IPL 2025: ಎರಡು ಬಾರಿ ದಂಡ ಬಿದ್ದರೂ ಬುದ್ಧಿ ಕಲಿಯದ ದಿಗ್ವೇಶ್ ರಾಥಿ; ಈ ಬಾರಿ ವಿಭಿನ್ನ ಸಂಭ್ರಮಾರಣೆ
ಈ ಹಿಂದೆ ಎರಡು ಬಾರಿ ನೋಟ್ ಬುಕ್ ಸಂಭ್ರಮಾರಣೆ ಮಾಡಿದ ತಪ್ಪಿಗೆ ರಾಥಿ ಪಂದ್ಯದ ಸಂಭಾವನೆಯ ಶೇ. 50ರಷ್ಟು ದಂಡಕ್ಕೆ ಗುರಿಯಾಗಿದ್ದರು. ಮೊದಲ ಬಾರಿಯ ತಪ್ಪಿಗೆ ಶೇ. 25ರಷ್ಟು ದಂಡ ವಿಧಿಸಿ, 1 ಡಿಮೆರಿಟ್ ಅಂಕ ನೀಡಲಾಗಿತ್ತು. ಅವರ ಅತಿರೇಕದ ಸಂಭ್ರಮಾಚರಣೆ ಇದೇ ರೀತಿ ಮುಂದುವರಿದರೆ ಬಿಸಿಸಿಐ ಒಂದು ಪಂದ್ಯ ನಿಷೇಧ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.


ಕೋಲ್ಕತಾ: ನೋಟ್ ಬುಕ್ ಸಂಭ್ರಮಾರಣೆ(Digvesh Rathi Is notebook Celebration) ಮಾಡಿ ಈಗಾಗಲೇ ಎರಡು ಬಾರಿ ದಂಡಕ್ಕೆ ಗುರಿಯಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿ(Digvesh Rathi's Celebrations) ತಮ್ಮ ವಿಭಿನ್ನ ಸಂಭ್ರಮಾರಣೆಯನ್ನು ಬಿಡುವಂತೆ ಕಾಣುತ್ತಿಲ್ಲ. ಮಂಗಳವಾರ ನಡೆದಿದ್ದ ಕೊಲ್ಕತ್ತಾ ನೈಟ್ ರೈಡರ್ಸ್(LSG vs KKR) ವಿರುದ್ಧದ ಐಪಿಎಲ್(IPL 2025) ಪಂದ್ಯದಲ್ಲಿ ಮತ್ತೆ ಅತಿರೇಕದ ಸಂಭ್ರಮಾರಣೆ ಮಾಡಿದ್ದಾರೆ.
ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ಬೃಹತ್ ಮೊತ್ತದ ಮೇಲಾಟದ ಪಂದ್ಯದಲ್ಲಿ ಸುನೀಲ್ ನರೈನ್ ಅವರ ವಿಕೆಟ್ ಪಡೆದೊಡನೆ ತನ್ನ ಎಂದಿನ ನೋಟ್ ಬುಕ್ ಸೆಲೆಬ್ರೇಷನ್‌ನಲ್ಲಿ ಕೊಂಚ ಬದಲಾವಣೆ ಮಾಡಿ ಮೈದಾನದ ಮೇಲೆ ಸಹಿ ಹಾಕುವ ಮೂಲಕ ಸಂಭ್ರಮಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದ್ದು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಲ ಮಾಜಿ ಆಟಗಾರರು ಬಿಸಿಸಿಐ ಆಗ್ರಹಿಸಿದ್ದಾರೆ. ಸದ್ಯ ಈ ಸಂಭ್ರಮಾಚರಣೆ ಮಾಡಿದಕ್ಕೆ ಬಿಸಿಸಿಐ ಇದುವರೆಗೂ ದಂಡ ವಿಧಿಸಿಲ್ಲ.
ಇದನ್ನೂ ಓದಿ IPL 2025: ಲಖನೌ ಸ್ಪಿನ್ನರ್ ದಿಗ್ವೇಶ್ ರಾಠಿ ಸಕ್ಸಸ್‌ಗೆ ಪ್ರಮುಖ ಕಾರಣ ತಿಳಿಸಿದ ಏಡೆನ್ ಮಾರ್ಕ್ರಮ್!
ಈ ಹಿಂದೆ ಎರಡು ಬಾರಿ ನೋಟ್ ಬುಕ್ ಸಂಭ್ರಮಾರಣೆ ಮಾಡಿದ ತಪ್ಪಿಗೆ ರಾಥಿ ಪಂದ್ಯದ ಸಂಭಾವನೆಯ ಶೇ. 50ರಷ್ಟು ದಂಡಕ್ಕೆ ಗುರಿಯಾಗಿದ್ದರು. ಮೊದಲ ಬಾರಿಯ ತಪ್ಪಿಗೆ ಶೇ. 25ರಷ್ಟು ದಂಡ ವಿಧಿಸಿ, 1 ಡಿಮೆರಿಟ್ ಅಂಕ ನೀಡಲಾಗಿತ್ತು. ಅವರ ಅತಿರೇಕದ ಸಂಭ್ರಮಾಚರಣೆ ಇದೇ ರೀತಿ ಮುಂದುವರಿದರೆ ಬಿಸಿಸಿಐ ಒಂದು ಪಂದ್ಯ ನಿಷೇಧ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
Digvesh Rathi celebration 😂 #KKRvsLSG pic.twitter.com/4ioBpYmsfw
— Ashish (@Ashish2____) April 8, 2025
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಮಿಚೆಲ್ ಮಾರ್ಶ್(48 ಎಸೆತದಲ್ಲಿ 81) ಮತ್ತು ನಿಕೋಲಸ್ ಪೂರನ್ (36 ಎಸೆತಗಳಲ್ಲಿ ಅಜೇಯ 87) ಬ್ಯಾಟೀಂಗ್ ನೆರವಿನಿಂದ 3 ವಿಕೆಟ್‌ಗೆ 238ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಕೆಕೆಆರ್ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಅವರ ಬ್ಯಾಟಿಂಗ್ ಹೋರಾಟದ ಹೊರತಾಗಿಯೂ 4 ರನ್ ಅಂತರದ ಸೋಲು ಕಂಡಿತು. 5 ವಿಕೆಟ್ ಕಳೆದುಕೊಂಡು 201 ರನ್ ಬಾರಿಸಲಷ್ಟೇ ಶಕ್ತವಾಯಿತು.