ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA K H PuttaswamyGowdru: ಮುಸ್ಲಿಂ ಬಾಂಧವರು ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡರು

ರಂಜಾನ್ ಹಬ್ಬಕ್ಕೂ ಒಂದು ತಿಂಗಳ ಮುಂಚೆಯೇ ಮುಸ್ಲಿಂ ಬಾಂಧವ ರೆಲ್ಲರೂ ಉಪವಾಸದ ವ್ರತ ಆಚರಿಸಿ ಪ್ರತಿನಿತ್ಯವು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ತಮ್ಮದೇ ಆದ ಆಚರಣೆಯಲ್ಲಿ ಸಂತೋಷದಿಂದ ಭಾಗಿಯಾಗಿ ಈ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುವುದು ಸಂತಸದ ವಿಷಯ ಮುಂದೆಯೂ ನಾನು ಮುಸ್ಲಿಂ ಸಮುದಾಯದ ಪರವಾಗಿ ಸದಾ ಇರುತ್ತೇನೆ

ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಪುಟ್ಟಸ್ವಾಮಿ ಗೌಡ ಭಾಗಿ

Profile Ashok Nayak Mar 31, 2025 9:49 PM

ಗೌರಿಬಿದನೂರು: ನಗರದ. ಉಡಮಲೋಡು ಬಳಿ ಇರುವ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆ ಯಲ್ಲಿ ಭಾಗವಹಿಸಿದ *ಜನಪ್ರಿಯ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡರು* ರಂಜಾನ್ ಹಬ್ಬವು ಸಮಾಜದಲ್ಲಿ ಶಾಂತಿ,ಏಕತೆ,ಸಮಾನತೆ,ಸೋದರತೆ,ಭಾವ್ಯಕ್ಯತೆಯನ್ನು ಬೆಳಸಿ ಸಮಸ್ತ ದೇಶಬಾಂಧ ವರೆಲ್ಲರೂ ಒಂದೇ ನಾವೆಲ್ಲರೂ ಭಾರತೀಯರು ಧರ್ಮಗಳು ಬೇರೆ ಬೇರೆಯಾದರೂ ಭಾರತ ಮಾತೆಯ ಋಣ ತೀರಿಸಲು ಎಲ್ಲಾ ಧರ್ಮದ ಪ್ರಜೆಗಳು ಒಟ್ಟುಗೂಡಿ ಜೀವನ ಮಾಡಬೇಕೆಂಬ ಸಂದೇಶವನ್ನು ಸಾರುತ್ತದೆ‌.

ಇದನ್ನೂ ಓದಿ: Chikkaballapur News: ಗ್ರಾಮದೇವತೆಗೆ ಅರ್ಧ ಕೆಜಿ ಬೆಳ್ಳಿ ಗಿಫ್ಟ್ ಕೊಟ್ಟ ಮಂಗಳಮುಖಿಯರು

ರಂಜಾನ್ ಹಬ್ಬಕ್ಕೂ ಒಂದು ತಿಂಗಳ ಮುಂಚೆಯೇ ಮುಸ್ಲಿಂ ಬಾಂಧವ ರೆಲ್ಲರೂ ಉಪವಾಸದ ವ್ರತ ಆಚರಿಸಿ ಪ್ರತಿನಿತ್ಯವು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ತಮ್ಮದೇ ಆದ ಆಚರಣೆಯಲ್ಲಿ ಸಂತೋಷದಿಂದ ಭಾಗಿಯಾಗಿ ಈ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುವುದು ಸಂತಸದ ವಿಷಯ ಮುಂದೆಯೂ ನಾನು ಮುಸ್ಲಿಂ ಸಮುದಾಯದ ಪರವಾಗಿ ಸದಾ ಇರುತ್ತೇನೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಧರ್ಮ ಗುರುಗಳು,ಪ್ರಮುಖ ಮುಖಂಡರುಗಳು ಕೆ.ಹೆಚ್.ಪಿ.ಬಣದ ಪ್ರಮುಖ ಮುಖಂಡರುಗಳು,ಚುನಾಯಿತ ಜನ ಪ್ರತಿನಿಧಿಗಳು, ಕಾರ್ಯಕರ್ತರುಗಳು, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ  ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.

ಸಾಮೂಹಿಕ ಪ್ರರ್ಥನೆಯಲ್ಲಿ ದರ್ಮ ಗುರುಗಳಾದ ಮೌಲಾನಾ ಅಶ್ರಫ್ ಅಲೀಮೌಲಾನಾ ಅಬ್ದುಲ್ ಸುಭಾನ್.ಪಠಾಣ್ ಸೈಫುಲ್ಲಾ, ಕಲೀಂವುಲ್ಲಾ,ಅಲ್ತಾಫ್,ಅಬೂಬೇಕರ್,ನಗರ ಸಭೆ ಉಪಾಧ್ಯಕ್ಷ ಫರೀದ್ ಮುಂತಾದವರು ಭಾಗವಹಿಸಿದರು.