ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Eid Ul Fitr: ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಈದ್‌ ಉಲ್‌ ಫಿತ್ರ್‌ ಸಡಗರ ಸಂಭ್ರಮದಿಂದ ಆಚರಣೆ

ಒಂದು ತಿಂಗಳ ಕಾಲ ರಮ್ಜಾನ್ ಉಪವಾಸ ಆಚರಿಸಿದ ಮುಸ್ಲಿಮರು,ಈ ಅವಧಿಯಲ್ಲಿ ಮಾಡಿರುವ ವಿಶೇಷ ನಮಾಝ್,ಕುರ್‌ಆನ್ ಪಾರಾಯಣ,ದಾನ ಧರ್ಮ, ಸೇವಾ ಕಾರ್ಯಗಳ ಬಗ್ಗೆ ಈ ಸಂದರ್ಭದಲ್ಲಿ ಆತ್ಮಾವಲೋಕನ ನಡೆಸಬೇಕು.ಇದು ಮುಂದಿನ ಜೀವನ ಸುಧಾರಣೆಗೆ ಮಾರ್ಗಸೂಚಿಯಾಗಬೇಕು ಎಂದು ಹೇಳಿದರು

ಬಾಗೇಪಲ್ಲಿ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

Profile Ashok Nayak Mar 31, 2025 9:40 PM

ಚಿಕ್ಕಬಳ್ಳಾಪುರ: ಇಲ್ಲಿನ ಮುಸ್ಲಿಂ ಸಮುದಾಯದವರು ಪವಿತ್ರ ಹಬ್ಬವಾದ ಈದ್‌ ಉಲ್‌ ಫಿತ್ರ್‌ ಅನ್ನು ಸಡಗರ,ಸಂಭ್ರಮದಿಂದ ಆಚರಿಸಿದರು. ಮುಂಜಾನೆ ನಮಾಜ್‌ ನಂತರ ಹೊಸ ಉಡುಪು ಗಳನ್ನು ಧರಿಸಿ, ಮಸೀದಿಗಳಿಗೆ ತೆರಳಿ,ಅಲ್ಲಿಂದ ಸಂಘಟಿತರಾಗಿ ಪವಿತ್ರ ಈದ್ಗಾ ಮೈದಾನದಲ್ಲಿ ಸೇರಿ ಮೌಲ್ವಿಗಳ ಆದೇಶದಂತೆ ಸಾಮೂಹಿಕ ಪ್ರಾರ್ಥನೆ ನಡೆಸಿದರು.ಮೌಲ್ವಿ ಅವರು ಹಬ್ಬದ ಆಚರಣೆ ಮತ್ತು ಉದ್ದೇಶದ ಕುರಿತು ಪ್ರವಚನ ನೀಡಿದರು. ನಂತರ ಪರಸ್ಪರರು ಆಲಿಂಗನದ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಮಕ್ಕಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದರು. ಮಹಿಳೆಯರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.

ಚಿಂತಾಮಣಿ ನಗರದ ದೊಡ್ಡಪೇಟೆಯಲ್ಲಿರುವ ಜಾಮಿಯಾ ಮಸೀದಿಯಿಂದ ಎಲ್ಲಾ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಮೆರವಣಿಗೆ ಮುಖಾಂತರ ಬಾಗೇಪಲ್ಲಿ ವೃತ್ತದಲ್ಲಿರುವ ಈದ್ಗಾ ಮೈದಾ ನಕ್ಕೆ ಬಂದು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.

ಇದನ್ನೂ ಓದಿ: Chief Minister's medal: 219 ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಘೋಷಣೆ

ನಂತರ ಧರ್ಮ ಗುರುಗಳಾದ ಹಜರತ್ ಮೌಲಾನ ಸೈಯದ್ ರಫೀಕ್ ಅಹಮದ್ ರಜ್ವಿ ರವರು ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಭಾಷಣ ಮಾಡಿದವರು ಒಂದು ತಿಂಗಳ ಕಾಲ ರಮ್ಜಾನ್ ಉಪವಾಸ ಆಚರಿಸಿದ ಮುಸ್ಲಿಮರು,ಈ ಅವಧಿಯಲ್ಲಿ ಮಾಡಿರುವ ವಿಶೇಷ ನಮಾಝ್,ಕುರ್‌ಆನ್ ಪಾರಾಯಣ,ದಾನ ಧರ್ಮ, ಸೇವಾ ಕಾರ್ಯಗಳ ಬಗ್ಗೆ ಈ ಸಂದರ್ಭದಲ್ಲಿ ಆತ್ಮಾವಲೋಕನ ನಡೆಸಬೇಕು.ಇದು ಮುಂದಿನ ಜೀವನ ಸುಧಾರಣೆಗೆ ಮಾರ್ಗಸೂಚಿಯಾಗಬೇಕು ಎಂದು ಹೇಳಿದರು.

ಇನ್ನು ಚಿಂತಾಮಣಿ ನಗರದ ಕೋಲಾರ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲೂ ಸಹ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಈದ್ ನಮಾಜ್ ನೆರವೇರಿಸಿದರು. ಹಬ್ಬದ ಪ್ರಯುಕ್ತ ಮುಂಜಾ ಗ್ರತಾ ಕ್ರಮವಾಗಿ ಡಿವೈಎಸ್ಪಿ ಮುರಳಿಧರ್ ಅವರ ನೇತೃತ್ವದಲ್ಲಿ ಪೊಲೀಸ್ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು.

ಇನ್ನೂ ಈದ್ಗಾ ಮೈದಾನಕ್ಕೆ ಅಡಿಷನಲ್ ಎಸ್ ಪಿ ರಜಾ ಇಮಾಮ್ ಖಾಸಿಂ, ಭೇಟಿ ನೀಡಿದ್ದು ಜಾಮಿಯಾ ಮಸೀದಿ ವತಿಯಿಂದ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈದ್ಗಾ ಮೈದಾನಕ್ಕೆ ಬಂದ ಮುಸ್ಲಿಂ ಬಾಂಧವರಿಗೆ ಜಾಮಿಯಾ ಮಸೀದಿ ಕಮಿಟಿ ವತಿಯಿಂದ ನಮಾಜ್ ನೆರವೇರಿಸಲು ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ಜಾಮಿಯಾ ಮಸೀ

iದಿ ಅಧ್ಯಕ್ಷರು ಕಾರ್ಯದರ್ಶಿ ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರುಗಳು ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.