ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BCCI Meeting: ಇಂದು ನಡೆಯಬೇಕಿದ್ದ ಬಿಸಿಸಿಐ ಸಭೆ ಮುಂದೂಡಿಕೆ

BCCI meeting postpone: ಭಾರತದ ಇಂಗ್ಲೆಂಡ್ ಪ್ರವಾಸವು ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಿಕ ಟೆಸ್ಟ್‌ನೊಂದಿಗೆ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಕೆನ್ನಿಂಗ್ಟನ್ ಓವಲ್ ಉಳಿದ ನಾಲ್ಕು ಟೆಸ್ಟ್‌ಗಳನ್ನು ಆಯೋಜಿಸಲಿವೆ.

ಇಂದು ನಡೆಯಬೇಕಿದ್ದ ಬಿಸಿಸಿಐ ಸಭೆ ಮುಂದೂಡಿಕೆ

Profile Abhilash BC Mar 29, 2025 4:12 PM

ಗುವಾಹಟಿ: ಇಂದು (ಮಾ. 29) ನಡೆಯಬೇಕಿದ್ದ ಬಿಸಿಸಿಐ ಸಭೆ(BCCI Meeting)ಯನ್ನು ದಿಢೀರ್‌ ಮುಂದೂಡಲಾಗಿದೆ(BCCI meeting postpone). ಸಭೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಇಂಗ್ಲೆಂಡ್‌ ಪ್ರವಾಸ ಮತ್ತು ಕೇಂದ್ರ ಗುತ್ತಿಗೆ ಪಟ್ಟಿಯ ಬಗ್ಗೆ ಚರ್ಚೆಗಳು ನಡೆಯಬೇಕಿತ್ತು. ಆದರೆ ಸದ್ಯ ಸಭೆಯನ್ನು ಮುಂದೂಡಲಾಗಿದೆ. ಸಭೆ ಮುಂದೂಡಿಕೆಗೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ.

ಮುಂಬರುವ ಋತುವಿಗೆ ಕೇಂದ್ರ ಒಪ್ಪಂದ ಪಟ್ಟಿ ಮತ್ತು ಸಂಭಾವ್ಯ ಟೆಸ್ಟ್ ನಾಯಕನ ಪಟ್ಟಿಯನ್ನು ಅಂತಿಮಗೊಳಿಸಲು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಜತೆ ಸಭೆ ಇಂದು ನಡೆಸಬೇಕಿತ್ತು. ಭವಿಷ್ಯದ ಟೆಸ್ಟ್‌ ನಾಯಕ ಆಯ್ಕೆಯೂ ಕೂಡ ಸಭೆಯಲ್ಲಿ ಚರ್ಚಿತ ವಿಷಯವಾಗಿತ್ತು.

ಭಾರತದ ಇಂಗ್ಲೆಂಡ್ ಪ್ರವಾಸವು ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಿಕ ಟೆಸ್ಟ್‌ನೊಂದಿಗೆ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಕೆನ್ನಿಂಗ್ಟನ್ ಓವಲ್ ಉಳಿದ ನಾಲ್ಕು ಟೆಸ್ಟ್‌ಗಳನ್ನು ಆಯೋಜಿಸಲಿವೆ.

ಇದನ್ನೂ ಓದಿ IPL 2025: ಚೆನ್ನೈ ವಿರುದ್ಧ ಗೆಲುವು; ಆರ್‌ಸಿಬಿಗೆ ಅಭಿನಂದಿಸಿದ ವಿಜಯ್ ಮಲ್ಯ

ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ನ‌ಲ್ಲಿ ಭಾರತ ಎ ತಂಡ 3 ಚತುರ್ದಿನ ಪಂದ್ಯಗಳಲ್ಲಿ ಆಡಲಿದೆ. ಈ ತಂಡದೊಂದಿಗೆ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಕೂಡ ತೆರಳಲಿದ್ದಾರೆ ಎನ್ನಲಾಗಿದೆ. ಮುಂಚಿತವಾಗಿಯೇ ಇಂಗ್ಲೆಂಡ್‌ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದು, ಮೀಸಲು ಕ್ರಿಕೆಟಿಗರ ಪ್ರತಿಭೆಗಳನ್ನು ತಿಳಿದುಕೊಳ್ಳುವುದು ಗಂಭೀರ್‌ ಉದ್ದೇಶ ಎನ್ನಲಾಗಿದೆ.