ಸ್ವದೇಶಿ ನಿರ್ಮಿತ ಸ್ನೋ ಜಾಕೆಟ್‌ಗಳನ್ನು ಮೇಲ್ದರ್ಜೆಗೆ ಏರಿಸಲು ಚಿಂತನೆ
ಸುಧಾರಿತ ಸೂಟ್‌ಗಳು ಈಗಾಗಲೇ ಭಾರತೀಯ ಸೇನೆಯಲ್ಲಿ ಬಳಕೆಯಲ್ಲಿವೆ. ಈ ಸೂಟ್‌ಗಳ ಪ್ರದರ್ಶನವನ್ನು ಏರೋ ಇಂಡಿಯಾದಲ್ಲಿ ಮಾಡಲಾಗಿದೆ. ಆದರೀಗ ಈ ಸೂಟ್‌ನಲ್ಲಿಯೂ ಮತ್ತಷ್ಟು ಸುಧಾರಿಸಿ, ತೂಕವನ್ನು ಮತ್ತಷ್ಟು ತಗ್ಗಿಸುವ ಸಂಶೋಧನೆಗಳು ನಡೆಯುತ್ತಿವೆ ಎನ್ನುವ ಮಾತು ಗಳನ್ನು ಅಧಿಕಾರಿಗಳು ಹೇಳಿದ್ದಾರೆ.
![ಸೈನಿಕರ ಭಾರ ಇಳಿಸಲು ಹಲವು ಸಂಶೋಧನೆ](https://cdn-vishwavani-prod.hindverse.com/media/original_images/Screenshot_2_ok.jpg)
![Profile](https://vishwavani.news/static/img/user.png)
ಅಪರ್ಣಾ ಎ.ಎಸ್. ಬೆಂಗಳೂರು
ಜಾಕೆಟ್ ಭಾರ ಇಳಿಸುವ ಬಗ್ಗೆ ಸಂಶೋಧನೆ
ಮಣಗಟ್ಟಲೇ ಭಾರ ಹೊತ್ತು ಗಡಿಯಲ್ಲಿ ಹೋರಾಡುವ ಸೈನಿಕರ ಮೇಲಿನ ಭಾರವನ್ನು ತಗ್ಗಿಸಲು ಭಾರತೀಯ ರಕ್ಷಣಾ ಪಡೆ ಹತ್ತು ಹಲವು ಸಂಶೋಧನೆ ನಡೆಸುತ್ತಿದ್ದು, ಈಗಾಗಲೇ ತಗ್ಗಿರುವ ಭಾರ ವನ್ನು ತಗ್ಗಿಸುವ ನಿಟ್ಟಿನಲ್ಲಿ ಮಹತ್ವದ ಸಂಶೋಧನೆಗಳು ಶುರುವಾಗಿದೆ.
ಹೌದು, ಶತ್ರುಗಳ ವಿರುದ್ಧ ಹೋರಾಡುವ ವೇಳೆ ಮಣಗಟ್ಟಲೆ ಹೊರೆ ಹೊತ್ತು ಹೋರಾಟ ನಡೆಸುವ ಕಷ್ಟದ ಬಗ್ಗೆ ಅನೇಕ ಸೈನಿಕರು ಅನುಭವ ಹಂಚಿಕೊಂಡಿದ್ದರು. ಅದರಲ್ಲಿಯೂ ವಿಶ್ವದ ಅತಿ ಎತ್ತರ ಯುದ್ಧಭೂಮಿ ಎನಿಸಿರುವ ಸಿಯಾಚಿನ್ ಗ್ಲೇಷಿಯರ್, ಲಡಾಖ್ ಸೇರಿದಂತೆ ತೀರಾ ವಿಪರೀತ ಚಳಿ ಎನಿಸಿರುವ ಪ್ರದೇಶದಲ್ಲಿಯೂ ಭಾರತೀಯ ಭೂಸೇನೆಯ ಸೈನಿಕರು ವರ್ಷವಿಡೀ ಕಾಯಬೇಕು. ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಚಳಿಗಾಲದ ಬಟ್ಟೆ, ಶೂ, ಕನ್ನಡಕ ಸೇರಿದಂತೆ ವಿವಿಧ ವಸ್ತುಗಳನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು.
ಇದನ್ನೂ ಓದಿ: Dr Vijay Darda Column: ಗಾಜಾಪಟ್ಟಿಯಲ್ಲಿ ಟ್ರಂಪ್ ಟವರ್ಸ್ ನಿರ್ಮಾಣ ?
ಆದರೆ ಆಮದು ಮಾಡಿಕೊಳ್ಳಲು ಲಕ್ಷಾಂತರ ರುಪಾಯಿ ಖರ್ಚಾಗುತ್ತಿದ್ದರಿಂದ, ಸ್ವದೇಶಿ ನಿರ್ಮಾ ಣಕ್ಕೆ ಒತ್ತು ನೀಡಲಾಗಿತ್ತು. ಐರೋಪ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಸೂಟ್‌ಗಳು 15ಕೆಜಿಗೂ ಹೆಚ್ಚು ಭಾರವಿರುತ್ತಿತ್ತು. ಇದನ್ನು ಧರಿಸಿಕೊಂಡು, ಕಾರ್ಯನಿರ್ವಹಿಸುವುದು ಭಾರಿ ಸವಾಲಿನ ಕೆಲಸ ಎನ್ನುವ ಆರೋಪಗಳು ಕೇಳಿಬಂದ ಬೆನ್ನಲ್ಲೇ ಸ್ವದೇಶದಲ್ಲಿಯೇ ಈ ಸೂಟ್‌ಗಳನ್ನು ತಯಾರಿಸಲು ಆರಂಭಿಸಲಾಗಿತ್ತು. ಆ ಸಮಯದಲ್ಲಿ ಈ ಸೂಟ್‌ಗಳ ಭಾರವನ್ನು 6ರಿಂದ ಎಂಟು ಕೆ.ಜಿಗೆ ತಗ್ಗಿಸಲಾಗಿತ್ತು. ಆದರೀಗ ಈ ಸೂಟ್‌ಗಳ ಭಾರವನ್ನು ಮತ್ತಷ್ಟು ತಗ್ಗಿಸುವ ಸಂಶೋಧನೆಗಳು ನಡೆಯುತ್ತಿದೆ.
ಸುಧಾರಿತ ಸೂಟ್‌ಗಳು ಈಗಾಗಲೇ ಭಾರತೀಯ ಸೇನೆಯಲ್ಲಿ ಬಳಕೆಯಲ್ಲಿವೆ. ಈ ಸೂಟ್‌ಗಳ ಪ್ರದರ್ಶನವನ್ನು ಏರೋ ಇಂಡಿಯಾದಲ್ಲಿ ಮಾಡಲಾಗಿದೆ. ಆದರೀಗ ಈ ಸೂಟ್‌ನಲ್ಲಿಯೂ ಮತ್ತಷ್ಟು ಸುಧಾರಿಸಿ, ತೂಕವನ್ನು ಮತ್ತಷ್ಟು ತಗ್ಗಿಸುವ ಸಂಶೋಧನೆಗಳು ನಡೆಯುತ್ತಿವೆ ಎನ್ನುವ ಮಾತು ಗಳನ್ನು ಅಧಿಕಾರಿಗಳು ಹೇಳಿದ್ದಾರೆ. ಸದ್ಯವಿರುವ ಸೂಟ್ ನ 5 ಕೆಜಿ ತೂಕವಿರಲಿದ್ದು, ಶೂಗಳು ಒಂದರಿಂದ ಒಂದುವರೆ ಕೆಜಿ ಇರಲಿದೆ. ಆದರೀಗ ಇಡೀ ಶೂಗಳು ಸೇರಿದಂತೆ ಐದು ಕೆ.ಜಿಗೆ ಇಳಿಸುವ ಬಗ್ಗೆ ಸಂಶೋಧನೆ ನಡೆಯುತ್ತಿವೆ ಎನ್ನಲಾಗಿದೆ.
ಬಯೋ ಕೆಮಿಕಲ್ ಸ್ಫೋಟಕ್ಕೂ ಅಂಜಬೇಕಿಲ್ಲ
ಬಯೋ ಕೆಮಿಕಲ್ ಸೋರಿಕೆ, ನ್ಯೂಕ್ಲಿಯರ್ ಸೋರಿಕೆಯಂತಹ ಅನಾಹುತವನ್ನು ತಡೆಯಲು ಹಾಗೂ ನಿಭಾಯಿಸುವ ಸಮಯದಲ್ಲಿ ಸಿಬ್ಬಂದಿಗಳಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಡಿಆರ್‌ಡಿಒ ಸ್ವದೇಶಿ ನಿರ್ಮಿತ ಬಯೋ ಕೆಮಿಕಲ್ ಸೂಟ್ ಒಂದನ್ನು ಸಿದ್ಧಪಡಿಸಿದೆ. ಸುಮಾರು ಎರಡು ಕೆ.ಜಿ. ತೂಕವಿರುವ ಈ ಸೂಟ್ ಯಾವುದೇ ರೀತಿಯ ಸನ್ನಿವೇಶದಲ್ಲಿ ಧರಿಸಿದ ವ್ಯಕ್ತಿಯನ್ನು ಕಾಪಾಡುತ್ತದೆ. ಸುಮಾರು ಆರು ಗಂಟೆಗಳ ಕಾಲ ಈ ಸೂಟ್ ಧರಿಸಿ ಕೆಮಿಕಲ್ ಸೋರಿಕೆಯಿಂದ ಬಚಾವಾಗಬಹುದು ಎನ್ನುವುದು ತಜ್ಞರ ಹೇಳಿಕೆಯಾಗಿದೆ. ಈ ಸೂಟ್ ಅನ್ನು ನೀರು, ಎಣ್ಣೆ ಹಾಗೂ ಬೆಂಕಿಗೆ ಪ್ರತಿರೋಧಕದ ರೀತಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಆಕ್ಟಿವೇಟೆಡ್ ಕಾರ್ಬರ್ ಸಿಯರ್ ಕೋಟ್ ಇರುವುದರಿಂದ ಯಾವುದೇ ರೀತಿಯ ರಾಸಾಯನಿಕ ಸೋರಿಕೆ, ನ್ಯೂಕ್ಲಿಯರ್ ಸೋರಿಕೆಯಿಂದ ವ್ಯಕ್ತಿಯನ್ನು ರಕ್ಷಿಸಲಿದೆ. ಸದ್ಯ ಪರೀಕ್ಷಾರ್ಥ ಸೇವೆಯಲ್ಲಿರುವ ಈ ಸೂಟ್‌ನ ತೂಕ ವನ್ನು ಇನ್ನಷ್ಟು ತಗ್ಗಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ.
ಈಗಿರುವ ಸಿಸ್ಟಂನ ವಿಶೇಷತೆ ಏನು?
೨೦೧೮ರಿಂದ ಸೇನೆಯಲ್ಲಿ ಬಳಕೆಯಲ್ಲಿರುವ ರೆಸಿಸ್ಟೆನ್ಸ್ ಎಕ್ಟ್ರೀಂ ಕ್ಲಾಥಿಂಗ್‌ನಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್‌ನಿಂದ ಹಿಡಿದು ೫೦ ಡಿಗ್ರಿ ತಾಪಮಾನದವರೆಗೆ ಬಳಸಲು ಸಾಧ್ಯವಿದೆ. ಈ ಸೂಟ್‌ನಲ್ಲಿ ವಿವಿಧ ಪದರದಲ್ಲಿ ಬಟ್ಟೆಯಿರುವುದರಿಂದ ಹೆಚ್ಚು ಬಾಳಿಕೆ ಹಾಗೂ ವಿವಿಧ ತಾಪಮಾನದಲ್ಲಿ ಬಳಕೆಗೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.