Viral Video: ಹಾವಿನಿಂದ ಮಕ್ಕಳನ್ನು ರಕ್ಷಿಸಿದ ತಾಯಿ; ಮೈ ನವಿರೇಳಿಸುವ ವಿಡಿಯೊ ವೈರಲ್
ಇಲ್ಲೊಬ್ಬಳು ತಾಯಿ ತನ್ನ ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನು ಹಾವಿನಿಂದ ರಕ್ಷಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಾಯಿಯ ಧೈರ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವಿಡಿಯೊ 56 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.


ತಾಯಿಯಾದವಳು ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡುತ್ತಾಳೆ. ಅದರಲ್ಲೂ ತನ್ನ ಮಕ್ಕಳು ಸಂಕಷ್ಟದಲ್ಲಿದ್ದಾಗ ತನ್ನ ಪ್ರಾಣವನ್ನು ಲೆಕ್ಕಿಸದೇ ಹೋರಾಡುತ್ತಾಳೆ ಎನನುವ ಮಾತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ಘಟನೆ ನಡೆದಿದೆ. ಇತ್ತೀಚೆಗೆ ತಾಯಿಯೊಬ್ಬಳು ತನ್ನ ಇಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ವಿಷಕಾರಿ ಹಾವಿನಿಂದ ರಕ್ಷಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೋಸ್ಟ್ ಮಾಡಲಾದ ಈ ವಿಡಿಯೊ 56 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿ ವೈರಲ್ (Viral Video) ಆಗಿದೆ. ಈ ವಿಡಿಯೊದಲ್ಲಿ ತಾಯಿ ಹಾವನ್ನು ನೋಡಿದ ತಕ್ಷಣ ತನ್ನ ಮಕ್ಕಳನ್ನು ರಕ್ಷಿಸಲು ಓಡಿಬಂದ ಕ್ಷಣ ಸೆರೆಯಾಗಿದೆ.
ವೈರಲ್ ಆದ ವಿಡಿಯೊದಲ್ಲಿ ಮನೆಯ ಮುಂಭಾಗದಲ್ಲಿ ತಾಯಿ ಬಟ್ಟೆಯ ಬುಟ್ಟಿಯನ್ನು ಹಿಡಿದುಕೊಂಡು ನಿಂತಿರುವಾಗ ಅವಳ ಇಬ್ಬರು ಹೆಣ್ಣುಮಕ್ಕಳು ಅಲ್ಲಿಯೇ ಹತ್ತಿರದಲ್ಲೇ ಆಟವಾಡುತ್ತಿದ್ದಾರೆ. ಆದರೆ ಅಲ್ಲಿ ಹಾವು ಅಡಗಿರುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ಹಾವು ಅವರ ಹತ್ತಿರ ಹರಿದು ಬರುವುದನ್ನು ತಾಯಿ ಗಮನಿಸಿದ್ದಾಳೆ. ಭಯಭೀತಳಾದ ಅವಳು ಬುಟ್ಟಿಯನ್ನು ಪಕ್ಕಕ್ಕೆ ಎಸೆದು ಮಕ್ಕಳನ್ನು ಹಾವಿನಿಂದ ರಕ್ಷಿಸಿದ್ದಾಳೆ.
Mother tries to save her two daughters from a venomous snake in Australia pic.twitter.com/UYLtsIuk00
— Wild content (@NoCapMediaa) March 26, 2025
ಈ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ತಾಯಿಯ ಧೈರ್ಯವನ್ನು ಹೊಗಳಿದ್ದಾರೆ. ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, "ಹಾವು ವಿಷಕಾರಿಯಾಗಿ ಕಾಣುತ್ತಿಲ್ಲ. ಆದರೆ ಆ ತಾಯಿ ಸರಿಯಾಗಿ ಮಾಡಿದ್ದಾಳೆ” ಎಂದಿದ್ದಾರೆ. "ಇದು ನಿರುಪದ್ರವಿ ವಿಷಕಾರಿಯಲ್ಲದ ಕಪ್ಪು ಹಾವು. ಅವುಗಳಲ್ಲಿ ಹೆಚ್ಚಿನವು ಇಲಿಗಳು ಕೀಟಗಳನ್ನು ಕೊಲ್ಲುತ್ತವೆ ಮತ್ತು ವಿಷಕಾರಿ ಹಾವುಗಳ ಜತೆ ಜಗಳವಾಡುತ್ತವೆ” ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ತಾಯಿ ತನ್ನ ಮಕ್ಕಳನ್ನು ಹಾವಿನಿಂದ ರಕ್ಷಿಸುವಂತಹ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು ಇದೇ ಮೊದಲಲ್ಲ. ಈ ಹಿಂದೆ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಮನೆಯ ಹೊರಗೆ ಮಗು ಮತ್ತು ಅವನ ತಾಯಿ ಹಾವಿನೊಂದಿಗೆ ಹೋರಾಡಿದ ಭಯಾನಕ ವಿಡಿಯೊವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ತಾಯಿಯ ತ್ವರಿತ ಕ್ರಮಕ್ಕಾಗಿ ಮತ್ತು ಸಮಯಕ್ಕೆ ಸರಿಯಾಗಿ ತನ್ನ ಮಗನನ್ನು ಹಾವಿನಿಂದ ರಕ್ಷಿಸಿದ್ದಕ್ಕಾಗಿ ನೆಟ್ಟಿಗರು ಹೊಗಳಿದ್ದರು.
ಈ ಸುದ್ದಿಯನ್ನೂ ಓದಿ:Viral Video: ತಲೆಗೆ ಹಾವು ಕಚ್ಚಿಯೂ ಅಪಾಯದಿಂದ ಪಾರಾದ ಯುವಕ; ವಿಡಿಯೊ ಇಲ್ಲಿದೆ
ಸಿಸಿಟಿವಿ ಕ್ಯಾಮೆರಾದ ಸೆರೆಯಾದ ವಿಡಿಯೊದಲ್ಲಿ ತಾಯಿ ಮತ್ತು ಮಗು ಮನೆಯ ಹೊರಗಿನ ಮೆಟ್ಟಿಲಿನ ಬಳಿ ಹಾವು ಇರುವುದನ್ನು ಗಮನಿಸದೆ ಹೊರಬರುತ್ತಿರುವಾಗ ಮಗು ಓಡುತ್ತಾ ಮೆಟ್ಟಿಲ ಮೇಲೆ ಮಲಗಿದ್ದ ಹಾವಿನ ಮೇಲೆ ಕಾಲಿಡಲು ಹೋಗುತ್ತದೆ. ಆಗ ಹಾವು ಹೆಡೆಯೆತ್ತಿ ಮಗುವಿಗೆ ಕಚ್ಚಲು ಮುಂದಾಗುತ್ತದೆ. ಆಗ ತಾಯಿಯ ತಕ್ಷಣ ತನ್ನ ಮಗುವನ್ನು ತನ್ನ ಕಡೆಗೆ ಎಳೆದುಕೊಂಡಿದ್ದಳು. ಇದರಿಂದ ಅಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿತ್ತು.