Chikkaballapur News: ಗ್ರಾಮದೇವತೆಗೆ ಅರ್ಧ ಕೆಜಿ ಬೆಳ್ಳಿ ಗಿಫ್ಟ್ ಕೊಟ್ಟ ಮಂಗಳಮುಖಿಯರು
ಮಂಗಳಮುಖಿಯರ ಮೇಲಿನ ಕೆಟ್ಟ ಅಭಿಪ್ರಾಯ ಹೋಗಲು ನಿರ್ಧಾರ ಮಾಡಿ ಮಂಗಳಮುಖಿ ಯರ ತಂಡದ ಮುಖ್ಯಸ್ಥೆ ಸಲ್ಮಾ ರವರ ನೇತೃತ್ವದಲ್ಲಿ ಮಂಗಳ ಮುಖಿ ಯಾರು ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮ ದೇವತೆ ಗಂಗಮ್ಮನವರಿಗೆ ವಿಶೇಷ ಪೂಜೆಗಳನ್ನು ಮಾಡಿಸಿ ಅರ್ಧ ಕೆಜಿ ಎಷ್ಟು ಬೆಳ್ಳಿಯ ಬಿಸ್ಕತ್ ದೇವತೆಗೆ ಮುಖವಾಡ ಮಾಡಿಸಲು ನೀಡಿದ್ದಾರೆ.


ಚಿಂತಾಮಣಿ: ಯುಗಾದಿ ಹಬ್ಬದ ಅಂಗವಾಗಿ ಚಿಂತಾಮಣಿ ನಗರದ ನಾರಸಿಂಹ ಪೇಟೆಯಲ್ಲಿರುವ ಗ್ರಾಮ ದೇವತೆಗೆ ಮಂಗಳಮುಖಿಯರ ತಂಡ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದ ನಂತರ ಸುಮಾರು ಐವತ್ತು ಮೂರು ಸಾವಿರ ಮೌಲ್ಯದ ಬೆಳ್ಳಿ ಬಿಸ್ಕತ್ ಕೊಡಗೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ. ಮಂಗಳಮುಖಿಯರ ಮೇಲಿನ ಕೆಟ್ಟ ಅಭಿಪ್ರಾಯ ಹೋಗಲು ನಿರ್ಧಾರ ಮಾಡಿ ಮಂಗಳಮುಖಿ ಯರ ತಂಡದ ಮುಖ್ಯಸ್ಥೆ ಸಲ್ಮಾ ರವರ ನೇತೃತ್ವದಲ್ಲಿ ಮಂಗಳ ಮುಖಿ ಯಾರು ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮ ದೇವತೆ ಗಂಗಮ್ಮನವರಿಗೆ ವಿಶೇಷ ಪೂಜೆಗಳನ್ನು ಮಾಡಿಸಿ ಅರ್ಧ ಕೆಜಿ ಎಷ್ಟು ಬೆಳ್ಳಿಯ ಬಿಸ್ಕತ್ ದೇವತೆಗೆ ಮುಖವಾಡ ಮಾಡಿಸಲು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಂಗಳಮುಖಿಯರಾದ ಸಲ್ಮಾ, ಪ್ರಿಯಾ, ಸಂಗೀತ, ಪೂಣಂ, ಬಿಂದು, ಗಂಗಾ, ಮುಸ್ಕಾನ್,ಸ್ವೀಟಿ,ಸೇರಿದಂತೆ ಮತ್ತಿತರರು ಇದ್ದರು