Viral Video: ಬಿಳಿ ಸಾಕ್ಸ್ ಧರಿಸಿ ದುಬೈನ ಬೀದಿಯಲ್ಲಿ ಓಡಾಡಿದ ಯುವಕ; ಕೊನೆಗೆ ಆಗಿದ್ದೇನು?
ಯುವಕನೊಬ್ಬ ದುಬೈ ನಗರ ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ವಿಡಿಯೊ ಮೂಲಕ ತೋರಿಸಿದ್ದಾನೆ. ಆತ ಶೂ ಧರಿಸದೆ ಬರೀ ಬಿಳಿ ಸಾಕ್ಸ್ ಧರಿಸಿ ದುಬೈನ ಬೀದಿಯಲ್ಲಿ ಸುತ್ತಾಡಿದ್ದಾನೆ. ನಂತರ ಅದನ್ನು ನೋಡಿದಾಗ ಅದರಲ್ಲಿ ಒಂದು ಒಂದು ಕಲೆ ಇರಲಿಲ್ಲ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.


ದುಬೈ: ಮನೆಯೊಳಗೆ ಓಡಾಡಿದರೆ ಸಾಕು ಕಾಲಿಗೆ ಧೂಳು ಅಂಟಿಕೊಂಡು ಗಲೀಜಾಗುತ್ತದೆ. ಅಂತಹುದರಲ್ಲಿ ರಸ್ತೆಯಲ್ಲಿ ಓಡಾಡಿದರೆ ಕಾಲಿಗೆ ಧೂಳು ಅಂಟಿಕೊಳ್ಳದೇ ಇರುತ್ತದೆಯೇ? ಆದರೆ ಇಲ್ಲೊಬ್ಬ ಯುವಕ ಶೂ ಧರಿಸದೆ ಬರೀ ಬಿಳಿ ಸಾಕ್ಸ್ ಧರಿಸಿ ದುಬೈನ ಬೀದಿಯಲ್ಲಿ ಸುತ್ತಾಡಿದ್ದಾನೆ. ಆದರೆ ದುಬೈನ ಬೀದಿಗಳು ಎಷ್ಟು ಸ್ವಚ್ಛವಾಗಿದೆ ಎಂದರೆ ಆತನ ಬಿಳಿ ಸಾಕ್ಸ್‌ಗೆ ಸ್ವಲ್ಪವೂ ಧೂಳು ಅಂಟಿಕೊಳ್ಳಲಿಲ್ಲ. ಆ ಮೂಲಕ ಆತ ದುಬೈ ಬೀದಿಗಳು ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ಸಾಕ್ಷಿ ಸಮೇತ ನಿರೂಪಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಟಿಕ್‌ಟಾಕರ್ 'ಜಿಂಬೋ ಎಚ್' ಸ್ವಚ್ಛವಾದ ಬಿಳಿ ಸಾಕ್ಸ್ ಧರಿಸಿಕೊಂಡು ಶೂ ಧರಿಸದೆ ದುಬೈನ ಬೀದಿಗಳು, ಮಾಲ್‍ಗಳು ಮತ್ತು ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದಾನೆ. ಸ್ವಲ್ಪ ಸಮಯದವರೆಗೆ ನಗರದ ಸುತ್ತಲೂ ನಡೆದ ನಂತರ ಆತ ತನ್ನ ಸಾಕ್ಸ್‌ಗಳನ್ನು ತೆಗೆದು ವೀಕ್ಷಕರಿಗೆ ತೋರಿಸಿದ್ದಾನೆ. ಆದರೆ ಆಶ್ಚರ್ಯವೆಂದರೆ ಆ ಸಾಕ್ಸ್‌ಗಳಲ್ಲಿ ಒಂದೇ ಒಂದು ಕಲೆ ಕೂಡ ಇಲ್ಲ. ಅದು ಮೊದಲು ಎಷ್ಟು ಸ್ವಚ್ಛವಾಗಿತ್ತೋ ದುಬೈನ ಬೀದಿಯೆಲ್ಲಾ ತಿರುಗಾಡಿದ ಮೇಲೆ ಕೂಡ ಅಷ್ಟೇ ಸ್ವಚ್ಛವಾಗಿದೆ.
ದುಬೈನ ಬೀದಿಯೆಲ್ಲಾ ಓಡಾಡಿದ ವ್ಯಕ್ತಿ ವಿಡಿಯೊ ಇಲ್ಲಿ ನೋಡಿ!
ಈ ವಿಡಿಯೊ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದು 30,000 ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದೆ. ಇದಕ್ಕೆ ಅನೇಕ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಇದನ್ನು ಒಪ್ಪಿದ್ದಾರೆ.ಇನ್ನು ಕೆಲವರು ಏನೋ ವಿಚಿತ್ರವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
"ನಾನು ಶೂಗಳಿಲ್ಲದೆ ಇಡೀ ದುಬೈ ಮಾಲ್‍ನಲ್ಲಿ ಒಮ್ಮೆ ನಡೆದಿದ್ದೇನೆ. ಆದರೆ ಅದು ನನ್ನ ಮನೆಗಿಂತ ಹೆಚ್ಚು ಸ್ವಚ್ಛವಾಗಿರುವುದನ್ನು ನಾನು ನೋಡಿದ್ದೇನೆ” ಎಂದು ಒಬ್ಬರು ಹೇಳಿದ್ದಾರೆ. "ಆತ ಬಳಸಿದ್ದು ಒಂದೇ ಸಾಕ್ಸ್ ಎಂಬುದು ಸ್ಪಷ್ಟವಾಗಿಲ್ಲ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮೋಜಿಗೂ ಒಂದು ಮಿತಿ ಬೇಡ್ವಾ? ರೈಲಿನಲ್ಲಿ ಇದೆಂಥಾ ಸರ್ಕಸ್? ವಿಡಿಯೊ ವೈರಲ್
ಜಪಾನಿನ ಬೀದಿಯಲ್ಲಿ ಬಿಳಿ ಸಾಕ್ಸ್ ಧರಿಸಿ ಓಡಾಡಿದ ಯುವತಿ!
ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ವಿಡಿಯೊಂದು ವೈರಲ್ ಆಗಿತ್ತು. ಇದರಲ್ಲಿ ಯುವತಿಯೊಬ್ಬಳು ಜಪಾನಿನ ಬೀದಿ ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ತೋರಿಸಿದ್ದಾಳೆ. ಟ್ರಾವೆಲ್ ಮತ್ತು ಬ್ಯೂಟಿ ಇನ್ಫ್ಲುಯೆನ್ಸರ್ ಸಿಮ್ರಾನ್ ಬಲಾರ್ ಜೈನ್ ಜಪಾನ್ ಬೀದಿಗಳಲ್ಲಿ ಬರಿ ಸಾಕ್ಸ್ ಧರಿಸಿ ನಡೆಯುವುದರ ಮೂಲಕ ಜಪಾನ್ ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ವಿಡಿಯೊ ಮಾಡಿ ತೋರಿಸಿದ್ದಾಳೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಡಿಯೊದಲ್ಲಿ ಮೊದಲಿಗೆ ಸಿಮ್ರಾನ್ ಬಟ್ಟೆ ಅಂಗಡಿಗೆ ಬಂದು ಅಲ್ಲಿ ಬಿಳಿ ಸಾಕ್ಸ್‌ಗಳನ್ನು ಖರೀದಿಸಿದ್ದಾಳೆ. ನಂತರ ಅದನ್ನು ಕಾಲಿಗೆ ಧರಿಸಿಕೊಂಡು ನಂತರ ತನ್ನ ಬೂಟುಗಳನ್ನು ಕೈಯಲ್ಲಿ ಹಿಡಿದು ಜಪಾನಿನ ಬೀದಿ ಬೀದಿ ಸುತ್ತಿದ್ದಾಳೆ. ಎಲ್ಲಾ ಕಡೆ ಸುತ್ತಾಡಿದ ನಂತರ ಅವಳು ಬಂದು ತನ್ನ ಸಾಕ್ಸ್ ತೋರಿಸಿದಾಗ ಅದರಲ್ಲಿ ಒಂದೇ ಒಂದು ಕಲೆ ಇಲ್ಲ. ಅವು ಅಂಗಡಿಯಿಂದ ತಂದಾಗ ಎಷ್ಟು ಸ್ವಚ್ಛವಾಗಿತ್ತೋ ಅಷ್ಟೇ ಸ್ವಚ್ಛವಾಗಿತ್ತಂತೆ.