'ನನ್ನ ಪತಿ ಸಲಿಂಗಕಾಮಿ'; ದೀಪಕ್ ಹೂಡಾ ವಿರುದ್ಧ ಪತ್ನಿ ಗಂಭೀರ ಆರೋಪ
ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಅಳುತ್ತಾ ವಿಡಿಯೊ ಮೂಲಕ ಮಾತನಾಡಿದ ಸವೀಟಿ ಬೂರಾ,'ಎಲ್ಲರೂ ಸೇರಿ ನಾನೇ ತಪ್ಪು ಮಾಡಿರುವ ಹಾಗೆ ಬಿಂಬಿಸುತ್ತಿದ್ದಾರೆ. ಪೊಲೀಸರಿಂದಲೂ ನನಗೆ ನ್ಯಾಯ ಸಿಗುತ್ತಿಲ್ಲ. ನಾನು ಠಾಣೆಯಲ್ಲಿ ದೀಪಕ್ ಮೇಲೆ ಹಲ್ಲೆ ನಡೆಸಿದ ವಿಡಿಯೊವನ್ನು ಬೇಕಂತಲೇ ವೈರಲ್ ಮಾಡಲಾಗಿದೆ ಎಂದು ಹೇಳಿದ್ದಾರೆ.


ನವದೆಹಲಿ: ಎರಡು ದಿನಗಳ ಹಿಂದಷ್ಟೇ ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ ಮೇಲೆ ಅವರ ಪತ್ನಿ, ಮಾಜಿ ಮಹಿಳಾ ಬಾಕ್ಸರ್ ಸವೀಟಿ ಬೂರಾ ಪೊಲೀಸ್ ಠಾಣೆಯಲ್ಲೇ ಹಲ್ಲೆ ನಡೆಸಿದ ವಿಡಿಯೊವೊಂದು ವೈರಲ್ ಆಗಿತ್ತು. ಇದೀಗ ಪತಿಯ ವಿರುದ್ಧ ಸವೀಟಿ ಬೂರಾ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ದೀಪಕ್ ಹೂಡಾ ಸಲಿಂಗಕಾಮಿ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಅಳುತ್ತಾ ವಿಡಿಯೊ ಮೂಲಕ ಮಾತನಾಡಿದ ಸವೀಟಿ ಬೂರಾ,'ಎಲ್ಲರೂ ಸೇರಿ ನಾನೇ ತಪ್ಪು ಮಾಡಿರುವ ಹಾಗೆ ಬಿಂಬಿಸುತ್ತಿದ್ದಾರೆ. ಪೊಲೀಸರಿಂದಲೂ ನನಗೆ ನ್ಯಾಯ ಸಿಗುತ್ತಿಲ್ಲ. ನಾನು ಠಾಣೆಯಲ್ಲಿ ದೀಪಕ್ ಮೇಲೆ ಹಲ್ಲೆ ನಡೆಸಿದ ವಿಡಿಯೊವನ್ನು ಬೇಕಂತಲೇ ವೈರಲ್ ಮಾಡಲಾಗಿದೆ. ನಾನು ಹಲ್ಲೆ ಮಾಡುವ ಮುಂದೆ ಅಲ್ಲಿ ಏನಾಗಿತ್ತು ಎನ್ನುವ ವಿಡಿಯೊವನ್ನು ಏಕೆ ವೈರಲ್ ಮಾಡಿಲ್ಲ. ದೀಪಕ್ ಹೂಡಾ ಸಲಿಂಗಕಾಮಿ. ಇದಕ್ಕೆ ಬೇಕಾದ ಎಲ್ಲ ಸಾಕ್ಷಿಗಳು ನನ್ನ ಬಳಿ ಇದೆ ಎಂದು' ಎಂದು ಆರೋಪಿಸಿದ್ದಾರೆ.
After beating her husband inside a Police Station in Hisar now Haryana Boxer Saweety Boora is claiming that her Husband Deepak Hooda is a Homosexual. Both Saweety and Deepak are Arjuna awardee. Deepak is an Asiad bronze winner and former captain of the Indian kabaddi team.… https://t.co/LBsRG93fET pic.twitter.com/WZPDO7DVRD
— NCMIndia Council For Men Affairs (@NCMIndiaa) March 26, 2025
ಒಂದು ತಿಂಗಳ ಹಿಂದಷ್ಟೇ ದೀಪಕ್ ಹೂಡಾ ಫಾರ್ಚೂನರ್ ಕಾರು ಮತ್ತು ಒಂದು ಕೋಟಿ ರೂ. ವರದಣೆ ನೀಡಬೇಕೆಂದು ಕಿರುಕುಳ ನೀಡುತ್ತಿದ್ದಾರೆ ಎಂದು ಸವೀಟಿ ಬೋರಾ ಪೊಲೀಸ್ ಠಾಣೆಗೆ ದೂರು ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ನಿಯ ಆರೋಪಕ್ಕೆ ಪ್ರತಿಯಾಗಿ ದೀಪಕ್ ಕೂಡ ಕೂಡ ತನ್ನ ಅತ್ತೆ ಮನೆಯವರ ವಿರುದ್ಧ ಆಸ್ತಿ ಕಬಳಿಕೆ ಮತ್ತು ಮೋಸದ ಆರೋಪ ಮಾಡಿ ದೀಪಕ್ ಕೂಡ ಪ್ರತಿ ದೂರು ಸಲ್ಲಿಸಿದ್ದರು.
ಇದನ್ನೂ ಓದಿ Boxer Saweety Boora: ಪೊಲೀಸ್ ಠಾಣೆಯಲ್ಲೇ ಪತಿಯ ಮೇಲೆ ಹಲ್ಲೆ ನಡೆಸಿದ ಬಾಕ್ಸರ್ ಸವೀಟಿ ಬೂರಾ; ವಿಡಿಯೊ ವೈರಲ್
ಈ ಪ್ರಕರಣದ ಕುರಿತ ವಿಚಾರಣೆಗೆ ದೀಪಕ್ ಹೂಡಾ ಮತ್ತು ಸವೀಟಿ ಬೂರಾ ಮತ್ತು ಅವರ ಕುಟುಂಬ ಸದಸ್ಯರು ಹಿಸಾರ್‌ನ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ತಾಳ್ಮೆ ಕಳೆದುಕೊಂಡ ಸವೀಟಿ ಬೂರಾ ಏಕಾಏಕಿಯಾಗಿ ದೀಪಕ್ ಹೂಡಾ ಕಪಾಳಕ್ಕೆ ಬಾರಿಸುವ ಮೂಲಕ ಹಲ್ಲೆ ನಡೆಸಿಸದ್ದರು. ಘಟನೆ ಮಾರ್ಚ್ 15 ರಂದು ನಡೆದರೂ ಕೂಡ ಈ ವಿಡಿಯೊ ಮಾರ್ಚ್ 25 ರಂದು ವೈರಲ್ ಆಗಿತ್ತು.