Vishwavani Editorial: ಭಿನ್ನ ಮಕ್ಕಳ ಬಗ್ಗೆ ಕಾಳಜಿ ಇರಲಿ
ಏಪ್ರಿಲ್ 2 ವಿಶ್ವ ಆಟಿಸಂ ಜಾಗೃತಿ ದಿನ. ಮೇಲ್ನೋಟಕ್ಕೆ ಅಂಗಾಂಗಗಳೆಲ್ಲವೂ ಸರಿ ಇದ್ದರೂ ಕೇಂದ್ರಿ ಯ ನರಮಂಡಲ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವ ಆಟಿಸಂ ರೋಗಿಗಳಿಗೆ ಪೋಷಕರು ಮಾತ್ರವಲ್ಲ ಇಡೀ ಸಮಾಜದ ಕಾಳಜಿ, ಆರೈಕೆ ಅಗತ್ಯವಿದೆ. ಶಾರೀರಿಕ ಸಮಸ್ಯೆ ರೋಗಗಳಿಗೆ ಚಿಕಿತ್ಸೆ ಕೊಡಿಸಬಹುದು. ಆದರೆ ಆಟಿಸಂ ಇರುವ ರೋಗಿಗಳಿಗೆ ಜೀವನ ಪರ‍್ಯಂತ ಪ್ರೀತಿ ತುಂಬಿದ ಆರೈಕೆ ಅಗತ್ಯ


ಏಪ್ರಿಲ್ 2 ವಿಶ್ವ ಆಟಿಸಂ ಜಾಗೃತಿ ದಿನ. ಮೇಲ್ನೋಟಕ್ಕೆ ಅಂಗಾಂಗಗಳೆಲ್ಲವೂ ಸರಿ ಇದ್ದರೂ ಕೇಂದ್ರಿ ಯ ನರಮಂಡಲ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುವ ಆಟಿಸಂ ರೋಗಿ ಗಳಿಗೆ ಪೋಷಕರು ಮಾತ್ರವಲ್ಲ ಇಡೀ ಸಮಾಜದ ಕಾಳಜಿ, ಆರೈಕೆ ಅಗತ್ಯವಿದೆ. ಶಾರೀರಿಕ ಸಮಸ್ಯೆ ರೋಗಗಳಿಗೆ ಚಿಕಿತ್ಸೆ ಕೊಡಿಸಬಹುದು. ಆದರೆ ಆಟಿಸಂ ಇರುವ ರೋಗಿಗಳಿಗೆ ಜೀವನ ಪರ‍್ಯಂತ ಪ್ರೀತಿ ತುಂಬಿದ ಆರೈಕೆ ಅಗತ್ಯ. ಈ ಕಾರಣದಿಂದಲೇ 2007ರಲ್ಲಿ ವಿಶ್ವಸಂಸ್ಥೆ ಈ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಮೂಢ ನಂಬಿಕೆಗಳನ್ನು ತೊಡೆದು ಹಾಕಿ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಟಿಸಂ ಜಾಗೃತಿ ದಿನವನ್ನು ಘೋಷಿಸಿತು.
ಜಗತ್ತಿನಲ್ಲಿ ಸುಮಾರು 5 ಕೋಟಿ ಜನರು ವಾರ್ಷಿಕವಾಗಿ ಈ ರೋಗದಲ್ಲಿ ಬಳಲುತ್ತಿದ್ದಾರೆ. ಭಾರತ ವೊಂದರಲ್ಲಿಯೇ ಸುಮಾರು 50 ಲಕ್ಷ ಆಟಿಸಂ ರೋಗದಿಂದ ಬಳಲುತ್ತಾರೆ ಎಂದು ಅಂದಾಜಿಸ ಲಾಗಿದೆ. ಆಟಿಸಂ ಇರುವ ಮಕ್ಕಳು ಇತರ ಮಕ್ಕಳಿಗಿಂತ ವಿಭಿನ್ನರಾಗಿರುತ್ತಾರೆ. ತಮ್ಮದೇ ವಯಸ್ಸಿನ ಇತರ ಮಕ್ಕಳ ಜೊತೆಗೆ ವ್ಯವಹರಿಸಲು, ಮಾತನಾಡಲು, ಆಟೋಟ ಪಾಠಗಳಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಾರೆ. ಸಾಮಾನ್ಯವಾಗಿ ಮಕ್ಕಳಲ್ಲಿ ಈ ರೋಗ 12 ರಿಂದ 18 ತಿಂಗಳಲ್ಲಿ ಗೋಚರಿಸಲು ಆರಂಭವಾಗುತ್ತದೆ.
ಇದನ್ನೂ ಓದಿ: Vishwavani Editorial: ಎಚ್ಚರಿಕೆ ಗಂಟೆಯಾಗಲಿ
ಇಂತಹ ಮಕ್ಕಳನ್ನು ಹೆತ್ತವರು ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಆಟಿಸಂ ನಿಂದ ಬಳಲುವ ಮಕ್ಕಳನ್ನು ಸಹಜ ಮಕ್ಕಳಂತೆ ಮಾಡಬಹುದು. ಆದರೆ ಈ ನಿಟ್ಟಿನಲ್ಲಿ ಹೆತ್ತವರು, ಸಂಬಂಧಿಕರು, ನೆರೆಹೊರೆಯವರು, ಶಿಕ್ಷಕರು ಮತ್ತು ಸಮಾಜ ಒಟ್ಟಾಗಿ ಕಾಳಜಿ ವಹಿಸುವುದು ಮುಖ್ಯ. ದುರದೃಷ್ಟವಶಾತ್ ಬುದ್ಧಿಮಾಂದ್ಯತೆ ಇರುವ ಮಕ್ಕಳನ್ನು ನಮ್ಮ ಸಮಾಜ ಪ್ರತ್ಯೇಕವಾಗಿಸಿ ನೋಡುತ್ತದೆ.
ಹೆತ್ತವರೂ ಭಿನ್ನ ಚೇತನ ಮಕ್ಕಳ ಶಾಲೆಗೆ ಸೇರಿಸಿದರೆ ತಮ್ಮ ಹೊಣೆಗಾರಿಕೆ ಮುಗಿಯಿತು ಎಂದು ಭಾವಿಸುತ್ತಾರೆ. ಈ ಮಕ್ಕಳಿಗೆ ಹೆತ್ತವರು ಮತ್ತು ಸಮಾಜದ ಪ್ರೀತಿ, ವಿಶ್ವಾಸ, ಮಮತೆ ವಾತ್ಸಲ್ಯ ದೊರೆ ತರೆ ಸಮಾಜಕ್ಕೆ ಆಸ್ತಿಯಾಗಲೂಬಹುದು. ಇವರ ಪ್ರತಿಭೆಯನ್ನು ಹೊರಹಾಕಲು ಪೂರಕವಾದ ವಾತಾವರಣ ಕಲ್ಪಿಸಿ ಕೊಡಬೇಕು.
ಸಂವಹನ ಕೊರತೆ ಇರುವಂತಹ ಮಕ್ಕಳಿಗೆ ವಿಶೇಷ ಶಿಕ್ಷಣ ಮತ್ತು ತರಬೇತಿ ನೀಡಿ ಅವರ ಆತ್ಮ ವಿಶ್ವಾಸ ವೃದ್ಧಿಸುವಂತೆ ಮಾಡಬೇಕು. ಯಾವ ಕಾರಣಕ್ಕೂ ಅಂತಹ ಮಕ್ಕಳನ್ನು ದೂಷಿಸಬಾರದು. ತರ ಮಕ್ಕಳ ಜೊತೆ ಹೋಲಿಸಬಾರದು. ನಿರಂತರವಾಗಿ ಮಾನಸಿಕ ಸ್ಥೈರ್ಯ ನೀಡಿ, ನೈತಿಕ ಬೆಂಬಲ ನೀಡಿದರೆ ಈ ರೀತಿಯ ಮಕ್ಕಳು ಸಮಾಜದ ಮುಖ್ಯವಾಹಿನಿಯ ಜೊತೆ ಬೆರೆತು ಬದುಕಬಹುದು. ಈ ನಿಟ್ಟಿನಲ್ಲಿ ಸಮಾಜವನ್ನು ಜಾಗೃತಿಗೊಳಿಸಬೇಕಾಗಿದೆ.