ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೀಸಲು ವಿಚಾರದಲ್ಲಿ ಆಡಳಿತ ಪಕ್ಷದ ಮುಖಂಡರು ಮತ್ತು ಆಯುಕ್ತರ ನಡುವೆ ಬಿರುಸಾದ ವಾಗ್ವಾದ

ಈಗಿರುವ ಮಳಿಗೆಗಳಲ್ಲಿ ಬಹುತೇಕ ಬಲಜಿಗ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿ ಗಳನ್ನು ನಡೆಸುತ್ತಿದ್ದಾರೆ. ಮೀಸಲಾತಿ ಜಾರಿಯಾದರೆ ೧೮ ರಿಂದ ೨೦ ಅಂಗಡಿಗಳು ಎಸ್ಸಿ,ಎಸ್‌ಟಿ ವರ್ಗದ ಪಾಲಾಗಲಿವೆ. ಇದು ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಬಲಜಿಗ ಮುಖಂಡರು ಮಾಡುತ್ತಿದ್ದಾರೆ ಎಂಬ ದೂರಿದೆ

ಮಳಿಗೆ ಹರಾಜಿನಲ್ಲಿ ಮೀಸಲು ಅಳವಡಿಕೆಗೆ ಕಗ್ಗಂಟು

ಗುರುವಾರ ರಾತ್ರಿ ೮.೩೦ ಆದರೂ ನಗರಸಭೆ ಆಯುಕ್ತರು ಅಧ್ಯಕ್ಷರು ಸದಸ್ಯರು ಸುಧೀರ್ಘ ಚರ್ಚೆಯಲ್ಲಿ ಮುಳುಗಿರುವ ದೃಶ್ಯ.

Profile Ashok Nayak Apr 4, 2025 10:36 AM

ಚಿಕ್ಕಬಳ್ಳಾಪುರ : ಏ.೫ರಂದು ನಡೆಯಬೇಕಿದ್ದ ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲು ಆಯುಕ್ತರ ಮೂಲಕ ಕಾಣದ ಕೈಗಳು ಪ್ರಯತ್ನಿಸುತ್ತಿದ್ದಾ ರೆಂದು ಆರೋಪಿಸಿ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಆಡಳಿತ ಪಕ್ಷದ ಸದಸ್ಯರು ಆಯುಕ್ತರ ವಿರುದ್ಧ ತಿರುಗಿಬಿದ್ದಿರುವ ಘಟನೆ ಗುರುವಾರ ನಡೆದಿದೆ. ನಗರಸಭೆ ಸುಪರ್ಧಿಯಲ್ಲಿರುವ 98 ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಏ.5ರಂದು ಕಾನೂನು ಬದ್ಧವಾಗಿ ನಡೆಸಲು ನಗರಾಡಳಿತ ಪ್ರಕಟಣೆ ಹೊರಡಿಸಿ, ಬೇಕಾದ ವವ್ಯವಸ್ಥೆ ಮಾಡಿಕೊಂಡಿದೆ. ಈ ಸಂಬಂಧ ಅಧ್ಯಕ್ಷ ಉಪಾಧ್ಯಕ್ಷರು ಏ.೨ರಂದು ತುರ್ತು ಸುದ್ದಿಗೋಷ್ಟಿ ನಡೆಸಿ ಕಾಣದ ಕೈಗಳು  ಹರಾಜು ಪ್ರಕ್ರಿಯೆ ನಿಲ್ಲಿಸಲು ಮುಂದಾಗಿದ್ದಾರೆ. ಒಂದು ವೇಳೆ ಹರಾಜು ಪ್ರಕ್ರಿಯೆ ನಿಂತಲ್ಲಿ ತಡೆಗೆ ಕಾರಣರಾದವರ ಮಾಹಿತಿ ಬಹಿರಂಗ ಪಡಿಸುವ ಎಚ್ಚರಿಕೆ ರವಾನಿಸಿದ್ದರು.

ಇದನ್ನೂ ಓದಿ: Chitradurga Accident: ಚಿತ್ರದುರ್ಗದಲ್ಲಿ 15 ಪಲ್ಟಿ ಹೊಡೆದ ಕಾರು; ಮೂವರ ಸಾವು, ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇದರ ಬೆನ್ನಲ್ಲೆ ಗುರುವಾರ ರಾತ್ರಿ ೮.೩೦ ಗಂಟೆಯಾದರೂ ಕೂಡ  ಅಧ್ಯಕ್ಷರು, ಉಪಾಧ್ಯಕ್ಷ ರು ಹರಾಜು ಪ್ರಕ್ರಿಯೆ ನಿಲ್ಲಬಾರದು, ಎಲ್ಲಾ ಸಮುದಾಯಗಳಿಗೂ ಅವಕಾಶ ನೀಡಬೇಕು ಎಂದು ಆಯುಕ್ತರ ಎದುರು ಪಟ್ಟು ಹಿಡಿದು ಕೂತಿದ್ದಾರೆ.

ತಡರಾತ್ರಿಯಾದರೂ ಸಭೆ ಮಾಡಲು ಕಾರಣ ಪರಿಶಿಷ್ಟಜಾತಿ ಜನಾಂಗದವರನ್ನು ಹರಾಜು ಪ್ರಕ್ರಿಯೆಯಿಂದ ದೂರವಿಡುವುದೇ ಆಗಿದೆ ಎನ್ನುವ ಆರೋಪಗಳು ಕೂಡ ಸಾರ್ವಜನಿಕ ವಲಯದಲ್ಲಿ ಬಿರುಗಾಳಿಯಂತೆ ಹರಡಿದ್ದು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.

ಈಗಿರುವ ಮಳಿಗೆಗಳಲ್ಲಿ ಬಹುತೇಕ ಬಲಜಿಗ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಮೀಸಲಾತಿ ಜಾರಿಯಾದರೆ ೧೮ ರಿಂದ ೨೦ ಅಂಗಡಿಗಳು ಎಸ್ಸಿ,ಎಸ್‌ಟಿ ವರ್ಗದ ಪಾಲಾಗಲಿವೆ.ಇದು ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಬಲಜಿಗ ಮುಖಂಡರು ಮಾಡುತ್ತಿದ್ದಾರೆ ಎಂಬ ದೂರಿದೆ. ಇದಕ್ಕೆ ಪುಷ್ಟಿನೀಡುವಂತೆ ಬಲಜಿಗ ಸಮುದಾಯದ ಅಂಗಡಿ ಮಾಲಿಕರು ಶಾಸಕ ಪ್ರದೀಪ್ ಈಶ್ವರ್ ಅವರನ್ನು ಬುಧ ವಾರ ಭೇಟಿ ಮಾಡಿ ಹರಾಜು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ ಎನ್ನುವ ಸಂಗತಿ ಕೂಡ ನಗರದಾದ್ಯಂತ ಕೇಳಿ ಬರುತ್ತಿದೆ.

ಒಂದು ವೇಳೆ ಮಳಿಗೆಗಳ ಹರಾಜು ನಿಂತಲ್ಲಿ,ಇದರಲ್ಲಿ ಶಾಸಕರ ಪಾತ್ರವನ್ನು ಅಲ್ಲಗಳೆಯು ವಂತಿಲ್ಲ, ಶಾಸಕರ ಬೆಂಬಲದಲ್ಲಿಯೇ ಆಯುಕ್ತರು ಹರಾಜು ಪ್ರಕ್ರಿಯೆ ಮುಂದೂಡಲು ಮುಂದಾಗಿದ್ದಾರೆ ಎಂಬ ಆರೋಪವನ್ನು ನಗರಸಭೆ ಹೊತ್ತುಕೊಳ್ಳಬೇಕಾಗಬಹುದು ಎಂಬ ಮಾತುಗಳು ಕೂಡ ಕಾಡ್ಗಿಚ್ಚಿಣಂತೆ ಹರಿದಾಡಿ ಕ್ಷಣಕ್ಕೊಂದು ಬಣ್ಣ ಪಡೆಯುತ್ತಿವೆ.

ಇದೇ ಕಾರಣಕ್ಕೆ ಗುರುವಾರ ರಾತ್ರಿ ೮.೩೦ ಆದರೂ ನಗರಸಭೆಯಲ್ಲಿ ಆಯುಕ್ತರು ಕುಳಿತಿ ದ್ದಾರೆ. ಇವರ ಜತೆಗೆ ಅಧ್ಯಕ್ಷ ಉಪಾಧ್ಯಕ್ಷರು ವಾಗ್ವಾದ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆಯುಕ್ತರು ತಾವೇ ಹೊರಡಿಸಿರುವ ಪ್ರಕಟಣೆಯಂತೆ ಹರಾಜು ಪ್ರಕ್ರಿಯೆ ನಡೆಸುವರೋ, ಇಲ್ಲಾ ಒತ್ತಡಕ್ಕೆ ಮಣಿದು ಕುಟು ನೆಪಗಳನ್ನು ಹೇಳಿ ಮುಂದೂಡುವರೋ ಕಾದು ನೋಡ ಬೇಕಿದೆ. ಈ ಎಲ್ಲಾ ಬೆಳವಣಿಗೆಗಳು ಏ.೫ರಂದು ಹರಾಜು ಪ್ರಕ್ರಿಯೆ ನಡೆಯುವುದೋ ಇಲ್ಲವೋ ಎಂಬ ಬಗ್ಗೆ ಗುಮಾನಿಯನ್ನು ಸಾರ್ವಜನಿಕ ವಲಯದಲ್ಲಿ ಮೂಡಿಸಿರುವುದು ಸುಳ್ಳಲ್ಲ.