MLA Pradeep Eshwar: ಧಾರ್ಮಿಕ ಸಾಮರಸ್ಯವೇ ಬಹುತ್ವ ಭಾರತದ ಹೆಗ್ಗಳಿಕೆ: ಶಾಸಕ ಪ್ರದೀಪ್ ಈಶ್ವರ್ ಅಯ್ಯರ್
2024 ನವೆಂಬರ್ 27ರಂದು ಕಮ್ಮಗುಟ್ಟಹಳ್ಳಿ ಪಂಚಾಯಿತಿಯ ರೇಣು ಮಾಕಲಹಳ್ಳಿ ಗ್ರಾಮದಲ್ಲಿ ನಡೆದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಮಸೀದಿಗೆ ರಸ್ತೆ ಬೇಕು ಎಂದು ಮಾಡಿದ್ದ ಮನವಿಗೆ ಓಗೊಟ್ಟು ರಂಜಾನ್ ಹಬ್ಬದ ದಿನವೇ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ದ್ದೇನೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದರು.

ಚಿಕ್ಕಬಳ್ಳಾಪುರ ತಾಲೂಕು ಕಮ್ಮಗುಟ್ಟಹಳ್ಳಿ ಹಳ್ಳಿ ಪಂಚಾಯಿತಿ ರೇಣು ಮಾಕಲಹಳ್ಳಿ ಗ್ರಾಮದ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಗವಹಿಸಿದ್ದರು.

ರಂಜಾನ್ ಗೆ ರಸ್ತೆ ಉಡುಗೊರೆ : ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ
ಚಿಕ್ಕಬಳ್ಳಾಪುರ: ವಿವಿಧತೆಯಲ್ಲಿ ಏಕತೆ ಕಾಣುವ ಧಾರ್ಮಿಕ ಸಾಮರಸ್ಯವೇ ಬಹುತ್ವ ಭಾರತದ ಹೆಗ್ಗಳಿಕೆಯಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಹೇಳಿದರು. ತಾಲೂಕಿನ ಕಮ್ಮಗುಟ್ಟ ಹಳ್ಳಿ ಪಂಚಾಯಿತಿಯ ರೇಣು ಮಾಕಲಹಳ್ಳಿ ಗ್ರಾಮದ ಈದ್ಗಾ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಸೋಮವಾರ ಮುಸ್ಲಿಂ ಸಹೋ ದರರು ಏರ್ಪಡಿಸಿದ್ದ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಂಜಾನ್ ಹಬ್ಬಕ್ಕೆ ಉಡುಗೊರೆಯಾಗಿ ರೇಣುಮಾಕಲಹಳ್ಳಿ ಮಸೀದಿಗೆ ಹೋಗುವ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಸುತ್ತಿದ್ದೇನೆ.
2024 ನವೆಂಬರ್ 27ರಂದು ಕಮ್ಮಗುಟ್ಟಹಳ್ಳಿ ಪಂಚಾಯಿತಿಯ ರೇಣು ಮಾಕಲಹಳ್ಳಿ ಗ್ರಾಮದಲ್ಲಿ ನಡೆದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಮಸೀದಿಗೆ ರಸ್ತೆ ಬೇಕು ಎಂದು ಮಾಡಿದ್ದ ಮನವಿಗೆ ಓಗೊಟ್ಟು ರಂಜಾನ್ ಹಬ್ಬದ ದಿನವೇ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದರು.
ಇದನ್ನೂ ಓದಿ: Chikkaballapur News: ಶಾಂತಿಯನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿ, ಎಲ್ಲರ ಜೀವನದಲ್ಲಿ ಸುಖ ಶಾಂತಿ ನೆಲೆಸಲಿ
ನನ್ನ ಅವಧಿಯಲ್ಲಿ ಶಾಂತಿ ನೆಮ್ಮದಿ ಸುವ್ಯವಸ್ಥೆಯೊಂದಿಗೆ ಧಾರ್ಮಿಕ ಸಾಮರಸ್ಯವನ್ನು ಕಾಪಾಡಿ ಕೊಂಡು ಹೋಗಲು ಒತ್ತು ನೀಡಲಾಗಿದೆ . ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಅವರಿದ್ದಲ್ಲಿಯೇ ಅವರ ಸಮಸ್ಯೆಗೆ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ .ಇದು ನನ್ನ ಜನರ ಬಗ್ಗೆ ನನಗಿರುವ ಬದ್ಧತೆ ಎಂದರು.
ಭಾರತ ದೇಶದ ಸಾಂಸ್ಕೃತಿಕ ಹೆಗ್ಗಳಿಕೆಯು ಧಾರ್ಮಿಕ ಸಹಿಷ್ಣುತೆ ಮತ್ತು ಕೋಮುಸೌಹಾ ರ್ದತೆಯಲ್ಲಿ ಅಡಗಿದೆ. ಸರ್ವ ಧರ್ಮ ಸಮನ್ವತೆಯನ್ನು ನಮ್ಮ ಸಂವಿಧಾನ ಸಾರಿದೆ. ಭಾರತದ ನೆಲದಲ್ಲಿ ವಾಸ ಮಾಡುವ ಹಿಂದೂ ಮುಸ್ಲಿಂ ಜೈನ, ಕ್ರಿಶ್ಚಿಯನ್, ಬೌದ್ಧ ಪಾರ್ಸಿ ಎಲ್ಲರೂ ನಮ್ಮ ವರೇ ಎಂದರು
ಹಿಂದೂಗಳಿಗೆ ಯುಗಾದಿ ಪ್ರಮುಖ ಹಬ್ಬವಾದರೆ ಮುಸ್ಲಿಂ ಸಮುದಾಯಕ್ಕೆ ರಂಜಾನ್ ಪ್ರಮುಖ ಹಬ್ಬವಾಗಿದೆ.ಕ್ರಿಶ್ಚಿಯನ್ನರಿಗೆ ಕ್ರಿಸ್ಮಸ್ ಸಹಿತ ಹೊಸವರ್ಷ ಪ್ರಧಾನವಾಗಿದೆ. ನಮ್ಮ ಸಂವಿಧಾನವು ಭಾರತೀಯ ನಾಗರೀಕರಿಗೆ ವಿವಿಧತೆಯಲ್ಲಿ ಏಕತೆಯನ್ನು ಬೋಧಿಸಿದೆ. ಇದರಂತೆ ನಡೆಯುವುದು ಭಾರತದ ಪ್ರಜೆಗಳಾದ ನಮ್ಮ ಕರ್ತವ್ಯವಾಗಿದೆ ಎಂದರು.
ರಂಜಾನ್ ಹಬ್ಬದ ದಿನವೇ ನಡೆದ ರಸ್ತೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರುಗಳು,ಹಿಂದೂ ಧರ್ಮದ ಪುರೋಹಿತರು ಭಾಗಿಯಾಗಿ ಪೂಜೆ ಸಲ್ಲಿಸಿದ್ದು ವಿಶೇಷ ವಾಗಿತ್ತು.
ಶಾಸಕರ ಈ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಭಗವಂತ ನಿಮಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ನೀಡಿ ಜನಸೇವೆ ಮಾಡುವ ಅವಕಾಶ ಕಲ್ಪಿಸಲಿ ಎಂದು ಹಾರೈಸಿದರು.
ಈ ವೇಳೆ ಜಮೀರ್, ಮೆಹಬೂಬ್ ,ಮಂಡಿಕಲ್ಲು ಪೆರೇಸಂದ್ರ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಕಮ್ಮಗುಟ್ಟಹಳ್ಳಿ ವೆಂಕಟೇಶ್, ಉಪ್ಪು ಕುಂಟಹಳ್ಳಿ ವೆಂಕಟೇಶ್, ಮಾದನಾಯಕನ ಹಳ್ಳಿ ಮುನಿಯಪ್ಪ, ಯುವ ನಾಯಕ ಶಂಕರ್ ಮತ್ತಿತರರು ಇದ್ದರು.