ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Self Harming: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆಗೆ ಶರಣು

ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆಗೆ ಶರಣು

ವಿನಯ್ ಸಾವಿನ ಹಿಂದೆ ಅನುಮಾನಗಳು ಮೂಡಿವೆ. ಇತ್ತೀಚೆಗೆ ವಿನಯ್‌ ಅಡ್ಮಿನ್‌ ಆಗಿದ್ದ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ಆಕ್ಷೇಪಾರ್ಹ ಫೋಟೋ ವೈರಲ್ ಆಗಿತ್ತು. ಈ ಸಂಬಂಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆ‌ರ್ ದಾಖಲಾಗಿತ್ತು.

Self Harming: ಮಗ ಐಫೋನ್‌ ತಗೊಂಡಿದ್ದನ್ನು ಪ್ರಶ್ನಿಸಿದ ತಂದೆ, ಆತ್ಮಹತ್ಯೆ ಮಾಡಿಕೊಂಡ ಮಗ

ಐಫೋನ್‌ ತಗೊಂಡಿದ್ದನ್ನು ಪ್ರಶ್ನಿಸಿದ ತಂದೆ, ಆತ್ಮಹತ್ಯೆ ಮಾಡಿಕೊಂಡ ಮಗ

ಯುವಕ ಇಎಂಐ ಮೂಲಕ 70 ಸಾವಿರ ರೂ. ಬೆಲೆಯ ಐಫೋನ್ ಖರೀದಿಸಿದ್ದ. ಈ ವಿಚಾರ ಗೊತ್ತಾಗಿ ಇಷ್ಟೊಂದು ಹಣ ಕೊಟ್ಟು ಯಾಕೆ ಮೊಬೈಲ್ ತಗೊಂಡಿದ್ದೀಯಾ? ಕಡಿಮೆ ದರದ ಮೊಬೈಲ್ ತೆಗೆದುಕೊಳ್ಳಬೇಕಿತ್ತು ಎಂದು ತಂದೆ ತಿಳಿವಳಿಕೆ ಹೇಳಿದ್ದರು.

Gold Price Today: ಸ್ವರ್ಣಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರದಲ್ಲಿ ಭಾರೀ ಇಳಿಕೆ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today: ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 160ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 174 ರೂ. ಇಳಿಕೆ ಆಗಿದೆ. ಚಿನ್ನದ ದರ 8,400 ರೂ. ಮತ್ತು 9,164 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 67,200 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 84,000 ರೂ. ಮತ್ತು 100 ಗ್ರಾಂಗೆ 8,40,000 ರೂ. ನೀಡಬೇಕಾಗುತ್ತದೆ.

ಐಎ.ಎಸ್, ಕೆ.ಎ.ಎಸ್, ಪಿಎಸೈ, ಬ್ಯಾಂಕಿಂಗ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ 11 ತಿಂಗಳ ಉಚಿತ ತರಬೇತಿಗೆ ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿರವರಿಂದ ವ್ಯವಸ್ಥೆ

ತರಬೇತಿಯ ಸದ್ಬಳಕೆ ಮಾಡಿಕೊಂಡು ಸರ್ಕಾರಿ ನೌಕರಿ ಪಡೆಯಬೇಕು

11 ತಿಂಗಳುಗಳ ಕಾಲ ಸ್ಪರ್ಧಾಲೈನ್ ಮುಖಾಂತರ ಉಚಿತ, ತರಬೇತಿ ನೀಡಲಾಗುತ್ತಿದ್ದು ಈ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಮಟ್ಟದ ಸರ್ಕಾರಿ ನೌಕರರಾಗಿ ತಾಲೂಕಿಗೆ ಕೀರ್ತಿ ತರಬೇಕೆಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿರವರು ವಿದ್ಯಾರ್ಥಿಗಳಿಗೆ ಕರೆ

ಮೀಸಲು ವಿಚಾರದಲ್ಲಿ ಆಡಳಿತ ಪಕ್ಷದ ಮುಖಂಡರು ಮತ್ತು ಆಯುಕ್ತರ ನಡುವೆ ಬಿರುಸಾದ ವಾಗ್ವಾದ

ಮಳಿಗೆ ಹರಾಜಿನಲ್ಲಿ ಮೀಸಲು ಅಳವಡಿಕೆಗೆ ಕಗ್ಗಂಟು

ಈಗಿರುವ ಮಳಿಗೆಗಳಲ್ಲಿ ಬಹುತೇಕ ಬಲಜಿಗ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿ ಗಳನ್ನು ನಡೆಸುತ್ತಿದ್ದಾರೆ. ಮೀಸಲಾತಿ ಜಾರಿಯಾದರೆ ೧೮ ರಿಂದ ೨೦ ಅಂಗಡಿಗಳು ಎಸ್ಸಿ,ಎಸ್‌ಟಿ ವರ್ಗದ ಪಾಲಾಗಲಿವೆ. ಇದು ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಬಲಜಿಗ ಮುಖಂಡರು ಮಾಡುತ್ತಿದ್ದಾರೆ ಎಂಬ ದೂರಿದೆ

Theft Case: ನ್ಯಾಯಾಧೀಶರ ಮನೆಯಲ್ಲಿಯೇ ಚಿನ್ನಾಭರಣ ಕಳವು!

ನ್ಯಾಯಾಧೀಶರ ಮನೆಯಲ್ಲಿಯೇ ಚಿನ್ನಾಭರಣ ಕಳವು!

ಕುಟುಂಬದ ಸದಸ್ಯರೆಲ್ಲರು ಸೇರಿ ಕೊಪ್ಪಳಕ್ಕೆ ಹೋಗಿದ್ದಾಗ ಒಳನುಗ್ಗಿದ ಕಳ್ಳರು ಗುಂಪು ಬರೋಬ್ಬರಿ 7,61,800 ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದು, ಪರಾರಿಯಾಗಿದ್ದಾರೆ. ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನ್ಯಾಯಾಧೀಶರು ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Power Cut: ವಿದ್ಯುತ್‌ ದರ ಏರಿಕೆ ಜೊತೆಗೆ ಈಗ ಲೋಡ್‌ ಶೆಡ್ಡಿಂಗ್‌ ಶಾಕ್‌

ವಿದ್ಯುತ್‌ ದರ ಏರಿಕೆ ಜೊತೆಗೆ ಈಗ ಲೋಡ್‌ ಶೆಡ್ಡಿಂಗ್‌ ಶಾಕ್‌

ಕಳೆದ ಒಂದು ವಾರದಿಂದ ಎಸ್ಕಾಂಗಳು ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿವೆ. ವಿದ್ಯುತ್ ಮಾರ್ಗ ನಿರ್ವಹಣೆ, ಮಳೆ, ಗಾಳಿ, ಇತರೆ ಕಾರಣ ನೀಡಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಧಿಕೃತವಾಗಿ ವಿದ್ಯುತ್ ಕಡಿತ ಬದಲು ಅನಿಯಮಿತ ಕಡಿತ ಮಾಡಲಾಗುತ್ತಿದೆ.

Vastu Tips: ಶಾಸ್ತ್ರದ ಪ್ರಕಾರ, ಯಾವ ರೀತಿ ದೇವರ ಕೋಣೆ ನಿರ್ಮಿಸಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತೆ...?

ದೇವರ ಮನೆ ವಾಸ್ತು ಹೀಗೆ ಇರಲಿ...!

Vastu Tips: ದೇವರ ಕೋಣೆಯನ್ನು ಎಷ್ಟು ಉತ್ತಮ ರೀತಿಯಾಗಿ ಇಟ್ಟುಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಜೀವನ ಇರುತ್ತದೆ. ದೇವರ ಕೋಣೆ ನಿರ್ಮಿಸುವಾಗ ಶಾಸ್ತ್ರದಲ್ಲಿನ ನಿಯಮಗಳನ್ನು ಅನುಸರಿಸಬೇಕು. ಶಾಸ್ತ್ರದ ಪ್ರಕಾರ, ಯಾವ ರೀತಿ ದೇವರ ಕೋಣೆ ನಿರ್ಮಿಸಿದರೆ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತೆ.? ದೇವರ ಕೋಣೆಯನ್ನು ಹೀಗೆ ನಿರ್ಮಿಸಿ..

Bengaluru Karaga: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಆರಂಭ

ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಆರಂಭ

ಈ ಬಾರಿ ಕರಗದಲ್ಲಿ 20 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಕಳೆದ 14 ವರ್ಷಗಳಿಂದ ಜ್ಞಾನೇಂದ್ರ ಕರಗ ಹೊರುತ್ತಿದ್ದಾರೆ. ಏಪ್ರಿಲ್ 4 ರಿಂದ 14ರ ವರೆಗೂ ಕರಗ ಉತ್ಸವ ನಡೆಯಲಿದೆ.

Self Harming: ಅಂಗವಿಕಲ ಮಕ್ಕಳ ಜೊತೆಗೆ ತಾಯಿ ಆತ್ಮಹತ್ಯೆ

ಅಂಗವಿಕಲ ಮಕ್ಕಳ ಜೊತೆಗೆ ತಾಯಿ ಆತ್ಮಹತ್ಯೆ

ಪತಿ ಮನೆಯಲ್ಲಿ ಇಲ್ಲದಿದ್ದಾಗ ತಾಯಿ ಹಾಗೂ ಮಕ್ಕಳಿಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಮಕ್ಕಳ ಅಂಗವಿಕಲರಾಗಿರುವ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ಈ ದುರಂತ ನಡೆದಿದೆ.

Karnataka Weather: ಮನೆಯಿಂದ ಹೊರಗಿಳಿಯುವಾಗ ಛತ್ರಿ ಜತೆಗಿರಲಿ; ಇಂದೂ ಸುರಿಯಲಿದೆ ವರ್ಷಧಾರೆ

ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ

Weather Forecast: ಶುಕ್ರವಾರ (ಏ. 4) ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ಬೆಂಗಳೂರು ಸಹಿತ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Pranitha Subhash: ಎರಡು ಮಕ್ಕಳಾದ ನಂತರ ಫ್ಯಾಷನ್‌ ಶೋಗಳಲ್ಲಿ ಬ್ಯುಸಿಯಾದ ನಟಿ ಪ್ರಣೀತಾ ಸುಭಾಷ್‌

ಎರಡು ಮಕ್ಕಳಾದ ನಂತರ ಫ್ಯಾಷನ್‌ ಶೋಗಳಲ್ಲಿ ಬ್ಯುಸಿಯಾದ ನಟಿ ಪ್ರಣೀತಾ ಸುಭಾಷ್‌

Star Fashion: ಸ್ಯಾಂಡಲ್‌ವುಡ್‌ ಮಾತ್ರವಲ್ಲ, ಬಹುಭಾಷೆಗಳಲ್ಲಿ ನಟಿಸಿರುವ ಪ್ರಖ್ಯಾತ ನಟರೊಂದಿಗೆ ನಟಿಸಿರುವ ನಟಿ ಪ್ರಣೀತಾ ಸುಭಾಷ್‌ ಎರಡು ಮಕ್ಕಳಾದ ನಂತರ ಫ್ಯಾಷನ್‌ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾರೀಸ್‌ ಶೋನಲ್ಲಿ ಕಾಣಿಸಿಕೊಂಡ ನಂತರ ಇದೀಗ ಮುಂಬೈನಲ್ಲಿ ನಡೆದ ಫ್ಯಾಷನ್‌ ಶೋವೊಂದರಲ್ಲೂ ಹೆಜ್ಜೆ ಹಾಕಿದ್ದಾರೆ. ಈ ಶೋನಲ್ಲಿ ಅವರ ಔಟ್‌ಫಿಟ್‌ ಹೇಗಿತ್ತು? ಫ್ಯಾಷನ್‌ ವಿಮರ್ಶಕರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

Ranya Rao Case: ಕೇವಲ 4 ತಿಂಗಳಲ್ಲಿ 49 ಕೆಜಿ ಕಳ್ಳ ಸಾಗಾಣೆ; ನಟಿ ರನ್ಯಾ ರಾವ್‌ ಕರಾಮತ್ತು ಬೆಳಕಿಗೆ

4 ತಿಂಗಳಲ್ಲಿ 49 ಕೆಜಿ ಕಳ್ಳ ಸಾಗಾಣೆ; ನಟಿ ರನ್ಯಾ ರಾವ್‌ ಕರಾಮತ್ತು ಬೆಳಕಿಗೆ

Actress Ranya Rao: ಕಳೆದ ತಿಂಗಳು ಚಿನ್ನ ಅಕ್ರಮ ಸಾಗಾಣೆ ಮಅಡುತ್ತಿದ್ದ ವೇಳೆ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ ಬಗ್ಗೆ ಒಂದೊಂದೇ ವಿವರ ಬೆಳಕಿಗೆ ಬರುತ್ತಿದೆ. ಈ ಪ್ರಕರಣದ 3ನೇ ಆರೋಪಿ ಸಾಹಿಲ್ ಜೈನ್ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತನಿಖಾಧಿಕಾರಿಗಳ ಮುಂದೆ ಅನೇಕ ಸಂಗತಿ ಬಾಯ್ಬಿಟ್ಟಿದ್ದಾನೆ. ಈ ವೇಳೆ 4 ತಿಂಗಳಲ್ಲಿ ರನ್ಯಾ ಬರೋಬ್ಬರಿ 49.6 ಕೆಜಿ ಚಿನ್ನ ಸಾಗಿಸಿದ್ದ ಸ್ಫೋಟಕ ವಿಚಾರ ಬಯಲಾಗಿದೆ.

RAPIDO: ಬೈಕ್ ಟ್ಯಾಕ್ಸಿಗಳ ಮೇಲಿನ ಕರ್ನಾಟಕ ಹೈಕೋರ್ಟ್ ಆದೇಶದ ಕುರಿತು ರ‍್ಯಾಪಿಡೋ ಹೇಳಿಕೆ

ರ‍್ಯಾಪಿಡೋ ರಾಜ್ಯದಲ್ಲಿ ಕೈಗೆಟಕುವ ಮತ್ತು ಸಮರ್ಥ ಸಂಚಾರ ಒದಗಿಸುವ ಕಂಪನಿ

ಕರ್ನಾಟಕ ಮೂಲದ ಕಂಪನಿಯಾಗಿರುವ ರ‍್ಯಾಪಿಡೋ ರಾಜ್ಯದಲ್ಲಿ ಕೈಗೆಟಕುವ ಮತ್ತು ಸಮರ್ಥ ಸಂಚಾರ ಒದಗಿಸುವ ಕಂಪನಿಯಾಗಿದೆ. ಪ್ರತಿ ತಿಂಗಳು ನಮ್ಮ ಬೈಕ್ ಟ್ಯಾಕ್ಸಿಗಳು ಕರ್ನಾಟಕದಲ್ಲಿ ಸುಮಾರು 50 ಲಕ್ಷ ರೈಡ್ ಗಳನ್ನು ಒದಗಿಸುತ್ತದೆ. ಈ ಮೂಲಕ ಲಕ್ಷಾಂತರ ಜನರಿಗೆ ತಡೆರಹಿತ ಸಂಚಾರ ಆಯ್ಕೆಗಳನ್ನು ಒದಗಿಸುತ್ತದೆ. ಅದೇ ಸಮಯಲ್ಲಿ ರಾಜ್ಯದಲ್ಲಿ 1.5 ಲಕ್ಷ ಕ್ಯಾಪ್ಟನ್ ಗಳು ತಮ್ಮ ಜೀವನೋ ಪಾಯಕ್ಕಾಗಿ ನಮ್ಮ ವೇದಿಕೆಯನ್ನು ಅವಲಂಬಿಸಿದ್ದು, ವಿಶಾಲ ಗಿಗ್ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆಯನ್ನು ನೀಡುತ್ತಿವೆ.

Jockey 42 Movie: ʼಜಾಕಿ 42ʼ ಚಿತ್ರದ ಮೂಲಕ ಮತ್ತೆ ಒಂದಾದ ಗುರುತೇಜ್ ಶೆಟ್ಟಿ-ಕಿರಣ್ ರಾಜ್; ಟೈಟಲ್ ಪೋಸ್ಟರ್‌ ರಿಲೀಸ್‌

ʼಜಾಕಿ 42ʼ ಚಿತ್ರದ ಮೂಲಕ ಮತ್ತೆ ಒಂದಾದ ಗುರುತೇಜ್ ಶೆಟ್ಟಿ- ಕಿರಣ್ ರಾಜ್

Jockey 42 Movie: ಗುರುತೇಜ್ ಶೆಟ್ಟಿ ನಿರ್ದೇಶನದ, ನಟ ಕಿರಣ್ ರಾಜ್ ಅಭಿನಯದ ʼಜಾಕಿ 42ʼ ಚಿತ್ರದ ಟೈಟಲ್ ಪೋಸ್ಟರ್‌ ಅನ್ನು ಚಿತ್ರ ತಂಡವು ಬಿಡುಗಡೆಗೊಳಿಸಿದೆ. ಮೇ 15ರಿಂದ ಈ ಚಿತ್ರದ ಶೂಟಿಂಗ್‌ ಪ್ರಾರಂಭವಾಗಲಿದೆ.

ನೋಂದಾಯಿತವಲ್ಲದ ಮದರಸಾಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 5 ಲಕ್ಷ ರೂ ಅನುದಾನ: ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆ

5 ಲಕ್ಷ ರೂಪಾಯಿ ಅನುದಾನ ಪಡೆದು ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆ

ಸಾರ್ವಜನಿಕ ಸೊಸೈಟಿ ಹೆಸರಿನಲ್ಲಿ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ನೆಪದಲ್ಲಿ ಬೆಂಗ ಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2017ರ ಅಕ್ಟೋ ಬರ್ 25 ರಂದು 10 ಲಕ್ಷ ರೂಪಾಯಿ ಮಂಜೂರು ಮಾಡಿಸಿಕೊಂಡಿತ್ತು. ಈ ಪೈಕಿ 5 ಲಕ್ಷ ರೂಪಾಯಿ ಬಿಡುಗಡೆಯಾಗಿದೆ.

ಬೆಂಗಳೂರಿನಲ್ಲಿ ಏ. 4ರಂದು ಖ್ಯಾತ ಕಲಾವಿದ ಎಂ.ಟಿ.ವಿ. ಆಚಾರ್ಯ ಸ್ಮರಣಾರ್ಥ ಪೇಂಟಿಂಗ್ ಪ್ರದರ್ಶನ

ಏ. 4: ಕಲಾವಿದ ಎಂ.ಟಿ.ವಿ. ಆಚಾರ್ಯರ ಸ್ಮರಣಾರ್ಥ ಪೇಂಟಿಂಗ್ ಪ್ರದರ್ಶನ

ಭಾರತೀಯ ಕಲಾ ಲೋಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದ ಎಂ.ಟಿ.ವಿ. ಆಚಾರ್ಯ ಅವರ ಜೀವನ ಮತ್ತು ಕೃತಿಗಳನ್ನು ಸಂಭ್ರಮಿಸುವ ವಿಶೇಷ ಸ್ಮರಣಾರ್ಥ ಪ್ರದರ್ಶನವನ್ನು ಏ. 4ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ನಗರದ ಬಸವನಗುಡಿಯ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಏರ್ಪಡಿಸಲಾಗಿದೆ.

Organ Donation: ಪತಿಯ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪತ್ನಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಜೀವ; ಪತಿಯ ಅಂಗಾಂಗ ದಾನ ಮಾಡಿದ ಪತ್ನಿ

ಮೆದುಳಿನ ಹಿಂಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆ ಉಂಟಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ ಅವರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅಂಗಾಂಗಗಳನ್ನು ದಾನ ಮಾಡಲು ಅವರ ಪತ್ನಿ ನಿರ್ಧರಿಸಿದ್ದಾರೆ. ಈ ಮೂಲಕ ಪತಿಯ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Ashwini Puneeth Rajkumar: ಕಾಪು ಮಾರಿಯಮ್ಮ ದೇಗುಲಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ

ಕಾಪು ಮಾರಿಗುಡಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ

ಇತ್ತೀಚೆಗಷ್ಟೆ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅದ್ಧೂರಿಯಾದ ಬ್ರಹ್ಮ ಕಲಶೋತ್ಸವ ಜರುಗಿತ್ತು. ಬ್ರಹ್ಮ ಕಲಶೋತ್ಸವದ ಬಳಿಕ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಸಿನಿಮಾ ತಾರೆಯರು, ರಾಜಕೀಯ ನಾಯಕರು ಸೇರಿದಂತೆ ಅನೇಕರು ಮಾರಿಯಮ್ಮ ದೇಗುಲಕ್ಕೆ ಹಲವರು ಭೇಟಿ ನೀಡುತ್ತಿದ್ದಾರೆ‌. ಇದೀಗ ನಿರ್ಮಾಪಕಿ ಆಶ್ವಿನಿ ಪುನೀತ್ ಕಾಪು ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ: ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ ಚರ್ಚೆ

ರಾಜ್ಯದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ

ರಾಜ್ಯದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.

DK Shivakumar: ಬಿಜೆಪಿ-ಜೆಡಿಎಸ್ ಒಂದೇ ನಾಣ್ಯದ 2 ಮುಖಗಳು ಎಂದ ಡಿ.ಕೆ.ಶಿವಕುಮಾರ್‌

ಬಿಜೆಪಿ - ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಡಿಕೆಶಿ ಟೀಕೆ

DK Shivakumar: ಬಿಜೆಪಿ - ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದರ ಬಗ್ಗೆ ಸುಮ್ಮನೆ ಚರ್ಚೆ ಏಕೆ? ಬಿಜೆಪಿಯವರ ಪ್ರತಿಭಟನೆಗೆ ನಾನು ಶುಭ ಕೋರುತ್ತೇನೆ. ಅವರು ಪಕ್ಷ ಉಳಿಸಿಕೊಳ್ಳಲು ರಾಜಕೀಯ ಮಾಡುತ್ತಿದ್ದಾರೆ; ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

BJP Protest: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ: ವಿಜಯೇಂದ್ರ‌ ಟೀಕೆ

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ: ವಿಜಯೇಂದ್ರ‌

BY Vijayendra: ರಾಜ್ಯ ಸರ್ಕಾರವು ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ಜನಪರ ಕಾಳಜಿ ಇದ್ದಲ್ಲಿ ಈ ರೀತಿ ಬೆಲೆ ಏರಿಕೆ ಮಾಡುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Bengaluru Rain: ಬೆಂಗಳೂರಿನಲ್ಲಿ ತಂಪೆರೆದ ಬೇಸಗೆ ಮಳೆ; ಹಲವು ಕಡೆ ಕೆರೆಯಂತಾದ ರಸ್ತೆ

ಬೆಂಗಳೂರಿನಲ್ಲಿ ತಂಪೆರೆದ ಬೇಸಗೆ ಮಳೆ

Bengaluru News: ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಬೆಂಗಳೂರಿಗರಿಗೆ ಗುರುವಾರ (ಏ. 3) ದಿಢೀರ್‌ ಸುರಿದ ಮಳೆ ತಂಪೆರೆದಿದೆ. ನಗರದ ಹಲವೆಡೆ ಭಾರಿ ಮಳೆ ಸುರಿದಿದ್ದು, ವಾಹನ ಸವಾರರು, ಸಾರ್ವಜನಿಕರು ಪರದಾಡಿದರು. ಅಲ್ಲಲ್ಲಿ ಟ್ರಾಫಿಕ್‌ ಜಾಮ್‌ ಕೂಡ ಕಂಡುಬಂತು.

Railways Solar: ದೇಶದ 2,249 ರೈಲು ನಿಲ್ದಾಣ, ಸೇವಾ ಕಟ್ಟಡಗಳಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರ ಸ್ಥಾಪನೆ

ರೈಲ್ವೆಯಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರ ಸ್ಥಾಪನೆ

Railways Solar: ಭಾರತೀಯ ರೈಲ್ವೆ ಕಳೆದೊಂದು ದಶಕದಿಂದ ಸೌರ ಶಕ್ತಿ ಉತ್ಪಾದನೆ ಮತ್ತು ಬಳಕೆಗೆ ಪ್ರಾಧಾನ್ಯತೆ ನೀಡುತ್ತಿದ್ದು, ದೇಶಾದ್ಯಂತ ಈವರೆಗೆ 2,249 ರೈಲು ನಿಲ್ದಾಣಗಳು ಮತ್ತು ಸೇವಾ ಕಟ್ಟಡಗಳಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರಗಳನ್ನು ಸ್ಥಾಪಿಸಿದೆ. ಈ ಕುರಿತ ವಿವರ ಇಲ್ಲಿದೆ.