ಸದ್ಯದಲ್ಲೇ ಎಣ್ಣೆ ದರ ಹೆಚ್ಚಳ: ರಾಜ್ಯದಲ್ಲಿ ಮದ್ಯ ಕೊರತೆ, ಬೇಡಿಕೆಯಷ್ಟು ಪೂರೈಕೆಯಿಲ್ಲ
ರಾಜ್ಯದಲ್ಲಿ 3988 ವೈನ್‌ಶಾಪ್ (ಸಿಎಲ್2), 279 ಕ್ಲಬ್(ಸಿಎಲ್4), 78 ಸ್ಟಾರ್ ಹೋಟೆಲ್ (ಸಿಎಲ್6ಎ), 2382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್೮), 3634 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9), 1041 ಎಂಎಸ್ ಐಎಲ್ (ಸಿಎಲ್11ಸಿ) ಮತ್ತು 745 ಆರ್‌ವಿಬಿ ಸೇರಿ ಒಟ್ಟು 12618 ಮದ್ಯ ದಂಗಡಿಗಳಿವೆ


ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆಯ ದುಬಾರಿ ದುನಿಯಾ ನಡೆಯುತ್ತಿರುವಾಗಲೇ ಆರ್ಥಿಕ ಸಂಪನ್ಮೂಲ ಕ್ರೊಢೀಕರಣಕ್ಕಾಗಿ ಶೀಘ್ರದ ಕಡಿಮೆ ದರದ ಮದ್ಯಗಳ ದರ ಹೆಚ್ಚಿ ಸಲು ರಾಜ್ಯ ಸರಕಾರ ಮುಂದಾಗಿದ್ದು, ಮದ್ಯಪ್ರಿಯರ ‘ಮತ್ತು’ ಇಳಿಸುವ ಕಹಿ ಸೂಚನೆ ಸಿಕ್ಕಿದೆ. ಒರಿಜನಲ್ ಚಾಯ್ಸ್, ಹೈವಾರ್ಡ್ಸ್, ರಾಜಾ ವಿಸ್ಕಿ, ಒಟಿ ಸೇರಿ ಇತರೆ ಕಡಿಮೆ ದರದ ಮದ್ಯ ಬಾಟಲ್ ಗಳ ಮೇಲೆ 10 ರಿಂದ 20 ರು. ಹೆಚ್ಚಳವಾಗಲಿದ್ದು ಈ ಬಗ್ಗೆ ಸದ್ಯದ ಅಬಕಾರಿ ಇಲಾಖೆಯು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ 3988 ವೈನ್‌ಶಾಪ್ (ಸಿಎಲ್೨), 279 ಕ್ಲಬ್(ಸಿಎಲ್೪), 78 ಸ್ಟಾರ್ ಹೋಟೆಲ್ (ಸಿಎಲ್೬ಎ), 2382 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್೭), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್೮), 3634 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್೯), 1041 ಎಂಎಸ್ ಐಎಲ್ (ಸಿಎಲ್11ಸಿ) ಮತ್ತು 745 ಆರ್‌ವಿಬಿ ಸೇರಿ ಒಟ್ಟು 12618 ಮದ್ಯ ದಂಗಡಿಗಳಿವೆ. ನಿತ್ಯ ಮದ್ಯ ಮಾರಾಟ ದಿಂದಾಗಿ 6570 ಕೋಟಿ ರು. ಇಲಾಖೆ ಮೂಲಕ ಸರಕಾರಕ್ಕೆ ಆದಾಯ ಬರುತ್ತಿದೆ. 2024-25ನೇ ಸಾಲಿನಲ್ಲಿ ಇಲಾಖೆಗೆ 36500 ಕೋಟಿ ರು. ರಾಜಸ್ವ ಸಂಗ್ರಹ ನಿಗದಿಪಡಿಸ ಲಾಗಿತ್ತು.
ಸತತ ಮದ್ಯ ದರ ಏರಿಕೆ: ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಎರಡು ವರ್ಷಗಳಲ್ಲಿ 4ನೇ ಬಾರಿ ಬಿಯರ್, 2 ಬಾರಿ ಇಂಡಿಯನ್ ಮೇಡ್ (ಐಎಂಎಲ್ ಲಿಕ್ಕರ್) ದರ ಹೆಚ್ಚಿಸಲಾಗಿದೆ. ಜತೆಗೆ, ಪ್ರೀಮಿಯಂ ಮದ್ಯದ ದರ ಇಳಿಸಲಾಗಿತ್ತು. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ, ಐಎಂಎಲ್ ಮೇಲೆ ಶೇ.20, ಬಿಯರ್ ಮೇಲೆ ಶೇ.10 ಅಬಕಾರಿ ಶುಂಕ ಹೆಚ್ಚಿಸಿದ್ದರು.
ಇದಕ್ಕೂ ಮುನ್ನ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಶೇ.10ರಷ್ಟು ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು. ಇದೀಗ ಚೀಪ್ ಲಿಕ್ಕರ್‌ಗಳ ದರ ಹೆಚ್ಚಿಸಲು ಸರಕಾರ ತಯಾರಿ ಮಾಡಿಕೊಂಡಿದೆ. ಅಲ್ಲದೆ, ಪ್ರೀಮಿಯಂ ಮದ್ಯದ ಬೆಲೆಯನ್ನು ನೆರೆಯ ರಾಜ್ಯಗಳಲ್ಲಿ ವಿಧಿಸುತ್ತಿರುವ ಬೆಲೆಗಳಿಗೆ ಅನುಸಾರವಾಗಿ ಪರಿಷ ರಿಸುವ ದರೊಂದಿಗೆ ಅಬಕಾರಿ ಸ್ಲ್ಯಾಬಗಳನ್ನು ಸರಕಾರ ತರ್ಕಬದ್ಧಗೊಳಿಸಿದೆ. 2025-26ರಲ್ಲಿ ಅಬಕಾರಿ ಸ್ಲ್ಯಾಬ್ ತರ್ಕಬದ್ಧಗೊಳಿಸುವ ಪ್ರಕ್ರಿಯೆ ಮುಂದುವರಿಸು ವುದಾಗಿ ಸರಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ.
ನೆರೆಯ ರಾಜ್ಯದಿಂದ 1500 ಕೋಟಿ ರು. ನಷ್ಟ: ಆಂಧ್ರ, ತೆಲಂಗಾಣದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗಡಿಭಾಗಕ್ಕೆ ಬಂದು ಮದ್ಯ ಸೇವಿಸುತ್ತಿದ್ದ ಪರಿಣಾಮ ಸರಕಾರಕ್ಕೆ ನೂರಾರು ಕೋಟಿ ರು. ಆದಾಯ ಬರುತ್ತಿತ್ತು. ಆದರೆ, ಆಂಧ್ರ ಸರಕಾರ, ತನ್ನ ರಾಜ್ಯದಲ್ಲಿ ಮದ್ಯ ದರ ಇಳಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಗಡಿಭಾಗದ ಜನರು ಆಂಧ್ರದಲ್ಲೇ ಮದ್ಯ ಸೇವಿಸುತ್ತಿದ್ದಾರೆ. ಈ ಕಾರಣದಿಂದ 1500 ಕೋಟಿ ರು. ಆದಾಯ ನಷ್ಟವಾಗಿದೆ.
ಅರ್ಧಕ್ಕರ್ಧ ಕಡಿಮೆ ಪೂರೈಕೆ
ಬಿಯರ್ ಮತ್ತು ಐಎಂಎಲ್ ಲಿಕ್ಕರ್‌ಗಳ ದರವನ್ನು ಇಲಾಖೆ ಸತತ ಹೆಚ್ಚಿಸುತ್ತಿದೆ. ಆದರೆ, ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ಮದ್ಯ ಪೂರೈಕೆಯಾಗುತ್ತಿಲ್ಲ. ಇದರಿಂದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಮರ್ಪಕವಾಗಿ ಕಡಿಮೆ ದರದ ಮದ್ಯ ಪೂರೈಕೆಯಾಗದ ಹಿನ್ನೆಲೆಯಲ್ಲಿ ಮಾಲೀಕರಿಂದ ಸರಕಾರಕ್ಕೆ ಬರಬೇಕಿದ್ದ ಆದಾಯದಲ್ಲಿಯೂ ನಷ್ಟ ವಾಗುತ್ತಿದೆ. 10 ಲಕ್ಷ ರು. ಮೌಲ್ಯದ ಮದ್ಯ ನೀಡುವಂತೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್‌ಬಿಸಿಎಲ್) ಇಂಡೆಂಡ್ ಕಳುಹಿಸಿದರೆ 5 ಲಕ್ಷ ರು. ಮೌಲ್ಯದ ಮಾತ್ರ ಮದ್ಯ ಪೂರೈಕೆಯಾಗುತ್ತಿದೆ.
*
ಮದ್ಯ ಕೊರತೆಯಿಂದ ಸರಕಾರಕ್ಕೆ ಆದಾಯ ನಷ್ಟ
40 ಸಾವಿರ ಕೋಟಿ ರು.ಆದಾಯ ಸಂಗ್ರಹ ಗುರಿ
ನಿಗದಿಪಡಿಸಿದ್ದ ಗುರಿ ಮುಟ್ಟಲು ದರ ಏರಿಕೆ