Viral Video: ರಿಮಾಂಡ್ ಹೋಂನಿಂದ 21 ಮಕ್ಕಳು ಎಸ್ಕೇಪ್; ಶಾಕಿಂಗ್ ವಿಡಿಯೊ ವೈರಲ್
ಜಾರ್ಖಂಡ್‍ನ ಚೈಬಾಸಾದ ರಿಮಾಂಡ್ ಹೋಮ್‍ನಲ್ಲಿರುವ 21 ಮಕ್ಕಳು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಹಾಳುಮಾಡಿ, ಗೇಟ್‍ಗಳನ್ನು ಮುರಿದು ತಪ್ಪಿಸಿಕೊಂಡ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಪೊಲೀಸರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಮಕ್ಕಳನ್ನು ಹುಡುಕಾಡಿದ್ದು, ಅವರಲ್ಲಿ 4 ಮಂದಿಯನ್ನು ಪತ್ತೆ ಹಚ್ಚಿ ಮತ್ತೆ ರಿಮಾಂಡ್ ಹೋಂಗೆ ವಾಪಸ್ ಕರೆದುಕೊಂಡು ಬಂದಿದ್ದಾರಂತೆ


ರಾಂಚಿ: ಏನು ಅರಿಯದ ವಯಸ್ಸಿನಲ್ಲಿ ಅಪರಾಧ ಮಾಡಿದ ಮಕ್ಕಳನ್ನು ಬಾಲಾಪರಾಧಿಗಳೆಂದು ಪರಿಗಣಿಸಿ ಅವರನ್ನು ಕಂಬಿಗಳ ನಡುವೆ ಬಂಧಿಸುವ ಬದಲು ರಿಮಾಂಡ್ ಹೋಮ್‍ನಲ್ಲಿ ಇಡಲಾಗುತ್ತದೆ. ಆದರೆ ಜಾರ್ಖಂಡ್‍ನ ಚೈಬಾಸಾದ ರಿಮಾಂಡ್ ಹೋಮ್‍ನಲ್ಲಿರುವ 21 ಮಕ್ಕಳು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಮಾಡಿ ಗೇಟ್‍ಗಳನ್ನು ಮುರಿದು ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ದೃಶ್ಯದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಇದರಲ್ಲಿ ಬಾಲಾಪರಾಧಿಗಳು ಗೇಟನ್ನು ತಳ್ಳಿ ಹೊರಬಂದು ಮುಖ್ಯ ರಸ್ತೆಯ ಕಡೆಗೆ ಓಡುವುದು ಸೆರೆಯಾಗಿದೆ.
ವೈರಲ್ ಆದ ವಿಡಿಯೊದಲ್ಲಿ ಸಮವಸ್ತ್ರ ಧರಿಸಿದ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರು ಪುರುಷರು ಗೇಟ್ ಅನ್ನು ಕಾವಲು ಕಾಯುತ್ತಾ ಒಂದು ಕೈಯಲ್ಲಿ ಕೋಲು ಮತ್ತು ಇನ್ನೊಂದು ಕೈಯಲ್ಲಿ ಬಾಗಿಲಿನ ಹ್ಯಾಂಡಲ್ ಹಿಡಿದು, ಮಕ್ಕಳು ಹೊರಗೆ ಬರುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಮಕ್ಕಳು ಗೇಟ್ ಅನ್ನು ಮುರಿದು ತಪ್ಪಿಸಿಕೊಂಡು ಹೆದ್ದಾರಿಯ ಕಡೆಗೆ ಓಡಿದ್ದಾರೆ. ಈ ಮಕ್ಕಳು ಹೊರಹೋಗುವ ಮೊದಲು ಅಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ ರಿಮಾಂಡ್ ಹೋಮ್‍ನ ಅನೇಕ ವಸ್ತುಗಳನ್ನು ಹಾಳು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಿಮಾಂಡ್ ಹೋಮ್‌ನಿಂದ ಮಕ್ಕಳು ಓಡುತ್ತಿರುವ ದೃಶ್ಯ ಇಲ್ಲಿದೆ
चाईबासा के बाल सुधार गृह से बड़ी संख्या में बाल कैदियों के फरार होने की घटना सुरक्षा व्यवस्था में गंभीर चूक को दर्शाती है।
— Babulal Marandi (@yourBabulal) April 2, 2025
बाल सुधार गृह का उद्देश्य भटके हुए किशोरों को समाज की मुख्यधारा से जोड़ना होता है, लेकिन चाईबासा की यह घटना दर्शाती है कि सरकार बाल सुधार गृह के नाम पर… pic.twitter.com/5D1Zgnuznt
ಸರಿಸುಮಾರು 21 ಮಕ್ಕಳು ಈ ಕೃತ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಉಪವಿಭಾಗಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಎಚ್ಚೆತ್ತುಕೊಂಡು ಮಕ್ಕಳನ್ನು ಹುಡುಕಾಡಿದ್ದು, ಅವರಲ್ಲಿ 4 ಮಂದಿಯನ್ನು ಪತ್ತೆ ಹಚ್ಚಿ ಮತ್ತೆ ರಿಮಾಂಡ್ ಹೋಂಗೆ ವಾಪಸ್ ಕರೆದುಕೊಂಡು ಬಂದಿದ್ದಾರಂತೆ. ಮಂಗಳವಾರ (ಏಪ್ರಿಲ್ 1)ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ತಲೆಮರೆಸಿಕೊಂಡಿರುವ ಇತರ ಮಕ್ಕಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪೊಲೀಸರು ತನಿಖೆಯನ್ನು ಶುರುಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಜೀವ ಭಯಕ್ಕೆ ಪ್ರಿಯಕರನಿಗೆ ಪತ್ನಿಯನ್ನು ಧಾರೆ ಎರೆದುಕೊಟ್ಟ ಪತಿ; ಆದ್ರೆ ಕೊನೆಗೆ ಕಾದಿತ್ತು ಬಿಗ್ ಟ್ವಿಸ್ಟ್!
ಜಾರ್ಖಂಡ್‍ನ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು "ಭದ್ರತಾ ವ್ಯವಸ್ಥೆಯಲ್ಲಿನ ಗಂಭೀರ ಲೋಪ" ಎಂದು ಹೇಳಿದ್ದಾರೆ. "ಚೈಬಾಸಾದಲ್ಲಿ ನಡೆದ ಈ ಘಟನೆಯು ಸರ್ಕಾರವು ಬಾಲಾಪರಾಧಿ ಗೃಹದ ಹೆಸರಿನಲ್ಲಿ ಔಪಚಾರಿಕತೆಯನ್ನು ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ" ಎಂದು ಅವರು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದಿದ್ದಾರೆ. "@HemantSorenJMM ಓಡಿಹೋದ ಎಲ್ಲಾ ಬಾಲಾಪರಾಧಿಗಳನ್ನು ಆದಷ್ಟು ಬೇಗ ಮರಳಿ ಕರೆತರಬೇಕು ಮತ್ತು ಅವರಿಗೆ ಸರಿಯಾದ ಸಮಾಲೋಚನೆಯನ್ನು ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ಅವರು ಸಮಾಜಕ್ಕೆ ಮಾರಕವಾಗಬಹುದು. ಈ ಮಕ್ಕಳು ಏಕೆ ಓಡಿಹೋದರು ಮತ್ತು ಯಾರ ನಿರ್ಲಕ್ಷ್ಯದಿಂದಾಗಿ ಅವರು ಓಡಿಹೋದರು? ಎಂದು ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು” ಎಂದು ಬಿಜೆಪಿ ನಾಯಕ ಪೋಸ್ಟ್ ಮಾಡಿದ್ದಾರೆ.