗಳು ಆಸ್ಪತ್ರೆಯ ಐಸಿಯುನಲ್ಲಿ ಮದುವೆಯಾಗಿದ್ದಳು. ಬಿಹಾರದ ಗಯಾದ ಮ್ಯಾಜಿಸ್ಟ್ರೇಟ್ ಕಾಲೋನಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವಧುವಿನ ತಾಯಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಆಕೆ ತನ್ನ ಮಗಳ ಮದುವೆ ನೋಡುವ ಆಸೆ ವ್ಯಕ್ತಪಡಿಸಿದ್ದಳು. ಹೀಗಾಗಿ ಮಗಳು ವರನ ಕಡೆಯವರ ಒಪ್ಪಿಗೆ ಪಡೆದು ಆಸ್ಪತ್ರೆಯ ಐಸಿಯುವಿನಲ್ಲಿ ತಾಯಿಯ ಮುಂದೆ ಸಿಂಪಲ್ ಆಗಿ ಮದುವೆಯಾಗಿದ್ದಳು. ಈ ಮದುವೆಗೆ ವಧು-ವರನ ಕಡೆಯವರು ಸೇರಿ ಕೇವಲ ನಾಲ್ಕು ಮಂದಿ ಹಾಜರಾಗಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಬರ್ತ್‌ಡೇಯಂದು ಅಜ್ಜಿಗೆ ಸರ್‌ಪ್ರೈಸ್ ನೀಡಿದ ಮೊಮ್ಮಗಳು; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
ಇತ್ತೀಚೆಗೆ ದುಬೈನಲ್ಲಿ ವಾಸಿಸುತ್ತಿದ್ದ ಝೈನಬ್ ರೋಶ್ನಾ ತನ್ನ ಪ್ರೀತಿಯ ಅಜ್ಜಿಯ ಹುಟ್ಟುಹಬ್ಬದಂದು ಸರ್ಪ್ರೈಸ್ ಆಗಿ ಕೇರಳಕ್ಕೆ ಭೇಟಿ ನೀಡಿದ್ದಳು. ಎರಡು ವರ್ಷಗಳ ನಂತರ ತನ್ನ ಮೊಮ್ಮಗಳನ್ನು ನೋಡಿದ ಅಜ್ಜಿಗೆ ಖುಷಿಯಿಂದ ಮಾತೇ ಬರದೇ ಅವಳನ್ನು ಅಪ್ಪಿ ಮುದ್ದಾಡಿದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿ ವೈರಲ್ ಆಗಿತ್ತು.