ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Veera Chandrahasa: ರವಿ ಬಸ್ರೂರು ನಿರ್ದೇಶನದ ʼವೀರ ಚಂದ್ರಹಾಸʼ ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ಸಿಎಂ

Veera Chandrahasa: ವೀರ ಚಂದ್ರಹಾಸ ಟ್ರೇಲರ್ ರಿಲೀಸ್‌ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಸಿನಿಮಾ ಯಶಸ್ವಿ ಕಾಣುತ್ತದೆ. ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು. ನಿಮ್ಮ ಚಿತ್ರ ತಂಡಕ್ಕೆ ಶುಭಾಶಯಗಳು‌ ಎಂದು ಹಾರೈಸಿದ್ದಾರೆ. ಏಪ್ರಿಲ್‌ 18ರಂದು ವೀರ ಚಂದ್ರಹಾಸ ಚಿತ್ರ ಬಿಡುಗಡೆಯಾಗಲಿದೆ.

ʼವೀರ ಚಂದ್ರಹಾಸʼ ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ಸಿಎಂ

Profile Prabhakara R Apr 5, 2025 8:29 PM

ಬೆಂಗಳೂರು: ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ ʼವೀರ ಚಂದ್ರಹಾಸʼ (Veera Chandrahasa) ಸಿನಿಮಾದ ಟ್ರೇಲರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಬಿಡುಗಡೆಗೊಳಿಸಿದರು. ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ತಮಿಳು, ಮಲಯಾಳಂ, ಕನ್ನಡ ಸೇರಿ ಬಹುಭಾಷೆಗಳ ಸಿನಿಮಾಗಳಲ್ಲಿ ಕಲಾ ಸಾಮರ್ಥ್ಯ ಪ್ರದರ್ಶಿಸಿ ಜನಮೆಚ್ಚುಗೆ ಗಳಿಸಿದ್ದೀರಿ. ಈ ಸಿನಿಮಾ ಕೂಡ ಯಶಸ್ವಿ ಕಾಣುತ್ತದೆ. ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು. ನಿಮ್ಮ ಚಿತ್ರ ತಂಡಕ್ಕೆ ಶುಭಾಶಯಗಳು‌ ಎಂದು ಹಾರೈಸಿದ್ದಾರೆ.

ಈ ವೇಳೆ ಮುಖ್ಯಮಂತ್ರಿಗಳ ಆಶೀರ್ವಾದ ಪಡೆದ ರವಿ ಬಸ್ರೂರು ತಂಡ, ಅವರನ್ನು ಸಿನಿಮಾ ವೀಕ್ಷಣೆಗೆ ಬರಬೇಕು ಎಂದು ಆಹ್ವಾನಿಸಿದರು. ಇದಕ್ಕೆ ಬರುತ್ತೇನೆ ಎಂದು ಆಶ್ವಾಸನೆ ನೀಡಿದ ಮುಖ್ಯಮಂತ್ರಿಗಳು, ಸಿನಿಮಾ ತಂಡಕ್ಕೆ ಮತ್ತೊಮ್ಮೆ ಶುಭ ಹಾರೈಸಿದರು.

Veera Chandrahasa (1)

ತೆರೆ ಮೇಲೆ ಯಕ್ಷಗಾನ ವೈಭವ

ಯಕ್ಷಗಾನ ವೈಭವವನ್ನು ತೆರೆ ಮೇಲೆ ತರಬೇಕು ಎಂಬ ಉದ್ದೇಶದಿಂದ ನಿರ್ದೇಶಕ ರವಿ ಬಸ್ರೂರು ಹಾಗೂ ತಂಡ ‘ವೀರ ಚಂದ್ರಹಾಸ’ ಸಿನಿಮಾವನ್ನು ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಯಕ್ಷಗಾನ ಕಲೆಯನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿರುವುದು ವಿಶೇಷ. ಮತ್ತೊಂದು ವಿಶೇಷವೆಂದರೆ, ಈ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್‌ ಅವರು ಒಂದು ಮುಖ್ಯ ಪಾತ್ರ ಮಾಡಿದ್ದಾರೆ.

'ವೀರ ಚಂದ್ರಹಾಸ' ಸಿನಿಮಾದಲ್ಲಿ ಶಿವಣ್ಣನೇ ಹೀರೋ ಆಗಿ ನಟಿಸಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆ ಅದು ಸಾಧ್ಯವಾಗಿಲ್ಲ. ಇದೀಗ ಚಿತ್ರದಲ್ಲಿ ಚಂದ್ರಹಾಸ ರಾಜನ ನೆರೆ ರಾಜ್ಯದ ರಾಜನ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಅವರು ಕೂಡ ಯಕ್ಷಗಾನ ವೇಷದಲ್ಲೇ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. 'ವೀರ ಚಂದ್ರಹಾಸ' ಸಿನಿಮಾದಲ್ಲಿ 400ಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ. ಮುಖ್ಯವಾಗಿ ಎಲ್ಲಾ ಯಕ್ಷಗಾನ ಕಲಾವಿದರು ಇದರಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ | Coolie Movie: ಸೂಪರ್​ ಸ್ಟಾರ್ ರಜನಿಕಾಂತ್‌ ಅಭಿಮಾನಿಗಳಿಗೆ ಗುಡ್​ನ್ಯೂಸ್; ʼಕೂಲಿ' ಚಿತ್ರದ ರಿಲೀಸ್ ಡೇಟ್ ಅನೌನ್ಸ್

ವೀರ ಚಂದ್ರಹಾಸ ಚಿತ್ರದಲ್ಲಿ ಚಂದನ್ ಶೆಟ್ಟಿ



ರವಿ ಬಸ್ರೂರು ನಿರ್ದೇಶನದ ವೀರ ಚಂದ್ರಹಾಸ ಚಿತ್ರದಲ್ಲಿ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಅಭಿನಯಿಸಿದ್ದಾರೆ. ರಾಜ ಸಮುದ್ರ ಸೇನನಾಗಿ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಇವರ ಪಾತ್ರದ ಪೋಸ್ಟರ್‌ ಅನ್ನು ಚಿತ್ರತಂಡ ರಿಲೀಸ್‌ ಮಾಡಿತ್ತು. ರಾಜ ಸಮುದ್ರ ಸೇನನ ಪಾತ್ರದಲ್ಲಿ ಚಂದನ್ ಶೆಟ್ಟಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಚಿತ್ರದ ಡೈರೆಕ್ಟರ್ ರವಿ ಬಸ್ರೂರು ಚಿತ್ರದ ಒಂದೊಂದೇ ಪಾತ್ರದ ಪೋಸ್ಟರ್‌ಗಳನ್ನೂ ರಿವೀಲ್ ಮಾಡುತ್ತಿದ್ದಾರೆ. ಏಪ್ರಿಲ್‌ 18ರಂದು ಈ ಚಿತ್ರ ಬಿಡುಗಡೆಯಾಗಲಿದೆ.