Steven Smith: ಏಷ್ಯಾದಲ್ಲಿ ದಾಖಲೆ ಬರೆದ ಸ್ಟೀವನ್ ಸ್ಮಿತ್
Steven Smith: ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 27 ರನ್ ಪೂರ್ತಿಗೊಳಿಸುತ್ತಿದ್ದಂತೆ ಏಷ್ಯಾದ ಉಪಖಂಡದಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರರ ಎನಿಸಿಕೊಂಡರು. ಈ ಮೂಲಕ ಮಾಜಿ ಆಟಗಾರ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಪಾಂಟಿಂಗ್ 1,889 ರನ್ ಬಾರಿಸಿದ್ದರು.
![Steven Smith](https://cdn-vishwavani-prod.hindverse.com/media/images/Steven_Smith.max-1280x720.jpg)
![Profile](https://vishwavani.news/static/img/user.png)
ಗಾಲೆ: ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ(Sri Lanka vs Australia 2nd Test) ಆಸ್ಟ್ರೇಲಿಯಾದ ಅನುಭವಿ ಆಟಗಾರ ಸ್ಟೀವನ್ ಸ್ಮಿತ್(Steve Smith) ಅವರು ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 27 ರನ್ ಪೂರ್ತಿಗೊಳಿಸುತ್ತಿದ್ದಂತೆ ಏಷ್ಯಾದ ಉಪಖಂಡದಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರರ ಎನಿಸಿಕೊಂಡರು. ಈ ಮೂಲಕ ಮಾಜಿ ಆಟಗಾರ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಪಾಂಟಿಂಗ್ 1,889 ರನ್ ಬಾರಿಸಿದ್ದರು. ಸ್ಮಿತ್ ಇದೀಗ ಈ ಮೊತ್ತವನ್ನು ಮೀರಿದ್ದಾರೆ.
ರಿಕಿ ಪಾಂಟಿಂಗ್ ಅವರ ಅತಿ ಹೆಚ್ಚು ಟೆಸ್ಟ್ ಕ್ಯಾಚ್((197))ಗಳ ದಾಖಲೆಯನ್ನು ಮುರಿದ ಕೇವಲ ಒಂದು ದಿನದ ಅಂತರದಲ್ಲಿ ಸ್ಮಿತ್ ಮತ್ತೊಂದು ದಾಖಲೆಯನ್ನು ಮುರಿದಂತಾಗಿದೆ. ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 257 ರನ್ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟುತ್ತಿರುವ ಆಸ್ಟ್ರೇಲಿಯಾ ಸದ್ಯ ಮೂರು ವಿಕೆಟ್ ಕಳೆದುಕೊಂಡರೂ ಉತ್ತಮ ಸ್ಥಿತಿಯಲ್ಲಿದೆ. ಸ್ಮಿತ್ ಅರ್ಧಶತಕ ಪೂರೈಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಸ್ಮಿತ್ ಕೇವಲ 57 ಎಸೆತಗಳಲ್ಲಿ ತಮ್ಮ ವೇಗದ ಟೆಸ್ಟ್ ಅರ್ಧಶತಕವನ್ನು ದಾಖಲಿಸಿದ ಬಳಿಕ 141 ರನ್ ಗಳಿಸಿದ್ದರು. ಈ ಮೂಲಕ ಶ್ರೀಲಂಕಾದಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರನೇ ಶತಕ ದಾಖಲಿಸಿದರು. ಮತ್ತು ಏಷ್ಯಾದಲ್ಲಿ ಒಟ್ಟಾರೆ ಅವರ ಆರನೇ ಶತಕವಾಗಿದೆ.
Steve Smith goes all the way!
— 7Cricket (@7Cricket) February 7, 2025
Straight over Jayasuriya's head for the first six of the innings #SLvAUS pic.twitter.com/52AddqUjO7
ಗಾಯದಿಂದಾಗಿ ನಾಯಕ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಸ್ಮಿತ್‌ಗೆ ನಾಯಕತ್ವ ಸಿಗುವ ಸಾಧ್ಯತೆ ಇದೆ. ಕಮಿನ್ಸ್ ಭಾರತ ವಿರುದ್ಧ ಟೆಸ್ಟ್ ಸರಣಿ ವೇಳೆ ಪಾದ ಗಾಯಕ್ಕೆ ತುತ್ತಾಗಿದ್ದರು. ಮತ್ತೊಂದೆಡೆ ಹೇಜಲ್‌ವುಡ್ ಸ್ನಾಯುಸೆಳೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಈಗಾಗಲೇ ಆಲ್ರೌಂಡರ್ ಮಿಚೆಲ್ ಮಾರ್ಷ್ ಕೂಡಾ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಫೆ.12ರ ವರೆಗೂ ತಂಡದಲ್ಲಿ ಬದಲಾವಣೆ ಮಾಡುವ ಅವಕಾಶವಿದೆ.
ಇದನ್ನೂ ಓದಿ AUS vs SL: 10 ಸಾವಿರ ಟೆಸ್ಟ್ ರನ್ ಪೂರೈಸಿ ವಿಶೇಷ ದಾಖಲೆ ಬರೆದ ಸ್ಟೀವನ್ ಸ್ಮಿತ್!
ಆಸ್ಟ್ರೇಲಿಯ ತಂಡ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನದೊಂದಿಗೆ ಬಿ ಗುಂಪಿನಲ್ಲಿ ಕಾಣಿಸಿಕೊಂಡಿದೆ. ತನ್ನ ಮೊದಲ ಪಂದ್ಯವನ್ನು ಫೆ.22 ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ. ಸ್ಟೋಯ್ನಿಸ್ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅವರು ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಸ್ಟೋಯ್ನಿಸ್ ಈ ವರೆಗೂ ಟೆಸ್ಟ್ ಆಡಿಲ್ಲ. ಆದರೆ ಟಿ20ಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.