Agra Murder: ಕಂಬಳಿಯಲ್ಲಿ ಸಿಕ್ತು ತಾಯಿ ಮಗಳ ಕೊಳೆತ ಶವ!
ಆಗ್ರಾದ ಜಗದೀಶಪುರದಲ್ಲಿ ಬೀಗ ಹಾಕಿದ ಮನೆಯೊಳಗೆ ಮಹಿಳೆ (40) ಮತ್ತು ಆಕೆಯ ಮಗಳು (9) ಅವರ ಕೊಳೆತ ಶವಗಳು ಕಂಬಳಿಯಲ್ಲಿ ಸುತ್ತಿ ಪತ್ತೆಯಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಪತ್ತೆಯಾಗಿರುವ ಮೃತದೇಹಗಳು ಸುಮಾರು ನಾಲ್ಕರಿಂದ ಐದು ದಿನಗಳಷ್ಟು ಹಳೆಯದಾಗಿರಬಹುದು ಎಂದು ಊಹಿಸಲಾಗಿದೆ.


ಲಖನೌ: ಆಗ್ರಾದ ಜಗದೀಶಪುರದಲ್ಲಿ ಬೀಗ ಹಾಕಿದ ಮನೆಯೊಳಗೆ ಮಹಿಳೆ (40) ಮತ್ತು ಆಕೆಯ ಮಗಳು (9) ಅವರ ಕೊಳೆತ ಶವಗಳು ಕಂಬಳಿಯಲ್ಲಿ ಸುತ್ತಿ ಪತ್ತೆಯಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ (Agra Murder) ರಾತ್ರಿ ಪತ್ತೆಯಾಗಿರುವ ಮೃತದೇಹಗಳು ಸುಮಾರು ನಾಲ್ಕರಿಂದ ಐದು ದಿನಗಳಷ್ಟು ಹಳೆಯದಾಗಿರಬಹುದು ಎಂದು ಊಹಿಸಲಾಗಿದೆ. ಮನೆಯಿಂದ ಬರುತ್ತಿದ್ದ ದುರ್ವಾಸನೆಯನ್ನು ಗಮನಿಸಿ ನೆರೆಹೊರೆಯವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ, ಕೋಣೆಯೊಳಗೆ ಶಬೀನಾ ಮತ್ತು ಅವರ ಮಗಳು ಇನಾಯಾ ಅವರ ಶವಗಳು ಪತ್ತೆಯಾಗಿವೆ.
ಶಬೀನಾ ಮತ್ತು ಅವರ ಮಗಳು ಇನಾಯಾ ಮೃತಪಟ್ಟಿರುವುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಲೋಹಮಂಡಿ) ಮಾಯಾಂಕ್ ತಿವಾರಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಬೀನಾ ರಶೀದ್ ಅವರನ್ನು ಮದುವೆಯಾಗಿದ್ದು, ಪ್ರಸ್ತುತ ಆತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. "ರಶೀದ್ ಪರಾರಿಯಾಗುವ ಮೊದಲು ತನ್ನ ಪತ್ನಿ ಮತ್ತು ಮಲ ಮಗಳನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ . ಶಬೀನಾಳನ್ನು ಎರಡನೇ ಪತ್ನಿಯಾಗಿ ಮದುವೆಯಾಗಿದ್ದ" ಎಂದು ಎಸಿಪಿ ತಿವಾರಿ ಹೇಳಿದ್ದು, ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಜೋಡಿ ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.
ಈ ಸುದ್ದಿಯನ್ನೂ ಓದಿ: Belagavi Murder: ಗಂಡನ ಹತ್ಯೆಯನ್ನು ವಿಡಿಯೊ ಕಾಲ್‌ನಲ್ಲಿ ನೋಡಿ ಖುಷಿಪಟ್ಟ ಹೆಂಡತಿ!
ಪತಿಯೊಬ್ಬ ಪತ್ನಿಯನ್ನು ಬೀದಿಯಲ್ಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಿರುಪಾಳ್ಯ ಮೂಲದ ಗಂಗಾ (27) ಕೊಲೆಯಾದ ಪತ್ನಿ. ಮೋಹನ್ ರಾಜ್ ಕೊಲೆ ಮಾಡಿದ ಪತಿ. ದಂಪತಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಮಾತಿನ ಭರಾಟೆ ಜೋರಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಇರಿತಕ್ಕೊಳಗಾದ ಗಂಗಾಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿಲಾಗಿತ್ತು. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹೆಬ್ಬಗೋಡಿ ಪೊಲೀಸರು, ಪರಿಶೀಲನೆ ನಡೆಸಿ ಆರೋಪಿ ಮೋಹನ್ ರಾಜ್ನನ್ನು ವಶಕ್ಕೆ ಪಡೆದಿದ್ದಾರೆ.