ಬಾಯ್ಫ್ರೆಂಡ್ಗೆ ಕಿಸ್ ನೀಡಿ ಡೋಪಿಂಗ್ನಲ್ಲಿ ಸಿಕ್ಕಿಬಿದ್ದಿದ್ದ ಯಸೋರಾ ಥಿಬಸ್ ಶಿಕ್ಷೆಯಿಂದ ಪಾರು
ಡ್ರಗ್ಸ್ ಅಥವಾ ಔಷಧ ಸೇವನೆ ಕ್ರೀಡಾಳುವಿನ ಜೀವನವನ್ನೇ ನಾಶಪಡಿಸುತ್ತದೆ. ಒಂದೆಡೆ ಕ್ರೀಡಾ ಜೀವನ ಕೊನೆಗೊಂಡರೆ ಮತ್ತೂಂದೆಡೆ ವೈಯಕ್ತಿಕ ಆರೋಗ್ಯ ಕೂಡ ಅಪಾಯಕ್ಕೆ ಸಿಲು ಕುತ್ತದೆ. ಇದರಿಂದ ಹೃದಯ, ಲಿವರ್, ನರಸಂಬಂಧಿ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಸಣ್ಣ ಪ್ರಾಯದಲ್ಲಿಯೇ ಡ್ರಗ್ಸ್ ಸೇವಿಸಿದರೆ ಆತನ ಜೀವನವೇ ನರಕವಾಗಬಹುದು ಎಂಬ ಎಚ್ಚರಿಕೆಯನ್ನು ವಾಡಾ ನೀಡುತ್ತದೆ.

ಲೌಸನ್ನೆ: ಬಾಯ್ಫ್ರೆಂಡ್ಗೆ 9 ದಿನಗಳ ಕಾಲ ನಿರಂತರ ಕಿಸ್ ನೀಡಿ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು 4 ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಫ್ರಾನ್ಸ್ನ(French fencer) ಒಲಿಂಪಿಯನ್ ಕತ್ತಿವರಸೆ ಪಟು ಯಸೋರಾ ಥಿಬಸ್(Ysaora Thibus) ಅವರು ಇದೀಗ ಶಿಕ್ಷೆಯಿಂದ ಪಾರಾಗಿದ್ದಾರೆ. ತಾನು ಡೋಪಿಂಗ್ನಲ್ಲಿ ಹೇಗೆ ಸಿಕ್ಕಿಬಿದ್ದೆ ಎಂದು ಅವರು ನೀಡಿರುವ ಈ ವಿವರಣೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಒಪ್ಪಿಕೊಂಡಿದ್ದು, ಅವರನ್ನು ದೋಷಮುಕ್ತಗೊಳಿಸಿದೆ. ಥಿಬಸ್ 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ರಜತ ಗೆದ್ದಿದ್ದರೆ, 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 5ನೇ ಸ್ಥಾನ ಪಡೆದಿದ್ದರು.
ಬಾಯ್ಫ್ರೆಂಡ್ ನಿಷೇಧಿತ ಉದ್ದೀಪನವನ್ನು ಬಳಸುತ್ತಿದ್ದ ಕಾರಣ ಕಿಸ್ ನೀಡುವಾಗ ಥಿಬಸ್ ದೇಹಕ್ಕೂ ಗೊತ್ತಿಲ್ಲದೆ ಅದು ಬಂದಿರುವುದರಿಂದ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲು ಸಿಎಎಸ್ ನಿರಾಕರಿಸಿದೆ. 2009ರಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಟೆನಿಸ್ ಆಟಗಾರ ರಿಚರ್ಡ್ ಗಾಸ್ಕೆಟ್ ಅವರು ಕೊಕೇನ್ ಸೇವಿಸಿದ್ದ ಗೆಳತಿಗೆ ಕಿಸ್ ನೀಡಿದ ಪರಿಣಾಮ ಡೋಪಿಂಗ್ನಲ್ಲಿ ಸಿಕ್ಕಿಬಿದ್ದಿದ್ದರು. ಈ ವೇಳೆಯೂ ರಿಚರ್ಡ್ ಗಾಸ್ಕೆಟ್ ಅವರನ್ನು ಶಿಕ್ಷೆಯಿಂದ ಪಾರು ಮಾಡಲಾಗಿತ್ತು.
ಡ್ರಗ್ಸ್ ಅಥವಾ ಔಷಧ ಸೇವನೆ ಕ್ರೀಡಾಳುವಿನ ಜೀವನವನ್ನೇ ನಾಶಪಡಿಸುತ್ತದೆ. ಒಂದೆಡೆ ಕ್ರೀಡಾ ಜೀವನ ಕೊನೆಗೊಂಡರೆ ಮತ್ತೂಂದೆಡೆ ವೈಯಕ್ತಿಕ ಆರೋಗ್ಯ ಕೂಡ ಅಪಾಯಕ್ಕೆ ಸಿಲು ಕುತ್ತದೆ. ಇದರಿಂದ ಹೃದಯ, ಲಿವರ್, ನರಸಂಬಂಧಿ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಸಣ್ಣ ಪ್ರಾಯದಲ್ಲಿಯೇ ಡ್ರಗ್ಸ್ ಸೇವಿಸಿದರೆ ಆತನ ಜೀವನವೇ ನರಕವಾಗಬಹುದು ಎಂಬ ಎಚ್ಚರಿಕೆಯನ್ನು ವಾಡಾ ನೀಡುತ್ತದೆ.
ಯಾವ ವಸ್ತುಗಳನ್ನು ಸೇವಿಸಬಾರದು?
ಕ್ರೀಡಾಳುಗಳು ಯಾವುದೇ ರೀತಿಯ ಔಷಧ ಅಥವಾ ಶಕ್ತಿ ಉತ್ತೇಜಕ ವಸ್ತುಗಳನ್ನು ಸೇವಿಸುವಂತೆಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹಾಗೇನಿಲ್ಲ, ಕೆಲವೊಂದು ಅಂಶಗಳಿರುವ ಡ್ರಗ್ಸ್, ಸಿರಪ್, ಮಾತ್ರೆ, ಜೂಸ್‌ಗಳನ್ನು ತೆಗೆದು ಕೊಳ್ಳುವಂತಿಲ್ಲ. ವಿಶ್ವ ಉದ್ದೀಪನ ಔಷಧ ನಿಗ್ರಹ ಸಂಸ್ಥೆ ಈ ಕುರಿ ತಾದ ಸ್ಪಷ್ಟ ಮಾಹಿತಿಯನ್ನು ಆಗಾಗ್ಗೆ ನೀಡುತ್ತಿದೆ. ತನ್ನ ವೆಬ್‌ಸೈಟ್‌ನಲ್ಲಿ ಅವುಗಳ ಪಟ್ಟಿಯನ್ನು ಹಾಕಿರುವುದಲ್ಲದೆ ಆಗಾಗ ಸೆಮಿನಾರ್, ವೆಬಿನಾರ್‌ಗಳ ಮೂಲಕ ಕ್ರೀಡಾಳುಗಳಿಗೆ, ಕ್ರೀಡಾ ಸಂಸ್ಥೆಗಳಿಗೆ, ಕೋಚ್‌ಗಳಿಗೆ ಮಾಹಿತಿ ನೀಡುತ್ತಲೇ ಬರುತ್ತಿದೆ.