ತಹಶೀಲ್ದಾರ್‌ರಿಂದ ಮೈಕ್ರೋ ಫೈನಾನ್ಸ್ ಮತ್ತು ಕಿರು ಸಾಲ ನೀಡುವ ಸಂಸ್ಥೆಗಳ ಪ್ರತಿನಿಧಿಗಳ ಸಭೆ
ಮೈಕ್ರೋ ಫೈನಾನ್ಸ್ನ ವರು, ಧರ್ಮಸ್ಥಳ ಸಂಘದವರು ದೇವರ ಹೆಸರಿನಲ್ಲಿ ಹಣಕಾಸಿನ ದಂಧೆ ಮಾಡುತ್ತಿದ್ದಾರೆ. ಸಾಲ ಪಡೆದವರಿಗೆ ಯಾವುದೇ ಪಾಸ್‌ಬುಕ್ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು ಮೈಕ್ರೋ ಪೈನಾನ್ಸ್ ನಡೆಸುವವರು ಆರ್ ಬಿ ಐ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮನಬಂದಂತೆ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಇದರಿಂದಾಗಿ ಸಾಲ ಪಡೆದು ಕೊಂಡವರ ಬದುಕು ಮೂರಾಬಟ್ಟೆಯಾಗಿದೆ
![Micro](https://cdn-vishwavani-prod.hindverse.com/media/images/Micro.max-1280x720.jpg)
![Profile](https://vishwavani.news/static/img/user.png)
ಗೌರಿಬಿದನೂರು: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಕಿರು ಸಾಲ ನೀಡುವ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಯೋಜಿಸ ಲಾಗಿದ್ದು ಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಸಾಲ ಪಡೆದವರಿಂದ ದೂರುಗಳ ಸುರಿಮಳೆಯೇ ಹರಿದು ಬಂತು.
ಮೈಕ್ರೋ ಫೈನಾನ್ಸ್ನವರು ಸಾಲವನ್ನು ನೀಡುವಾಗ ತೋರುವ ಕಾಳಜಿ, ವಿನಯ, ಸೌಜನ್ಯ, ಸಾಲ ವನ್ನು ವಸೂಲಿ ಮಾಡುವಾಗ ದೌರ್ಜನ್ಯದಿಂದ ವರ್ತಿಸುತ್ತಾರೆ. ಮನೆಯ ಮುಂದೆ ಸಾಲದ ಕಂತು ನೀಡುವವರೆಗೂ ಹೋಗುವುದಿಲ್ಲ. ಅದರಲ್ಲೂ ಹೆಚ್ಚಿನ ಬಡ್ಡಿ, ಮಾನವೀಯತೆ ಮರೆತು ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Micro Finanace Torture: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಒಂದೇ ದಿನ ನಾಲ್ವರು ಬಲಿ
ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಸಿದ್ದಗಂಗಪ್ಪ ಮಾತನಾಡಿ, ಮೈಕ್ರೋ ಫೈನಾನ್ಸ್ನ ವರು, ಧರ್ಮಸ್ಥಳ ಸಂಘದವರು ದೇವರ ಹೆಸರಿನಲ್ಲಿ ಹಣಕಾಸಿನ ದಂಧೆ ಮಾಡುತ್ತಿದ್ದಾರೆ. ಸಾಲ ಪಡೆದವರಿಗೆ ಯಾವುದೇ ಪಾಸ್‌ಬುಕ್ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು ಮೈಕ್ರೋ ಪೈನಾನ್ಸ್ ನಡೆಸುವವರು ಆರ್ ಬಿ ಐ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮನಬಂದಂತೆ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಇದರಿಂದಾಗಿ ಸಾಲ ಪಡೆದುಕೊಂಡವರ ಬದುಕು ಮೂರಾಬಟ್ಟೆಯಾಗಿದೆ. ವಿಮೆ ಹೆಸರಿನಲ್ಲಿ ಸಾವಿರಾರು ರೂಗಳ ವಸೂಲಾತಿ ಮಾಡು ತ್ತಿದ್ದಾರೆ. ಆದರೆ ಯಾವುದೇ ವಿಮೆ ಸೌಲಭ್ಯವನ್ನು ಮಾಡಿಸಿರುವುದಿಲ್ಲ ಎಂದು ಆರೋಪಿಸಿದ ಅವರು ಈ ನಿಟ್ಟಿನಲ್ಲಿ ಸರಕಾರ ಋಣ ಮುಕ್ತ ಕಾಯಿದೆಯನ್ನು ಜಾರಿ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.
ಸಾಲ ಪಡೆದವರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳ ಮಾತುಗಳನ್ನು ಆಲಿಸಿದ ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ ಮೈಕ್ರೋ ಫೈನಾನ್ಸ್ ನವರ ಕಾರ್ಯವೈಖರಿಯನ್ನು ಖಂಡಿಸಿ ಮೈಕ್ರೋ ಫೈನಾನ್ಸ್ ನವರು ಆರ್,ಬಿ,ಐ ನಿಯಮಾನುಸಾರವಾಗಿ ವ್ಯವಹಾರವನ್ನು ಮಾಡ ಬೇಕು, ಸಾಲವನ್ನು ,ನೀಡಿ ವಸೂಲಾತಿಯಲ್ಲಿ ಕಿರುಕುಳ ದೌರ್ಜನ್ಯವನ್ನು ಮಾಡುವುದು ಕಾನೂನು ರೀತ್ಯ ಅಪರಾಧವಾಗಿದೆ. ಬೆಳಿಗ್ಗೆ ೯ ಗಂಟೆಯಿAದ ಸಂಜೆ ೬ ಗಂಟೆಯೊಳಗೆ ಸಾಲ ವಸೂಲಾತಿಯನ್ನು ಮಾಡಬೇಕು.ಸಾಲಗಾರಿಗೆ ವಿನಾಕಾರಣ ಕಿರುಕುಳವನ್ನು ಮಾಡುವಂತಿಲ್ಲ. ಸಾಲ ಪಡೆದವರು ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದಲ್ಲಿ ಕಾನೂನು ರೀತ್ಯಾ ಕ್ರಮವನ್ನು ತೆಗೆದುಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಸಹಕಾರ ಸಂಘದ ಅಧ್ಯಕ್ಷ ಶಂಕರ್ ಮಾತನಾಡಿ, ಸೌಜನ್ಯದಿಂದ ಸಾಲವನ್ನು ವಸೂಲಾತಿ ಮಾಡಬೇಕು. ಸಾಲ ನೀಡಿದಕ್ಕೆ ಸಾಲಗಾರರಿಗೆ ಕಿರುಕುಳ ನೀಡಬಾರದು. ಮನೆಯ ಮುಂದೆ ದೌರ್ಜನ್ಯ ಮಾಡುವುದು ಕಾನೂನು ರೀತ್ಯ ಅಪರಾದವಾಗಿದೆ. ಆಲ್ಬಐ ಪರವಾನಿಗೆಯನ್ನು ಪಡೆದು ವ್ಯವಹಾರ ಮಾಡಿದಲ್ಲಿ ಅಂತಹ ಸಂಸ್ಥೆಯನ್ನು ಮುಟ್ಟುಗೋಲು ಹಾಕಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ನಗರಠಾಣೆಯ ಪಿಎಸ್‌ಐ ಗೋಪಾಲ್,ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ, ಸಿಸಿ ಅಶ್ವತ್ಥಪ್ಪ,ಆರ್ ಎನ್ ರಾಜು,ಹೀರೇಬಿದನೂರು ರಾಜಣ್ಣ ಹಾಗೂ ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.