New Bus: ರೋಡಿಗಿಳಿಯುವುದೇ ಹೊಸ ಬಸ್‌ಗಳು !
ರಾಜ್ಯ ರಸ್ತೆ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಬಳಕೆ ಹೆಚ್ಚಿಸಬೇಕು ಎನ್ನುವ ಬೇಡಿಕೆ ಯಿದ್ದು, ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರವೂ ಸಬ್ಸಿಡಿ ದರದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿ ಸಲು ಅವಕಾಶ ನೀಡುತ್ತಿದೆ. ಆದರೆ ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ಎರಡರಿಂದ ಮೂರು ವರ್ಷಗಳ ಅಗತ್ಯವಿದೆ. ಆದ್ದರಿಂದ ಅಲ್ಲಿಯವರೆಗೆ ಬಸ್ ಗಳ ಸಮಸ್ಯೆಯನ್ನು ಬಗೆಹರಿಸಲು ನೂತನ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ


ಅಪರ್ಣಾ ಎ.ಎಸ್ ಬೆಂಗಳೂರು
ಬಜೆಟ್‌ನಲ್ಲಿ 3500 ಸಾವಿರ ಬಸ್ ಖರೀದಿಗೆ ಪ್ರಸ್ತಾವನೆ?
ಸಾರಿಗೆ ನಿಗಮಗಳ ಆರ್ಥಿಕ ಬಲವರ್ಧನೆಗೆ ಮನವಿ
ರಾಜ್ಯದಲ್ಲಿ ಹೆಚ್ಚುವರಿ ಸರಕಾರಿ ಬಸ್‌ಗಳನ್ನು ಓಡಿಸುವ ಹಾಗೂ ಹಳೇ ಬಸ್‌ಗಳನ್ನು ಗುಜ ರಿಗೆ ಹಾಕಬೇಕೆಂಬ ಬಹುದಿನದ ಬೇಡಿಕೆಗೆ ಪೂರಕವಾಗಿ, ಮುಂದಿನ ಬಜೆಟ್ ನಲ್ಲಿ
ಸರಕಾರ ಘೋಷಣೆ ಮಾಡುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರು ಆರಂಭಿ ಸಿರುವ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರಿಗೆ ಇಲಾಖೆ ಹೆಚ್ಚುವರಿ ಬಸ್‌ಗಳನ್ನು ಖರೀದಿ ಸುವುದಕ್ಕೆ ಹೆಚ್ಚುವರಿ ಅನುದಾನ ನೀಡಬೇಕು ಎನ್ನುವ ಮನವಿಯನ್ನು ಸಲ್ಲಿಸಿದ್ದು, ಜತೆಗೆ ಸುಮಾರು ಮೂರು ಸಾವಿರದಿಂದ 3500 ಬಸ್‌ಗಳನ್ನು ರಾಜ್ಯದ ನಾಲ್ಕು ನಿಗಮಗಳಿಗೆ ಖರೀದಿಸಬೇಕು. ಈಗಿರುವ ಬಸ್‌ಗಳ ಆಯುಷ್ಯ ಮುಗಿದಿರುವುದರಿಂದ ಈ ಬಸ್‌ಗಳನ್ನು ಗುಜರಿಗೆ ಹಾಕಿ, ಹೊಸ ಬಸ್ ಗಳನ್ನು ಖರೀದಿಸುವುದಕ್ಕೆ ಅನುದಾನ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿರುವುದು ಮೂಲ ಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: Bus Service: ತಾರಕ ಗ್ರಾಮದವರೆಗೆ ಬಸ್ ಸಂಚಾರಕ್ಕಾಗಿ ಕೋರಿ ಮನವಿ
ರಾಜ್ಯ ರಸ್ತೆ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಬಳಕೆ ಹೆಚ್ಚಿಸಬೇಕು ಎನ್ನುವ ಬೇಡಿಕೆ ಯಿದ್ದು, ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರವೂ ಸಬ್ಸಿಡಿ ದರದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿಸಲು ಅವಕಾಶ ನೀಡುತ್ತಿದೆ. ಆದರೆ ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ಎರಡರಿಂದ ಮೂರು ವರ್ಷಗಳ ಅಗತ್ಯವಿದೆ. ಆದ್ದರಿಂದ ಅಲ್ಲಿಯವರೆಗೆ ಬಸ್ ಗಳ ಸಮಸ್ಯೆಯನ್ನು ಬಗೆಹರಿಸಲು ನೂತನ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ.
ಸದ್ಯ ನಾಲ್ಕು ನಿಗಮಗಳು ನಷ್ಠದಲ್ಲಿರುವುದರಿಂದ ಸರಕಾರ ಬಜೆಟ್‌ನಲ್ಲಿ ಅನುದಾನ ಘೋಷಿಸಿದರೆ, ನೂತನ ಬಸ್‌ಗಳ ಖರೀದಿಗೆ ಅನುಕೂಲವಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಆರ್ಥಿಕ ಬಲವರ್ಧನೆಗೆ ಮನವಿ: ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳು ದೇಶದಲ್ಲಿಯೇ ಉತ್ತಮ ಸೇವೆ ನೀಡುತ್ತಿರುವ ಸಾರಿಗೆ ನಿಗಮಗಳಾಗಿದ್ದರೂ, ಆರ್ಥಿಕವಾಗಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಅದರಲ್ಲಿಯೂ ಕರೋನಾ ಕಾಲದಲ್ಲಿ ನಿಗಮಗಳನ್ನು ನಡೆಸಲು ಮಾಡಿದ್ದ ಸಾಲದಿಂದಾಗಿ ಇದೀಗ ಬಹುದೊಡ್ಡ ಪ್ರಮಾಣದಲ್ಲಿ ಹೊಡೆತ ಬೀಳುತ್ತಿದೆ. ಇದರ ಜತೆಗೆ ಸಾರಿಗೆ ನೌಕರರ ವೇತನ ಹೆಚ್ಚಳ, ಬಾಕಿ ಹಣ ಬಿಡುಗಡೆ ಮಾಡುವಂತೆ ಹಲವು ತಿಂಗಳಿನಿಂದ ಬೇಡಿಕೆಗಳು ಕೇಳಿಬರುತ್ತಿರುವುದರಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನಾಲ್ಕು ನಿಗಮಗಳಿಗೆ ಆರ್ಥಿಕ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ, ಸಾರಿಗೆ ಇಲಾಖೆ ಮನವಿ ಸಲ್ಲಿಸಿದೆ.
ಅದರ ಲ್ಲಿಯೂ ಪ್ರಮುಖವಾಗಿ ವಾಯವ್ಯ ಸಾರಿಗೆ ನಿಗಮ ಆರ್ಥಿಕವಾಗಿ ತೀವ್ರ ಸಮಸ್ಯೆಗೆ ಗುರಿಯಾಗಿದ್ದು, ಈ ನಿಗಮಕ್ಕೆ ಹೆಚ್ಚುವರಿ ಆರ್ಥಿಕ ನೆರವು ನೀಡಬೇಕು ಎನ್ನುವ ಬೇಡಿಕೆ ಇಡಲಾಗಿದೆ. ಆದರೆ ಈ ಬೇಡಿಕೆಗಳಲ್ಲಿ ಎಷ್ಟು ಬೇಡಿಕೆಗಳಿಗೆ ಆರ್ಥಿಕ ಇಲಾಖೆ ಅನು ಮೋದನೆ ನೀಡಲಿದೆ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1600 ಕೋಟಿ ಬಾಕಿ
ರಾಜ್ಯ ಸರಕಾರ ಆರಂಭಿಸಿರುವ ಗ್ಯಾರಂಟಿ ಯೋಜನೆ ಪೈಕಿ ಶಕ್ತಿ ಯೋಜನೆ ಪ್ರಮುಖ ವಾಗಿದೆ. ಆರಂಭದಲ್ಲಿ ನಿತ್ಯ 80 ರಿಂದ 85 ಲಕ್ಷ ಮಹಿಳೆಯರು ಈ ಯೋಜನೆಯ ಫಲಾನು ಭವಿಗಳಾಗಿರಲಿದ್ದಾರೆ ಎಂದು ಐದು ಸಾವಿರ ಕೋಟಿ ಅನುದಾನವನ್ನು ಹಿಂದಿನ ಬಜೆಟ್ ನಲ್ಲಿ ಮೀಸಲಿಡಲಾಗಿತ್ತು. ಆದರೆ ಇದೀಗ ನಿತ್ಯ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಸರಾಸರಿ ಸಂಚರಿಸುತ್ತಿರುವುದರಿಂದ ಮೊತ್ತ 6600 ಕೋಟಿ ರು.ಗೆ ಏರಿಕೆಯಾಗಿದೆ. ಆದ್ದ ರಿಂದ 1600 ಕೋಟಿ ರು. ಅನುದಾನ ಸರಕಾರದಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಬಿಡು ಗಡೆಯಾಗಬೇಕಿದೆ. ಈ ಸಂಬಂಧ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಶಕ್ತಿ ಯೋಜ ನೆಯ ಸರಾಸರಿ ಖರ್ಚು ಇಷ್ಟೇ ಇರುವುದರಿಂದ, ಮುಂದಿನ ವರ್ಷಕ್ಕೆ ಹೆಚ್ಚುವರಿ ಅನುದಾ ನ ನೀಡುವಂತೆಯೂ ಬೇಡಿಕೆ ಇರಿಸಿದ್ದಾರೆ ಎಂದು ತಿಳಿದುಬಂದಿದೆ.