IPL 2025: ಲಖನೌ ಸ್ಪಿನ್ನರ್ ದಿಗ್ವೇಶ್ ರಾಠಿ ಸಕ್ಸಸ್‌ಗೆ ಪ್ರಮುಖ ಕಾರಣ ತಿಳಿಸಿದ ಏಡೆನ್ ಮಾರ್ಕ್ರಮ್!
Aiden Markram praised igvesh Rathi: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ಲಖನೌ ಸೂಪರ್ ಜಯಂಟ್ಸ್ ತಂಡದ ದಿಗ್ವೇಶ್ ರಾಠಿ ಅವರನ್ನು ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಮ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ದಿಗ್ವೇಶ್ ರಾಠಿಗೆ ಏಡೆನ್ ಮಾರ್ಕ್ರಮ್ ಮೆಚ್ಚುಗೆ.

ಕೋಲ್ಕತಾ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ದಿಗ್ವೇಶ್ ರಾಠಿ ( Digvesh Rathi) ಅವರನ್ನು ಲಖನೌ ಸೂಪರ್ ಜಯಂಟ್ಸ್ ತಂಡದ ಬ್ಯಾಟ್ಸ್‌ಮನ್ ಏಡನ್ ಮಾರ್ಕ್ರಮ್ )Aiden Markram) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಲಖನೌ ಪರ ದಿಗ್ವೇಶ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿ ಯಶಸ್ವಿಯಾಗಲು ಪ್ರಮುಖ ಕಾರಣವೇನೆಂದು ಮಾರ್ಕ್ರಮ್ ಬಹಿರಂಗಪಡಿಸಿದ್ದಾರೆ. ಮಂಗಳವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಲಖನೌ ಸೂಪರ್ ಜಯಂಟ್ಸ್ 4 ರನ್‌ಗಳಿಂದ ರೋಚಕ ಗೆಲುವು ಪಡೆದಿತ್ತು.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ದಿಗ್ವೇಶ್ ರಾಠಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು ಹಾಗೂ ಅಪಾಯಕಾರಿ ಬ್ಯಾಟ್ಸ್‌ಮನ್ ಸುನೀಲ್ ನರೇನ್ ಅವರನ್ನು ಔಟ್ ಮಾಡಿದ್ದರು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿಯೂ ತಾವು ಬೌಲ್ ಮಾಡಿದ ನಾಲ್ಕು ಓವರ್‌ಗಳಿಗೆ 33 ರನ್ ನೀಡಿ ಒಂದು ವಿಕೆಟ್ ಕಿತ್ತಿದ್ದರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಏಡೆನ್ ಮಾರ್ಕ್ರಮ್‌ಗೆ ದಿಗ್ವೇಶ್ ಸಿಂಗ್ ಬೇರೆ ಸ್ಪಿನ್ನರ್‌ಗಳಿಗಿಂತ ವಿಭಿನ್ನ ಹೇಗೆ ಎಂದು ಪ್ರಶ್ನೆಯನ್ನು ಕೇಳಲಾಯಿತು.
IPL 2025: ತಮ್ಮ ಬ್ಯಾಟಿಂಗ್ ಯಶಸ್ಸಿನ ಶ್ರೇಯ ಬ್ರಿಯಾನ್ ಲಾರಾಗೆ ಸಲ್ಲಬೇಕೆಂದ ಶಶಾಂಕ್ ಸಿಂಗ್!
"ಹೌದು, ಅವರು ವಿಭಿನ್ನರಾಗಿದ್ದಾರೆ. ನಿಸ್ಸಂಶಯವಾಗಿ ಅವರು ಎರಡೂ ಹಾದಿಯಲ್ಲಿ ಚೆಂಡನ್ನು ಸ್ಪಿನ್ ಮಾಡುತ್ತಾರೆ ಹಾಗೂ ಇದರ ಜತೆಗೆ ಅವರ ಬೌಲಿಂಗ್‌ನಲ್ಲಿ ರಹಸ್ಯವನ್ನು ಹೊಂದಿದ್ದಾರೆ. ಇದು ಅವರಿಗೆ ದೊಡ್ಡ ಲಾಭದಾಯಕ ಅಂಶವಾಗಿದೆ. ಇದೆಲ್ಲವೂ ಯೋಜನೆಯನ್ನು ಕಾರ್ಯಗತಗೊಳಿಸುವುದಾಗಿದೆ. ಅವರು ನಮಗಾಗಿ ಅತ್ಯುತ್ತಮ ಲೆನ್ತ್ ಅನ್ನು ಕಾಯ್ದುಕೊಳ್ಳುತ್ತಾರೆ, ಆ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡವನ್ನು ಹೇರುತ್ತಾರೆ," ಎಂದು ಏಡೆನ್ ಮಾರ್ಕ್ರಮ್ ತಿಳಿಸಿದ್ದಾರೆ.
"ಅವರ ದೊಡ್ಡ ಸಾಮರ್ಥ್ಯ ಏನೆಂದರೆ, ಚೆಂಡಿನ ಮೇಲಿನ ನಿಯಂತ್ರಣವಾಗುದೆ. ಎರಡೂ ಹಾದಿಯಲ್ಲಿ ಚೆಂಡನ್ನು ಸ್ಪಿನ್ ಮಾಡುವುದು ಅವರ ದೊಡ್ಡ ಸ್ಟ್ರೆನ್ತ್ ಆಗಿದೆ. ಆದರೆ ಕಿರಿದಾದ ಬೌಂಡರಿಗಳಿದ್ದಾಗ ಹಾಗೂ ಚೆಂಡು ಗಾಳಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ, ನೀವು ಲೆನ್ತ್ ಅನ್ನು ಮಿಸ್ ಮಾಡಿಕೊಂಡರೆ ಹೊಡೆಸಿಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ದಿಗ್ವೇಶ್ ಶಕ್ತಿಯುತವಾಗಿದ್ದಾರೆ. ಆದ್ದರಿಂದ ಲೆನ್ತ್ ಇವರ ದೊಡ್ಡ ಅಸ್ತ್ರ," ಎಂದು ಎಲ್‌ಎಸ್‌ಜಿ ಬ್ಯಾಟರ್ ಹೇಳಿದ್ದಾರೆ.
IPL 2025: ಸಿಎಸ್‌ಕೆ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ದಂಡ!
ಎರಡು ಡಿಮೆರಿಟ್ ಅಂಕ ಪಡೆದಿರುವ ರಾಠಿ
ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಹೋಸ ಶೈಲಿಯಲ್ಲಿ ಸಂಭ್ರಮಿಸಿದ ದಿಗ್ವೇಶ್ ರಾಠಿಗೆ ಕಳೆದ ಎರಡು ಪಂದ್ಯಗಳಲ್ಲಿ ನೋಟ್ ಬುಕ್ ಶೈಲಿಯಲ್ಲಿ ಸಂಭ್ರಮಿಸಿದ್ದ ಕಾರಣ ಎರಡು ಡಿಮೆರಿಟ್ ಅಂಕವನ್ನು ನೀಡಲಾಗಿದೆ. ಮಂಗಳವಾರದ ಪಂದ್ಯದಲ್ಲಿ ಸುನೀಲ್ ನರೇನ್ ಅವರನ್ನು ಔಟ್ ಮಾಡಿದ ಬಳಿಕ ಮೈದಾನದಲ್ಲಿ ಕುಳಿತುಕೊಂಡು ನೆಲದಲ್ಲಿ ಬರೆಯುವ ಮೂಲಕ ದಿಗ್ವೇಶ್ ಸಂಭ್ರಮಿಸಿದ್ದರು. 239 ರನ್‌ಗಳನ್ನು ಚೇಸ್ ಮಾಡಿದ್ದ ಕೆಕೆಆರ್ ಅಂತಿಮವಾಗಿ 234 ರನ್‌ಗಳಿಗೆ ಸೀಮಿತವಾಗಿತ್ತು. ಆ ಮೂಲಕ ಕೆಕೆಆರ್ ಕೇವಲ 4 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು. ಪ್ರಸಕ್ತ ಆವೃತ್ತಿಯಲ್ಲಿ ದಿಗ್ವೇಶ್ ರಾಠಿ ಆಡಿದ ಐದು ಪಂದ್ಯಗಳಿಂದ 22.14ರ ಸರಾಸರಿ ಹಾಗೂ 7.75ರ ಎಕಾನಮಿ 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ.