ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokayukta Raid: ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್‌ಸ್ಪಕ್ಟರ್‌ ಲೋಕಾಯುಕ್ತ ದಾಳಿಗೆ ಹೆದರಿ ಪರಾರಿ

ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡ ಪತ್ನಿ ಅನುಷಾ ಎಂಬವರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪಿಐ​ ಕುಮಾರ್​ನಿಂದ ಕಿರುಕುಳ ಆರೋಪ ಕೇಳಿಬಂದಿದೆ. ಸುಳ್ಳು ಕೇಸ್ ದಾಖಲಿಸಿ ಚನ್ನೇಗೌಡಗೆ ಸೇರಿದ 4 ಕೋಟಿ ರೂ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹಾಕಿದ್ದು, ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಪಿಐ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಮಾಡಲಾಗಿದೆ.

ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್‌ಸ್ಪಕ್ಟರ್‌ ಲೋಕಾಯುಕ್ತ ದಾಳಿಗೆ ಪರಾರಿ

ಪಿಐ ಕುಮಾರ್

ಹರೀಶ್‌ ಕೇರ ಹರೀಶ್‌ ಕೇರ Apr 2, 2025 11:44 AM

ಬೆಂಗಳೂರು: ಸಿಎಂ ಚಿನ್ನದ ಪದಕಕ್ಕೆ (CM gold medal) ಆಯ್ಕೆಯಾದ ಪೊಲೀಸ್‌ ಇನ್ಸ್​​ಪೆಕ್ಟರ್​ಗೆ (police inspector) ರಿಯಾಲ್ಟಿ ಡೀಲ್‌ ಭ್ರಷ್ಟಾಚಾರ ಪ್ರಕರಣದಲ್ಲಿ (Corruption) ಲೋಕಾಯುಕ್ತ (Lokayukta) ಶಾಕ್​ ನೀಡಿದ್ದು ಬಂಧನ ಭೀತಿ ಹಿನ್ನೆಲೆಯಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ. ಸುಳ್ಳು ಕೇಸ್ ದಾಖಲಿಸಿ 4 ಕೋಟಿ ರೂ. ಮೌಲ್ಯದ ಮನೆ ಮಾರಾಟಕ್ಕೆ ನಾಗರಬಾವಿಯ (Naagarabhaavi) ಖಾಸಗಿ ಹೋಟೆಲ್​ನಲ್ಲಿ ಡೀಲ್ ನಡೆದಿತ್ತು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta raid) ಮಾಡಿದ್ದಾರೆ. ವಿಚಾರ ತಿಳಿದು ಮನೆಯಲ್ಲೇ ಪೊಲೀಸ್ ಜೀಪ್ ಬಿಟ್ಟು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್​ ಕುಮಾರ್ ಪರಾರಿ ಆಗಿದ್ದಾರೆ. ನಿನ್ನೆ ಸಂಜೆ 5 ಗಂಟೆಯಿಂದ ಮುಂಜಾನೆ 3 ಗಂಟೆವರೆಗೆ ಕಾರ್ಯಾಚರಣೆ ಮಾಡಲಾಗಿದೆ.

ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡ ಪತ್ನಿ ಅನುಷಾ ಎಂಬವರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪಿಐ​ ಕುಮಾರ್​ನಿಂದ ಕಿರುಕುಳ ಆರೋಪ ಕೇಳಿಬಂದಿದೆ. ಸುಳ್ಳು ಕೇಸ್ ದಾಖಲಿಸಿ ಚನ್ನೇಗೌಡಗೆ ಸೇರಿದ 4 ಕೋಟಿ ರೂ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹಾಕಿದ್ದು, ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಪಿಐ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಮಾಡಲಾಗಿದೆ.

ಈ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕುತ್ತೇನೆ. ಮನೆ ಬರೆದುಕೊಡಿ ಎಂದು ಇನ್ಸ್​ಪೆಕ್ಟರ್​ ಕುಮಾರ್​ ಕಿರುಕುಳ ನೀಡಿದ್ದು, ಈ ಹಿಂದೆ ಚನ್ನೇಗೌಡ ಮನೆಗೆ ಕೆಲ ಪುಂಡರನ್ನು ನುಗ್ಗಿಸಿ ದಾಂಧಲೆ ಮಾಡಿಸಿದ್ದಾರೆ. ಈ ವೇಳೆ ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡ ವಿಡಿಯೋ ಮಾಡಿಕೊಂಡಿದ್ದರು. ಚನ್ನೇಗೌಡರನ್ನು ಠಾಣೆಗೆ ಕರೆಸಿ ಒತ್ತಾಯಪೂರ್ವಕವಾಗಿ ಅಗ್ರಿಮೆಂಟ್​​ಗೆ ಸಹಿ ಮಾಡಿಸಿ, ಆನ್​ಲೈನ್​ ಮೂಲಕ 4 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.​

ಸೋದರ ಸಂಬಂಧಿ ಗವಿಗೌಡ, ದಿವ್ಯಾ ಹೆಸರಿಗೆ ಮನೆ ನೋಂದಣಿಗೆ ಒತ್ತಡ ಹೇರಿದ್ದು, ನಿನ್ನೆ ಸಂಜೆ ಅಗ್ರಿಮೆಂಟ್​ಗೆ ಸಹಿ ಹಾಕಿಸಲು ನಾಗರಬಾವಿಯ ಖಾಸಗಿ ಹೋಟೆಲ್​ಗೆ ಚನ್ನೇಗೌಡ ಪತ್ನಿ ಅನುಷಾರನ್ನು ಕರೆಸಿದ್ದರು. ಈ ವೇಳೆ ಲೋಕಾ ದಾಳಿ ವಿಚಾರ ತಿಳಿಯುತ್ತಿದ್ದಂತೆ ಕುಮಾರ್ ಪರಾರಿ ಆಗಿದ್ದಾರೆ. ಆದರೆ, ಇಬ್ಬರು ಕಾನ್ಸ್​ಟೇಬಲ್​ಗಳು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಕಾನ್​ಸ್ಟೇಬಲ್​ಗಳಾದ ಉಮೇಶ್, ಅನಂತ್ ಸೋಮಶೇಖರ್ ಆರಾಧ್ಯ, ಖರೀದಿದಾರ ಗವಿಗೌಡ, ದಿನೇಶ್ ಸೇರಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Chief Minister's medal: 219 ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಘೋಷಣೆ