ಬಂಧಿತ ಆರೋಪಿಗಳಿಂದ 60 ಸಾವಿರ ಮೌಲ್ಯದ ಗಾಂಜಾ ವಶ
ಅಕ್ರಮ ಗಾಂಜಾ ಮಾರಾಟ ಮಾಡಲು ಬಂದ್ ಇಬ್ಬರು ಆರೋಪಿಗಳನ್ನು ಬಂಧಿಸು ವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಿಸ್ಸಾರ್ ಅಹಮದ್ ಬಿನ್ ನಾಸೀರ್ ಅಹಮದ್.(33 ವರ್ಷ)ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ಫಯಾಜ್ ಪಾಷ ಬಿನ್ ಫಾರೂಕ್ ಪಾಷ,(32 ವರ್ಷ) ವಾರ್ಡ್ ನಂ13. ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು,ಅರ್ಬಾಜ್ ಖಾನ್ ಬಿನ್ ವಜೀರ್ ಖಾನ್ ಎಂದು ಗುರುತಿಸಲಾಗಿದೆ.


ಚಿಂತಾಮಣಿ: ಅಕ್ರಮ ಗಾಂಜಾ ಮಾರಾಟ ಮಾಡಲು ಬಂದ್ ಇಬ್ಬರು ಆರೋಪಿಗಳನ್ನು ಬಂಧಿಸು ವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಿಸ್ಸಾರ್ ಅಹಮದ್ ಬಿನ್ ನಾಸೀರ್ ಅಹಮದ್.(33 ವರ್ಷ)ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ಫಯಾಜ್ ಪಾಷ ಬಿನ್ ಫಾರೂಕ್ ಪಾಷ,(32 ವರ್ಷ) ವಾರ್ಡ್ ನಂ13. ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು,ಅರ್ಬಾಜ್ ಖಾನ್ ಬಿನ್ ವಜೀರ್ ಖಾನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Chikkaballapur News: ಯುಗಾದಿ ಹೊಸ್ತಿಲಲ್ಲ ಮತ್ತೆ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮಕ್ಕೆ ಪ್ರದೀಪ್ ಚಾಲನೆ
ಚಿಕ್ಕಬಳ್ಳಾಪುರ ಜಿಲ್ಲಾ ಎಸ್ ಪಿ ಕುಶಾಲ್ ಚೌಕ್ಸೆ,ಅಪಾರ ಜಿಲ್ಲಾ ರಕ್ಷಣಾಧಿಕಾರಿ ರಾಜಾ ಇಮಾಮ್ ಖಾಸಿಮ್,ಮಾರ್ಗದರ್ಶನದಲ್ಲಿ ಚಿಂತಾಮಣಿ ಉಪವಿಭಾಗರವರ ಮುರಳೀಧರ ಪಿ.ಡಿ.ವೈ.ಎಸ್.ಪಿ ನೇತೃತ್ವದಲ್ಲಿ,ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಠಾಣೆಯ ಸಿಬ್ಬಂದಿಯವ ರೊಂದಿಗೆ ಕೈವಾರದಲ್ಲಿ ಗಸ್ತು ಮಾಡಿಮಾಡಿಕೊಂಡು ಕೈವಾರ-ಗವಿ ಕಡೆಗೆ ಹೋಗುವ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಮಾತೇಶ್ವರ ಇಂಡಿಯನ್ ಗ್ಯಾಸ್ ಗೋಡೌನ್ ಹಿಂಭಾಗದಲ್ಲಿರುವ ಸ್ಮಶಾನದ ಬಳಿ ಯಾರೋ ಇಬ್ಬರು ಒಂದು ಕವರ್ ನಲ್ಲಿ ಅಕ್ರಮ ಗಾಂಜಾವನ್ನು ಇಟ್ಟುಕೊಂಡಿದ್ದು ಪೊಲೀಸರು ಇವರನ್ನು ಸೆರೆ ಹಿಡಿದು ಅವರಿಂದ 1 ಕೆ.ಜಿ. 80 ಗ್ರಾಂ ತೂಕವಿದ್ದು ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.