ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ʻಪ್ರಧಾನಿ ಬರೋ ರಸ್ತೆ ಇದು....ʼ ನಡುರೋಡ್‌ನಲ್ಲಿ ನಿರ್ದಯವಾಗಿ ಬಾಲಕನಿಗೆ ಥಳಿಸಿದ ಪೊಲೀಸರು- ಇಲ್ಲಿದೆ ವಿಡಿಯೊ

ಗುಜರಾತ್‍ನ ಸೂರತ್‍ಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯುತ್ತಿರುವ ಪೊಲೀಸ್ ವಿವಿಐಪಿ ರಿಹರ್ಸಲ್ ವೇಳೆ ಬಾಲಕನೊಬ್ಬ ತಿಳಿಯದೇ ರಸ್ತೆಗೆ ಸೈಕಲ್ ತೆಗೆದುಕೊಂಡು ಬಂದಿದ್ದಕ್ಕೆ ಪೊಲೀಸ್ ಅಧಿಕಾರಿಯೊಬ್ಬ ಆತನಿಗೆ ಕ್ರೂರವಾಗಿ ಥಳಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸೂರತ್‍ಗೆ ಪ್ರಧಾನಿ ಮೋದಿ ಭೇಟಿ; ರಸ್ತೆಗೆ ಬಂದ ಬಾಲಕನಿಗೆ ಥಳಿಸಿದ ಪೊಲೀಸ್!

Profile pavithra Mar 8, 2025 3:38 PM

ಗಾಂಧಿನಗರ: ಸೂರತ್‍ಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ರಿಹರ್ಸಲ್ ನಡೆಸಲಾಗಿದೆ. ಆದರೆ ಈ ವಿವಿಐಪಿ ರಿಹರ್ಸಲ್ ಸಮಯದಲ್ಲಿ ಬಾಲಕನೊಬ್ಬ ತಿಳಿಯದೆ ಸೈಕಲ್‍ನಲ್ಲಿ ರಸ್ತೆಗೆ ಬಂದಿದ್ದಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಆತ ಬಾಲಕ ಎಂಬುದನ್ನು ಲೆಕ್ಕಿಸದೆ ಮನಬಂದಂತೆ ಥಳಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ನೆಟ್ಟಿಗರು ಅಧಿಕಾರಿಯ ವಿರುದ್ಧ ಕಿಡಿಕಾರಿದ್ದಾರೆ. ಪೊಲೀಸ್ ಪೇದೆಯನ್ನು ಪಿಎಸ್ಐ ಬಿ.ಎ.ಗಾಧ್ವಿ ಎಂದು ಗುರುತಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಮತ್ತು ಪೊಲೀಸ್ ಪ್ರೋಟೋಕಾಲ್‍ಗಾಗಿ ಪೊಲೀಸ್ ಅಧಿಕಾರಿ ಸೂರತ್‍ನಲ್ಲಿ ಕರ್ತವ್ಯದಲ್ಲಿದ್ದನು ಎಂಬುದಾಗಿ ತಿಳಿದುಬಂದಿದೆ. ಈ ಘಟನೆಯ ಬಗ್ಗೆ ಸ್ಥಳೀಯ ಸುದ್ದಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿ ನಂತರ ಗಾಧ್ವಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ಅವನನ್ನು ಕಂಟ್ರೋಲ್ ರಿಸರ್ವ್‍ ಪ್ರದೇಶದಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದೆ.

ವೈರಲ್ ಆದ ವಿಡಿಯೊದಲ್ಲಿ ಅಪರಿಚಿತ ಬಾಲಕನೊಬ್ಬ ತನ್ನ ಸೈಕಲ್ ತಳ್ಳುತ್ತಾ ರಸ್ತೆಯಲ್ಲಿ ಹೋಗಿದ್ದಾನೆ.ಪೊಲೀಸ್ ಅಧಿಕಾರಿ ಬಾಲಕ ಅಲ್ಲಿ ಸೈಕ್ಲಿಂಗ್ ಮಾಡುವುದನ್ನು ನೋಡಿ ಕೋಪಗೊಂಡು ಬಾಲಕನ ಕೂದಲನ್ನು ಹಿಡಿದು ಎಳೆದಾಡಿ ತನ್ನ ಕೈ ಮುಷ್ಟಿಕಟ್ಟಿ ಆತನ ಮುಖಕ್ಕೆ ಹೊಡೆದಿದ್ದಾನೆ.ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡುವ ಮುನ್ನ, ಸುಗಮ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಭದ್ರತಾ ಕ್ರಮಗಳನ್ನು ನಡೆಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಆ ಪೊಲೀಸ್‌ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬಾಲಕನಿಗೆ ಪೊಲೀಸ್‌ ಥಳಿಸಿದ ವಿಡಿಯೊ ಇಲ್ಲಿದೆ:



"ಈ ಪೋಲೀಸ್‌ ಅಧಿಕಾರಿಯನ್ನು ಕೆಲಸದಿಂದ ಅಮಾನತುಗೊಳಿಸಿ " ಎಂದು ಒಬ್ಬರು ಬರೆದಿದ್ದಾರೆ. "ಈ ಪೊಲೀಸ್ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಬೇಕು. ರಸ್ತೆಗಳು ವಿವಿಐಪಿಗಳ ಆಸ್ತಿಯಲ್ಲ. ಈ ವಿಐಪಿ ಸಂಸ್ಕೃತಿಯು ಭಾರತವನ್ನು ಸರಿಪಡಿಸಲಾಗದಷ್ಟು ಹಾಳುಮಾಡುತ್ತಿದೆ" ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಪೊಲೀಸ್ ಅಧಿಕಾರಿಯ ವಿರುದ್ಧ ಟ್ರಕ್ ಚಾಲಕನಿಂದ ಸುಲಿಗೆ ಆರೋಪ; ವಿಡಿಯೊ ವೈರಲ್

ಇತ್ತೀಚೆಗೆ ಟ್ರಕ್ ಡ್ರೈವರ್ ಪೊಲೀಸ್ ಅಧಿಕಾರಿಯ ವಿರುದ್ಧ ಸುಲಿಗೆ ಆರೋಪ ಮಾಡಿದ್ದಾನೆ. ವೈರಲ್‌ ಆದ ವಿಡಿಯೊದಲ್ಲಿ ಟೋಲ್ ತೆರಿಗೆಯನ್ನು ಮೀರಿ ಹೆಚ್ಚುವರಿ ಮೊತ್ತವನ್ನು ಪೊಲೀಸರು ಬೇಡಿಕೆ ಇಟ್ಟಿದ್ದಾರೆ ಎಂದು ಡ್ರೈವರ್ ಆರೋಪಿಸುವುದು ಸೆರೆಯಾಗಿದೆ. ಇದು ಈ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ -2ರ ಡುಮ್ರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಟೋಲ್ ತೆರಿಗೆಯ ಜತೆಗೆ ಪೊಲೀಸರು ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸೋನು ಆಕ್ಷೇಪ ವ್ಯಕ್ತಪಡಿಸಿದಾಗ, ಪೊಲೀಸ್ ಪೇದೆ ಕಪಾಳಮೋಕ್ಷ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಡ್ರೈವರ್‌ ತನ್ನ ಮೊಬೈಲ್ ಫೋನ್‍ನಲ್ಲಿ ಈ ಮಾತುಕತೆಯನ್ನು ರೆಕಾರ್ಡ್ ಮಾಡಲು ಶುರುಮಾಡಿದ್ದಕ್ಕೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ ಎನ್ನಲಾಗಿದೆ.