Vishwavani Editorial: ಚೀನಾ ವೈರಸ್ ಬಗ್ಗೆ ಎಚ್ಚರಿಕೆ ಅಗತ್ಯ
ರೋಗಲಕ್ಷಣಗಳುಳ್ಳ ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದು ವೈರಸ್ ಅತಿ ವೇಗವಾಗಿ ವೈರಸ್ ಹರಡುತ್ತಿದೆ ಎನ್ನಲಾಗಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕೊರೊನಾ ಕುರಿತ ಮಾಹಿತಿಯನ್ನು ಬಚ್ಚಿಟ್ಟಂತೆ
Ashok Nayak
Jan 4, 2025 6:49 AM
ಕೋವಿಡ್ ಮಹಾಮಾರಿ ಆತಂಕದಿಂದ ಜಗತ್ತು ಹೊರ ಬಂದು ಚೇತರಿಕೆ ಹಾದಿಯಲ್ಲಿ ಸಾಗುತ್ತಿರುವಾಗಲೇ ಚೀನಾ ದಲ್ಲಿ ಮತ್ತೊಂದು ವೈರಸ್ ಸ್ಪೋಟದ ಸುದ್ದಿ ಜನರ ಆತಂಕವನ್ನು ಹೆಚ್ಚಿಸಿದೆ. ಈ ಹಿಂದೆ ಕರೋನಾ ದಾಳಿ ಇಟ್ಟ ಐದು ವರ್ಷಗಳ ಬಳಿಕ ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೊ ವೈರಸ್ (HMPV) ಸ್ಪೋಟಗೊಂಡಿದೆ.
ರೋಗಲಕ್ಷಣಗಳುಳ್ಳ ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದು ವೈರಸ್ ಅತಿ ವೇಗವಾಗಿ ವೈರಸ್ ಹರಡುತ್ತಿದೆ ಎನ್ನಲಾಗಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕೊರೊನಾ ಕುರಿತ ಮಾಹಿತಿಯನ್ನು ಬಚ್ಚಿಟ್ಟಂತೆ ಈ ಬಾರಿಯೂ ಚೀನಾ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ಎಚ್‌ಎಂಪಿ ವೈರಸ್‌ಗೆ ಯಾರೂ ಆತಂಕ ಪಡಬೇಕಿಲ್ಲ ಎಂದಿದೆ. 2001ರಲ್ಲಿ ಮೊದಲ ಬಾರಿಗೆ ಈ ವೈರಾಣುವನ್ನು ಪತ್ತೆ ಮಾಡಲಾಗಿತ್ತು. ಚಿಕ್ಕ ಮಕ್ಕಳು, ವಯಸ್ಕರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ವಿಶೇಷವಾಗಿ ಈ ರೋಗಕ್ಕೆ ಬೇಗ ಗುರಿಯಾಗುತ್ತಾರೆ. ಹೊಸ ವೈರಾಣುವಿನಿಂದ ಪಾರಾಗಲು ಸ್ಕ್ರೀನಿಂಗ್, ಪತ್ತೆ ಮತ್ತು ಪ್ರತ್ಯೇಕತೆಯ ಸಿದ್ಧ ಕ್ರಮಗಳನ್ನು ಪಾಲಿಸಲು ಚೀನಾ ತನ್ನ ನಾಗರಿಕರಿಗೆ ಕರೆ ನೀಡಿದೆ. ಭಾರತದಲ್ಲಿ ಇದು ವರೆಗೂ ಈ ವೈರಸ್ ಪತ್ತೆಯಾಗಿಲ್ಲ.
ಆದರೆ ಈ ಸೋಂಕು ಹರಡದಂತೆ ಈಗಲೇ ಎಚ್ಚರಿಕೆ ವಹಿಸಬೇಕಿದೆ. ಭಾರತದ ಆರೋಗ್ಯ ವಿಭಾಗ ಯಾವುದೇಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಚೀನಾದಲ್ಲಿ ಕಾಣಿಸಿಕೊಂಡಿರುವ ವೈರಸ್ ಮೇಲೆ ಭಾರತ ತೀವ್ರ ನಿಗಾ ವಹಿಸಲಿದೆ. ಈ ಕುರಿತು ಅಂತಾರಾಷ್ಟ್ರೀಯ ಆರೋಗ್ಯ ಎಜೆನ್ಸಿಗಳ ಜೊತೆ ಸಂಪರ್ಕದಲ್ಲಿದೆ. ವೈರಸ್ ಕುರಿತುಮಾಹಿತಿ ಕಲೆ ಹಾಕಲಾಗುತ್ತಿದೆ.
ಹೀಗಾಗಿ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಮಹಾ ನಿರ್ದೇಶಕ ಅತುಲ್ಗೋಯಲ್ ತಿಳಿಸಿದ್ದಾರೆ. ಚೀನಾದಲ್ಲಿ ಚಳಿಗಾಲದಲ್ಲಿ ಈ ರೀತಿಯ ಕೆಲ ವೈರಸ್‌ಗಳು ಆತಂಕ ಸೃಷ್ಟಿಸುವುದು ಸಾಮಾನ್ಯವಾಗಿದೆ. ಕಳೆದ 5 ವರ್ಷಗಳಲ್ಲಿ ಪ್ರತಿ ಚಳಿಗಾಲದಲ್ಲೂ ಕೆಲ ವೈರಸ್‌ಗಳು ಆತಂಕ ಸೃಷ್ಟಿಸಿವೆ.
ಎಚ್ ಎಂಪಿ ವೈರಸ್‌ನಿಂದ ಹುಟ್ಟಿಕೊಂಡಿರುವ ಸೋಂಕು ಕೂಡ ಶೀಘ್ರವೇ ನಿಯಂತ್ರಣಕ್ಕೆ ಬರಬಹುದೆಂದು ನಿರೀಕ್ಷಿಸ ಲಾಗಿದೆ. ಆದರೆ ಕೋವಿಡ್ ಕಾಲದ ಅನುಭವದ ಆಧಾರದಲ್ಲಿ ಭಾರತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಅಗತ್ಯ ಔಷಽಗಳ ದಾಸ್ತಾನು, ಆಕ್ಸಿಜನ್ ಕೊರತೆ ಆಗದಂತೆ ಈಗಲೇ ನೋಡಿಕೊಳ್ಳಬೇಕಿದೆ.
ಇದನ್ನೂ ಓದಿ: Vishwavani Editorial: ಚೀನಾ ಜಲ ರಾಜಕಾರಣ