ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ ಉದ್ಘಾಟನ ಸಮಾರಂಭ ಎಷ್ಟು ಗಂಟೆಗೆ ಆರಂಭ?

IPL 2025 Opening Ceremony: ಉದ್ಘಾಟನಾ ಸಮಾರಂಭದಲ್ಲಿ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಗಾಯಕರಾದ ಅರಿಜಿತ್ ಸಿಂಗ್ ಮತ್ತು ಕರಣ್ ಔಜ್ಲಾ ಅವರು ಹಾಡಲಿದ್ದಾರೆ. ಪಂದ್ಯಕ್ಕೆ ಬಾಲಿವುಡ್ ತಾರೆಯರ ದಂಡು ಇಲ್ಲಿ ಸೇರುವ ನಿರೀಕ್ಷೆ ಇದೆ.

ಐಪಿಎಲ್‌ ಉದ್ಘಾಟನ ಸಮಾರಂಭ ಎಷ್ಟು ಗಂಟೆಗೆ ಆರಂಭ?

Profile Abhilash BC Mar 22, 2025 9:27 AM

ಕೋಲ್ಕತಾ: ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಇಂದು 18ನೇ(IPL 2025) ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ವರ್ಣರಂಜಿತ ಚಾಲನೆ(IPL 2025 Opening Ceremony) ಸಿಗಲಿದೆ. ಕೆಕೆಆರ್‌ ಮತ್ತು ಆರ್‌ಸಿಬಿ ಪಂದ್ಯ ಆರಂಭಕ್ಕೂ ಮುನ್ನ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಗಾಯಕರಾದ ಅರಿಜಿತ್ ಸಿಂಗ್ ಮತ್ತು ಕರಣ್ ಔಜ್ಲಾ ಅವರು ಹಾಡಲಿದ್ದಾರೆ. ಪಂದ್ಯಕ್ಕೆ ಬಾಲಿವುಡ್ ತಾರೆಯರ ದಂಡು ಇಲ್ಲಿ ಸೇರುವ ನಿರೀಕ್ಷೆ ಇದೆ. ಆದರೆ ಮಳೆ ಭೀತಿ ಕೂಡ ಎದುರಾಗಿದೆ. ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ.

ಸಿಎಬಿ ಅಧ್ಯಕ್ಷರ ಪ್ರಕಾರ, ಉದ್ಘಾಟನ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ ಆಗಿದೆ. ಮೊದಲ ಪಂದ್ಯದ ವೇಳೆ ಬಾಲಿವುಡ್‌ನ ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ, ಟ್ರಿಪ್ಟಿ ಡಿಮ್ರಿ, ಅನನ್ಯಾ ಪಾಂಡೆ, ಮಾಧುರಿ ದೀಕ್ಷಿತ್, ಜಾನ್ವಿ ಕಪೂರ್, ಊರ್ವಶಿ ರೌಟೇಲಾ, ಪೂಜಾ ಹೆಗ್ಡೆ, ಕರೀನಾ ಕಪೂರ್, ಆಯುಷ್ಮಾನ್ ಖುರಾನಾ ಮತ್ತು ಸಾರಾ ಅಲಿ ಖಾನ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.



ಬರೀ ಕೋಲ್ಕತಾದಲ್ಲಿ ಮಾತ್ರವಲ್ಲ, ಈ ಬಾರಿ ಎಲ್ಲ 13 ತಾಣಗಳಲ್ಲೂ ಉದ್ಘಾಟನಾ ಸಮಾರಂಭ ನಡೆಯಲಿದೆ ಎನ್ನಲಾಗಿದೆ. ಇತರ ಮೈದಾನಗಳಲ್ಲಿ ಪಂದ್ಯದ ಇನ್ನಿಂಗ್ಸ್‌ ವಿರಾಮದ ಹೊತ್ತಿನಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಇಲ್ಲಿಯೂ ಬಾಲಿವುಡ್‌ ತಾರೆಯರ ದಂಡೇ ನೆರೆಯಲಿದೆ. 2ರಿಂದ 3 ಕಲಾವಿದರು ಪ್ರದರ್ಶನ ನೀಡುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ IPL 2025 Fan Parks: ಈ ಬಾರಿ ದೇಶದ 50 ನಗರಗಳಲ್ಲಿ ಐಪಿಎಲ್‌ ಫ್ಯಾನ್ ಪಾರ್ಕ್‌



ಈ ಬಾರಿ ಐಪಿಎಲ್ ಟೂರ್ನಿ ದೇಶದ ವಿವಿಧ 13 ನಗರಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. 10 ಐಪಿಎಲ್ ತಂಡಗಳು ತಮ್ಮ ತವರಿನ ಮೈದಾನದಲ್ಲಿ ಕ್ರಿಕೆಟ್ ಆಡುವುದು ಮಾತ್ರವಲ್ಲದೇ ತಮ್ಮ ತವರಿನಾಚೆ ಅಂದರೆ ವಿಶಾಖಪಟ್ಟಣಂ, ಗುವಾಹಟಿ ಹಾಗೂ ಧರ್ಮಶಾಲಾ ಮೈದಾನದಲ್ಲಿಯೂ ಕೆಲವು ಐಪಿಎಲ್ ಪಂದ್ಯಗಳನ್ನು ಆಡಲಿವೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ತಮ್ಮ ಪಾಲಿನ ಕೆಲವು ಪಂದ್ಯಗಳನ್ನು ಈ ಮೂರು ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲಿವೆ.