ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ತಾಂಡವ್ ಆಫೀಸ್​ನಿಂದಲೇ ಭಾಗ್ಯಾಗೆ ಬಂತು ಕೈ ತುತ್ತು ಆರ್ಡರ್: ಏನು ಮಾಡ್ತಾಳೆ?

ಭಾಗ್ಯಾಗೆ ಫೋನ್ ಮೂಲಕ ಆರ್ಡರ್ ಕೂಡ ಬಂದಿದೆ. ಅದು ತಾಂಡವ್‌ನ ಆಫೀಸ್ನಿಂದ ಎಂದು ತಿಳಿದ ತಕ್ಷಣ ಭಾಗ್ಯ ಗೊಂದಲಕ್ಕೆ ಒಳಗಾಗಿದ್ದಾಳೆ. ಊಟ ಕಳುಹಿಸಿ ಕೊಡಬೇಕಾ ಅಥವಾ ಬೇಡಬೇ ಎಂಬ ಗೊಂದಲಕ್ಕೆ ಬೀಳುತ್ತಾಳೆ. ಇದನ್ನ ಮಾವನ ಬಳಿ ಹೇಳುತ್ತಾಳೆ.

ತಾಂಡವ್ ಆಫೀಸ್​ನಿಂದಲೇ ಭಾಗ್ಯಾಗೆ ಬಂತು ಕೈ ತುತ್ತು ಆರ್ಡರ್

Bhagya Lakshmi Serial

Profile Vinay Bhat Mar 29, 2025 12:16 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ಹೊಸ ಉದ್ಯಮಕ್ಕೆ ಎರಡನೇ ದಿನ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಒಂದೇ ಒಂದು ಕಾಲ್ ಬರದ ಕಾರಣ ಅಡುಗೆ ಮಾಡಿದ್ದನ್ನು ರಸ್ತೆ ಬದಿಗೆ ತೆಗೆದುಕೊಂಡು ಹೋಗಿ ಬಳಿಸಿದ್ದಳು. ಆದರೆ, ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ ಫ್ರೀ ಆಗಿ ಊಟ ಬಡಿಸಿದ್ದಳು. ಆದರೆ, ಎರಡನೇ ದಿನ ಭಾಗ್ಯಾಗೆ ಒಳ್ಳೆಯ ಆರ್ಡರ್ ಬಂದಿದೆ. ಅದರಲ್ಲಿ ಒಂದು ತಾಂಡವ್​ನ ಆಫೀಸ್​ನಿಂದಲೇ ಎಂಬುದು ವಿಶೇಷ. ಆದರೆ, ಈ ವಿಚಾರ ತಾಂಡವ್​ಗೆ ತಿಳಿದಿಲ್ಲ.. ಅದ್ಭುತ ಊಟ ಎಂದು ತಾಂಡವ್ ಚಪ್ಪಿರಿಸಿಕೊಂಡು ತಿಂದಿದ್ದಾರೆ.

ಮೊದಲ ದಿನ ಭಾಗ್ಯ, ಪೂಜಾ ಮತ್ತು ಸುಂದರಿ ಮನೆಗೆ ಮರಳಿದಾಗ ತನ್ಮಯ್‌ನ ಗೆಳೆಯ ಜೂನಿಯರ್ ರಾಕಿ ಭಾಯ್ ಹಾಗೂ ಅವನ ಜೊತೆ ಹಾಸ್ಟೆಲ್‌ನ ನಾಲ್ಕು ಮಂದಿ ಹುಡುಗರು ಭಾಗ್ಯ ಮನೆಗೆ ಬರುತ್ತಾರೆ. ನಿಮ್ಮ ಊಟದಲ್ಲಿ ಅಮ್ಮನ ಕೈರುಚಿಯಿದೆ, ಪ್ರೀತಿಯಿದೆ. ಅಮೃತವಿದೆ, ಇನ್ನು ಮುಂದೆ ದಿನವೂ ಮೂರು ಹೊತ್ತು ನೀವೇ ನಮಗೆ ಊಟ ಕೊಡಬೇಕು ಎನ್ನುತ್ತಾರೆ. ಜತೆಗೆ ದುಡ್ಡನ್ನೂ ಕೊಟ್ಟು ಹೋಗುತ್ತಾರೆ. ಇದನ್ನೆಲ್ಲ ಕಂಡು ಭಾಗ್ಯಾಗೆ ತುಂಬಾ ಖುಷಿ ಆಗಿದೆ. ಮರುದಿನ ಭಾಗ್ಯ ಊಟ ಕಳುಹಿಸಿ ಕೊಟ್ಟಿದ್ದಾಳೆ.

ಜೊತೆಗೆ ಭಾಗ್ಯಾಗೆ ಫೋನ್ ಮೂಲಕ ಆರ್ಡರ್ ಕೂಡ ಬಂದಿದೆ. ಅದು ತಾಂಡವ್‌ನ ಆಫೀಸ್​ನಿಂದ ಎಂದು ತಿಳಿದ ತಕ್ಷಣ ಭಾಗ್ಯ ಗೊಂದಲಕ್ಕೆ ಒಳಗಾಗಿದ್ದಾಳೆ. ಊಟ ಕಳುಹಿಸಿ ಕೊಡಬೇಕಾ ಅಥವಾ ಬೇಡಬೇ ಎಂಬ ಗೊಂದಲಕ್ಕೆ ಬೀಳುತ್ತಾಳೆ. ಇದನ್ನ ಮಾವನ ಬಳಿ ಹೇಳುತ್ತಾಳೆ. ನಿನಗೆ ಅಲ್ಲಿಗೆ ಹೋಗಲು ಮನಸ್ಸಿಲ್ಲ ಅಂದ್ರೆ ಹೋಗಬೇಡ ಎಂದು ಮಾವ ಹೇಳುತ್ತಾರೆ. ಆದರೆ ನಂತರ, ಊಟ ಕೊಡುವುದು ನನ್ನ ವೃತ್ತಿ, ಅದಕ್ಕೂ ನಮ್ಮ ಬಾಂಧವ್ಯ ಕಡಿದಿರುವುದಕ್ಕೂ ಸಂಬಂಧವಿಲ್ಲ ಎಂದು ಊಟ ತಯಾರಿಸಿ, ತಾಂಡವ್ ಆಫೀಸ್‌ಗೆ ಕೊಟ್ಟು ಬಂದಿದ್ದಾಳೆ.

ತಾಂಡವ್ ಆಫೀಸ್​ನಿಂದ ನಾಲ್ಕು ಜನ ಊಟ ಆರ್ಡರ್ ಮಾಡಿದ್ದರು. ಆದರೆ, ಅದರಲ್ಲಿ ಓರ್ವ ಹೊರಗಡೆ ಹೋಗಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಆಗ ಅವನು ಊಟವನ್ನು ಯಾರಿಗೆ ಕೊಡಲಿ ಎಂದುಕೊಂಡಿರುವಾಗ, ಅಕಸ್ಮಾತ್ ಆಗಿ ಶ್ರೇಷ್ಠಾ ಎದುರಾಗುತ್ತಾಳೆ. ಅವಳಿಗೆ ಊಟವನ್ನು ಕೊಟ್ಟು, ಅದನ್ನು ಗೌರವ್‌ಗೆ ಕೊಡುವಂತೆ ಹೇಳಿ ಅವನು ಹೊರಗಡೆ ಹೋಗುತ್ತಾನೆ. ಇದೇನು ಮನೆ ಊಟ ಎಂದು ಶ್ರೇಷ್ಠಾ ಅದನ್ನು ತೆಗೆದುಕೊಂಡು ಹೋಗಿ ನೋಡುತ್ತಾಳೆ, ಆಗ ಊಟ ಘಮ ಘಮ ಪರಿಮಳ ಬರುತ್ತಿದೆ ಎನ್ನುವುದು ಅವಳಿಗೆ ಅರಿವಾಗುತ್ತದೆ. ಇಲ್ಲಿ ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಒಂದನ್ನು ಮಾಡುತ್ತಾಳೆ.

ಶ್ರೇಷ್ಠಾ ಊಟದ ಡಬ್ಬ ಜೊತೆ ನೇರವಾಗಿ ತಾಂಡವ್​ನ ಕ್ಯಾಬಿನ್‌ಗೆ ಬರುತ್ತಾಳೆ. ನಾನೇ ನಿನಗಾಗಿ ಊಟ ತಯಾರಿಸಿದ್ದೇನೆ ಎಂದು ಸುಳ್ಳು ಹೇಳಿ ಭಾಗ್ಯ ತಯಾರಿಸಿ ತಂದುಕೊಟ್ಟ ಊಟದ ಡಬ್ಬಿಯನ್ನು ಕೊಡುತ್ತಾಳೆ. ಘಮ ಘಮ ಪರಮಳ ಕೇಳಿ ತಾಂಡವ್ ಟೇಸ್ಟ್ ಮಾಡುತ್ತಾನೆ. ಅದರ ರುಚಿಗೆ ಮಾರುಹೋದ ತಾಂಡವ್, ಶ್ರೇಷ್ಠಾಳನ್ನು ಹೊಗಳಿಕೊಂಡು ಊಟ ಮಾಡುತ್ತಾನೆ. ಸಖತ್ ಆಗಿದೆ ಊಟ ಎಂದು ಹೊಟ್ಟೆ ಫುಲ್ ಮಾಡಿಕೊಂಡಿದ್ದಾನೆ. ಎಷ್ಟೇ ದೂರ ತಳ್ಳಿದರು ತಾಂಡವ್​ಗೆ ಭಾಗ್ಯ ಒಂದಲ್ಲ ಒಂದು ರೂಪದಲ್ಲಿ ಕನೆಕ್ಟ್ ಆಗುತ್ತಳೇ ಇದ್ದಾಳೆ.

ಇದರ ಮಧ್ಯೆ ತನ್ವಿಗೆ ರೆಸಾರ್ಟ್​ಗೆ ಹೋಗಲು ಶ್ರೇಷ್ಠಾ ಸಹಿ ಮಾಡಿದ ಪರಿಣಾಮ ಪರ್ಮಿಷನ್ ಸಿಕ್ಕಿದೆ. ಹೀಗಾಗಿ ಮನೆಯಲ್ಲಿ ಸುಳ್ಳು ಹೇಳಿ ಯಾರಿಗೂ ತಿಳಿಯದಂತೆ ತನ್ವಿ ಟೂರ್ ಹೋಗಲು ಮುಂದಾಗಿದ್ದಾಳೆ. ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಇದೆ, ಹೋಗಲೇಬೇಕು ಎಂದು ಕಥೆ ಹೇಳಿದ್ದಾಳೆ. ಆದರೆ, ಭಾಗ್ಯಾಗೆ ಒಂದು ಕಡೆಯಿಂದ ಈ ಕುರಿತು ಅನುಮಾನ ಮೂಡಿದೆ. ತನ್ವಿಯ ನಡತೆಯಲ್ಲಿ ಕೊಂಚ ಬದಲಾವಣೆ ಇದೆ ಎಂದು ಅಂದುಕೊಂಡಿದ್ದಾಳೆ. ಶ್ರೇಷ್ಠಾ ಕೊಟ್ಟ ಉಡುಪನ್ನು ಧರಿಸಿ ತನ್ವಿ ಹೊರಟಿದ್ದಾಳೆ. ಇದು ಯಾವ ಡ್ರೆಸ್, ಯಾರು ತೆಗೆದು ಕೊಟ್ಟಿದ್ದು ಎಂದು ಕೇಳಿದ್ದಕ್ಕೆ, ನನ್ನ ಬರ್ತ್ ಡೇಗೆ ಅಪ್ಪ ಕೊಡಿಸಿದ್ದು ಎಂದು ಮತ್ತೊಂದು ಸುಳ್ಳು ಹೇಳಿದ್ದಾಳೆ. ಸದ್ಯ ಈ ನಿಜಾಂಶವೆಲ್ಲ ಯಾವಾಗ ಹೊರಬರುತ್ತೆ..?, ಆಗ ಭಾಗ್ಯ ಏನು ಮಾಡುತ್ತಾಳೆ ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ತಿಳಿದುಬರಲಿದೆ.

Bigg Boss Ranjith: ನಾನು ಲವರ್‌ ಬಾಯ್‌ ಅಲ್ಲ: ಲವ್ ಮ್ಯಾರೇಜ್ ಬಗ್ಗೆ ಮೊದಲ ಬಾರಿ ಮಾತನಾಡಿದ ಬಿಗ್ ಬಾಸ್ ರಂಜಿತ್